ಬಿಹಾರ ಚುನಾವಣೆಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕೋಟಿಗಟ್ಟಲೆ ವಸೂಲಿ : ಬಿಜೆಪಿ ಆರೋಪ

ಮಂತ್ರಿಗಿರಿಗಾಗಿ ಹೈಕಮಾಂಡ್‌ಗೆ 300 ಕೋ. ರೂ. ಕೊಡಲು ಒಪ್ಪಿದ್ದ ಕಳಂಕಿತ ಶಾಸಕ ವೀರೇಂದ್ರ ಪಪ್ಪಿ ಬೆಂಗಳೂರು: ಬಿಹಾರ ಚುನಾವಣೆಗೆ ಹಣ ಸಂಗ್ರಹಿಸಲು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಆರೋಪಿಸಿವೆ. ಬೆಟ್ಟಿಂಗ್‌ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಬಿಹಾರ ಚುನಾವಣೆಗಾಗಿ ಕಾಂಗ್ರೆಸ್‌ ಹೈಕಮಾಂಡ್‌ಗೆ 300 ಕೋಟಿ ರೂ. ಕೊಟ್ಟು ಮಂತ್ರಿ ಸ್ಥಾನಗಿಟ್ಟಿಸಲು ಪ್ರಯತ್ನಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್‌ […]

ಬಿಹಾರ ಚುನಾವಣೆಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕೋಟಿಗಟ್ಟಲೆ ವಸೂಲಿ : ಬಿಜೆಪಿ ಆರೋಪ Read More »

ತಂಗಿಯ ಮರ್ಯಾದೆ ಹತ್ಯೆ ಮಾಡಿದ ಸಹೋದರರಿಗೆ ಗಲ್ಲು ಶಿಕ್ಷೆ

ದಲಿತ ಯುವಕನನನ್ನು ಮದುವೆಯಾದದ್ದಕ್ಕೆ ತುಂಬು ಗರ್ಭಿಣಿ ತಂಗಿಯನ್ನು ಜೀವಂತ ದಹಿಸಿದ್ದ ಸಹೋದರರು ಬೆಂಗಳೂರು : ದಲಿತ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದ ಸಹೋದರಿಯನ್ನು ಜೀವಂತ ಸುಟ್ಟುಕೊಂದಿದ್ದ ವಿಜಯಪುರದ ಮರ್ಯಾದ ಹತ್ಯೆ ಪ್ರಕರಣದ ಇಬ್ಬರು ಸಹೋದರರಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮರ್ಯಾದೆ ಹತ್ಯೆಗೈದ ಇಬ್ಬರು ಸಹೋದರರಿಗೆ ಮರಣದಂಡನೆ, ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ

ತಂಗಿಯ ಮರ್ಯಾದೆ ಹತ್ಯೆ ಮಾಡಿದ ಸಹೋದರರಿಗೆ ಗಲ್ಲು ಶಿಕ್ಷೆ Read More »

ನೋಬೆಲ್‌ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸಿದ ಮಚಾಡೊ

ನನಗೇ ಕೊಡಬೇಕೆಂದು ಹೇಳಿರಲಿಲ್ಲ ಎಂಬುದಾಗಿ ಉಲ್ಟಾ ಹೊಡೆದ ಟ್ರಂಪ್‌ ವಾಷಿಂಗ್ಟನ್‌: ಹಲವು ಯುದ್ಧ ನಿಲ್ಲಿಸಿದ್ದೇನೆ, ಈ ಸಲದ ಶಾಂತಿ ನೋಬೆಲ್‌ ಪ್ರಶಸ್ತಿ ನನಗೆ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಾತಿಗೆ ನೋಬೆಲ್‌ ಕಮಿಟಿ ಕ್ಯಾರೇ ಮಾಡಿಲ್ಲ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರಿಗೆ ನೋಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ನೋಬೆಲ್‌ ಸಿಕ್ಕಿಲ್ಲ ಎಂಬ ನಿರಾಶೆಯ ನಡುವೆಯೂ ಟ್ರಂಪ್‌ಗೆ ತುಸು ಸಮಾಧಾನ ಕೊಡುವ ಹೇಳಿಕೆಯೊಂದನ್ನು ಮಚಾಡೊ ನೀಡಿದ್ದಾರೆ. ತನಗೆ

ನೋಬೆಲ್‌ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸಿದ ಮಚಾಡೊ Read More »

ಬಾಲಕನಿಗೆ ಲೈಂಗಿಕ ಕಿರುಕುಳ : ಆರೋಪಿ ವಿರುದ್ಧ ಪೋಕ್ಸೊ ಕೇಸ್‌

ಬೀಚ್‌ಗೆ ತಿರುಗಾಡಲು ಬಂದಿದ್ದ ಬಾಲಕನಿಗೆ ಕಿರುಕುಳ ಉಡುಪಿ: ಕಾಪು ಬೀಚ್‌ನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿದೆ. ಮೈಸೂರಿನಿಂದ ಮಗನ ಜೊತೆ ಪ್ರವಾಸ ಬಂದಿದ್ದ ದಂಪತಿ ಕಾಪು ಬೀಚ್‌ನಲ್ಲಿ ತಿರುಗಾಡುತ್ತಿದ್ದಾಗ ಶೌಕತ್‌ ಅಲಿ (47) ಎಂಬಾತ ಶೌಚಾಲಯದ ಬಳಿ ಬಾಲಕನನ್ನು ಹಿಡಿದು ಚುಂಬಿಸಿ ಕಿರುಕುಳ ನೀಡಿದ್ದ. ಇದನ್ನು ನೋಡಿ ಬಾಲಕನ ತಂದೆ ಬೊಬ್ಬೆ ಹಾಕಿದ್ದು, ಆಗ ಆರೋಪಿ ಸ್ಥಳದಿಂದ ಪಲಾಯನ ಮಾಡಲು ಯತ್ನಿಸಿದ್ದ. ಆದರೆ ಬೀಚ್‌ನಲ್ಲಿ ಗಸ್ತು ನಿರತ ಪೊಲೀಸರು ಮತ್ತು

ಬಾಲಕನಿಗೆ ಲೈಂಗಿಕ ಕಿರುಕುಳ : ಆರೋಪಿ ವಿರುದ್ಧ ಪೋಕ್ಸೊ ಕೇಸ್‌ Read More »

ರಾಜಕೀಯ ಪಡಸಾಲೆಯಲ್ಲಿ ಸಿದ್ದರಾಮಯ್ಯ ಡಿನ್ನರ್‌ ಮೀಟ್‌ ಸಂಚಲನ

ಕುತೂಹಲ ಕೆರಳಿಸಿದ ಅಕ್ಟೋಬರ್‌ 13ರಂದು ಕರೆದ ಔತಣ ಕೂಟ ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಮತ್ತೆ ಬಿರುಸಿನ ಚರ್ಚೆ ನಡೆಯುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್‌ 13ರಂದು ತನ್ನ ಸಂಪುಟದ ಕೆಲವು ಸಹೋದ್ಯೋಗಿಗಳಿಗಾಗಿ ಏರ್ಪಡಿಸಿರುವ ಔತಣ ಕೂಟ ರಾಜಕೀಯ ಪಡಸಾಲೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನವೆಂಬರ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಅರ್ಧ ಅವಧಿಯನ್ನು ಪೂರ್ಣಗೊಳಿಸುವತ್ತ ಸಾಗುತ್ತಿರುವಾಗ ಒಂದೆಡೆ ಸಂಪುಟ ಪುನರಾಚನೆ ಆಗಲಿದೆ ಎನ್ನುವ ಖಚಿತ ಸುದ್ದಿಗಳು

ರಾಜಕೀಯ ಪಡಸಾಲೆಯಲ್ಲಿ ಸಿದ್ದರಾಮಯ್ಯ ಡಿನ್ನರ್‌ ಮೀಟ್‌ ಸಂಚಲನ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರಿನ ಎಸ್.ಎಂ.ಟಿ. ಶಾಖೆ 5 ನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರು ಇದರ ಎಸ್.ಎಂ.ಟಿ. ಶಾಖೆ ಯು 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರು ಇದರ ಅಧ್ಯಕ್ಷರು ಚಿದಾನಂದ ಬೈಲಾಡಿ ಮಾತನಾಡಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಎಸ್.ಎಂ.ಟಿ. ಶಾಖೆಗೆ ಶುಭಹಾರೈಸಿದರು. ಶಾಖಾ ಸಲಹಾ ಸಮಿತಿಯ ಅಧ್ಯಕ್ಷರು / ನಿರ್ದೇಶಕರು ಜಿನ್ನಪ್ಪ ಗೌಡ ಮಳುವೇಲು , ಆಡಳಿತ ಮಂಡಳಿ ಉಪಾಧ್ಯಕ್ಷರು ರಾಮಕೃಷ್ಣ ಗೌಡ ಯು. ಪಿ. ನಿರ್ದೇಶಕರುಗಳಾದ ರಾಮಕೃಷ್ಣ ಗೌಡ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ (ನಿ.) ಪುತ್ತೂರಿನ ಎಸ್.ಎಂ.ಟಿ. ಶಾಖೆ 5 ನೇ ವರ್ಷಕ್ಕೆ ಪಾದಾರ್ಪಣೆ Read More »

ಅಶ್ರಫ್ ಕಲಾಯಿ ಕೊಲೆ ಕೇಸ್: ಭರತ್ ಕುಮ್ಡೇಲು ಕೋರ್ಟ್‌ಗೆ ‌ಶರಣು

ಮಂಗಳೂರು: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು ಕೋರ್ಟ್‌ಗೆ ಶರಣಾಗಿದ್ದಾರೆ‌. SDPI ಕಾರ್ಯಕರ್ತ ಅಶ್ರಫ್ ಕಲಾಯಿ, ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ. ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಆರೋಪಿಗಳು ಪ್ರತಿ ತಿಂಗಳು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಳೆದ 3-4 ತಿಂಗಳಲ್ಲಿ ವಿಚಾರಣೆಗೆ ಹಾಜರಾಗದೆ ಭರತ್

ಅಶ್ರಫ್ ಕಲಾಯಿ ಕೊಲೆ ಕೇಸ್: ಭರತ್ ಕುಮ್ಡೇಲು ಕೋರ್ಟ್‌ಗೆ ‌ಶರಣು Read More »

ರಾಜ್ಯದ ಸಮಸ್ಯೆಗಳ ನಡುವೆಯೂ ಸಿಎಂ ಔತಣಕೂಟ: ಸಿ.ಟಿ. ರವಿ ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳು ತಾಂಡವವಾಡುತ್ತಿವೆ. ಇವುಗಳ ನಡುವೆ ನೀವು ಔತಣಕೂಟದ ಸಂಭ್ರಮ ಮಾಡುತ್ತಿದ್ದೀರಾ ಎಂದು ಸಿಎಂ ‌ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ಕುರಿತು ಎಂ ಎಲ್ ಸಿ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ. ಭ್ರಷ್ಟಾಚಾರ 80% ದಾಟಿದೆ ಎಂದು ಗುತ್ತಿಗೆದಾರರೇ ಪತ್ರ ಬರೆಯುತ್ತಾರೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ದೇಶದಲ್ಲೇ ಕರ್ನಾಟಕ ನಂ.2. ಅತಿವೃಷ್ಟಿಯಿಂದ ಹತ್ತಕ್ಕೂ ಅಧಿಕ ಜಿಲ್ಲೆಗಳು ಹಾನಿಗೊಳಗಾಗಿವೆ. ಹೀಗಿದ್ದರೂ ಸಿ ಎಂ ಔತಣ ಕೂಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಸಮಸ್ಯೆಗಳ ನಡುವೆಯೂ ಸಿಎಂ ಔತಣಕೂಟ: ಸಿ.ಟಿ. ರವಿ ವ್ಯಂಗ್ಯ Read More »

ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿ ಹಾಕಿದ ಆರೋಪಿ ಅಂದರ್

ಬೆಂಗಳೂರು: ಜತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕಾಂಪೌಂಡ್ ಒಳಗೆ ಕೂಡಿ ಹಾಕಿದ್ದ ವ್ಯಕ್ತಿಯನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭದ್ರಪ್ಪ ಲೇಔಟ್‌ನ ಸಂದೀಪ್ (31) ಎಂದು ಗುರುತಿಸಲಾಗಿದೆ. ಸಂದೀಪ್ ಮನೆಗೆ ಸಮೀಕ್ಷೆ ನಡೆಸಲು ಶಿಕ್ಷಕಿ ಸುಶೀಲಾ ತೆರಳಿದ್ದು, ಈ ವೇಳೆ ಅವರ ತಾಯಿಯ ಬಳಿ ದಾಖಲೆಗಳನ್ನು ಕೇಳಿದ್ದಾರೆ. ಆಗ ಅಲ್ಲಿಗೆ ಬಂದ ಸಂದೀಪ್ ನೀವು ಯಾರು?, ನಿಮ್ಮನ್ನು ಸಮೀಕ್ಷೆಗೆ ಕಳುಹಿಸಿದ್ದು ಯಾರು?, ನೀವು ಸರ್ಕಾರಿ ನೌಕರರು ಎಂದು ನಂಬುವುದು ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಅವಾಚ್ಯ

ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿ ಹಾಕಿದ ಆರೋಪಿ ಅಂದರ್ Read More »

ಗಿರೀಶ್‌ ಮಟ್ಟಣ್ಣವರ್‌ ಬಾಂಬ್‌ ಪ್ರಕರಣಕ್ಕೆ ಮರುಜೀವ : ತನಿಖೆಗೆ ಒತ್ತಾಯಿಸಿ ಅರ್ಜಿ

ಮಂಗಳೂರು ಕುಕ್ಕರ್‌ ಬಾಂಬ್‌ ಮತ್ತು ಮಟ್ಟಣ್ಣವರ್‌ ಬಾಂಬ್‌ ನಡುವೆ ಲಿಂಕ್‌ ಇರುವ ಅನುಮಾನ ಬೆಂಗಳೂರು: ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಈ ಹಿಂದೆ ವಿಧಾನಸೌಧದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಮರು ತನಿಖೆಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿದ್ದ ಗಿರೀಶ್‌ ಮಟ್ಟಣ್ಣವರ್‌ ವಿಧಾನಸಭೆಯಲ್ಲಿ ಬಾಂಬಿಟ್ಟ ಕೃತ್ಯದಿಂದಲೇ ಕುಖ್ಯಾತಿಗೊಳಗಾಗಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದ್ದರೂ ಪೊಲೀಸ್‌ ಇಲಾಖೆಯಿಂದ ಅವರು ವಜಾಗೊಂಡಿದ್ದರು. ಈಗ ಮತ್ತೆ ಈ

ಗಿರೀಶ್‌ ಮಟ್ಟಣ್ಣವರ್‌ ಬಾಂಬ್‌ ಪ್ರಕರಣಕ್ಕೆ ಮರುಜೀವ : ತನಿಖೆಗೆ ಒತ್ತಾಯಿಸಿ ಅರ್ಜಿ Read More »

error: Content is protected !!
Scroll to Top