ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ

2007ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಮುಂಬಯಿ : ಸಾರ್ವಜನಿಕ ವೇದಿಕೆಯಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಅವರನ್ನು ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ 16 ವರ್ಷದ ಬಳಿಕ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದು ಹೇಳಿ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ.2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟ ರಿವರ್ಡ್‌ ಗೇರ್‌ ಅವರು ಶಿಲ್ಪಾ ಶೆಟ್ಟಿಯನ್ನು ಬರಸೆಳೆದು ಅಪ್ಪಿ ಹಿಡಿದು ಚುಂಬಿಸಿದ್ದರು. […]

ಚುಂಬನ ಪ್ರಕರಣದಲ್ಲಿ 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ನಿರ್ದೋಷಿ Read More »

ಏಪ್ರಿಲ್ 8ರಂದು ಮುಖಗಳು ಕಲಾಕೃತಿ ಪ್ರದರ್ಶನ

ಪುತ್ತೂರು: ಪರ್ಪುಂಜ ಸೌಗಂಧಿಕ ಆರ್ಟ್ ಗ್ಯಾಲರಿಯಲ್ಲಿ ಏಪ್ರಿಲ್ 8ರಂದು ಸಂಜೆ 4ಕ್ಕೆ ಮುಖಗಳು ಕಲಾಕೃತಿ ಪ್ರದರ್ಶನ ನಡೆಯಲಿದೆ. ಆದಿತ್ಯ ಸದಾಶಿವ ರಾವ್ ಅವರ ಕಲಾಕೃತಿ ಪ್ರದರ್ಶನ ಇದಾಗಿದೆ. ಕಲಾಪ್ರದರ್ಶನ ಏಪ್ರಿಲ್ 8ರಿಂದ 20ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ವೀಕ್ಷಣೆಗೆ ಲಭ್ಯವಿದೆ. ಸುಬ್ರಹ್ಮಣ್ಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಗೋವಿಂದ ಅವರು ದೀಪ ಬೆಳಗಿಸುವರು. ರಂಗಗೀತೆಗಳ ಕಾರ್ಯಕ್ರಮವನ್ನು ಸತ್ಯ ನಾ ಕೊಡೇರಿ, ರಾಘವೇಂದ್ರ, ಭ್ರಮರ, ಸಂದೇಶ, ಅರವಿಂದ ಕುಡ್ಲ, ರಶ್ಮಿ ನಡೆಸಿಕೊಡುವರು

ಏಪ್ರಿಲ್ 8ರಂದು ಮುಖಗಳು ಕಲಾಕೃತಿ ಪ್ರದರ್ಶನ Read More »

ಕರಾವಳಿಯ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ

ಸ್ವಾರ್ಥಿ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಹಾಲಾಡಿ ಕರಾವಳಿಯ ವಾಜಪೇಯಿ ಎಂದೇ ಖ್ಯಾತಿ ಪಡೆದಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ 72 ವರ್ಷದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಈ ನಡೆ ಅಚ್ಚರಿ ಮೂಡಿಸಿರುವುದರ ಜತೆಗೆ ನಾಡಿನಾದ್ಯಂತ ಚರ್ಚೆಗೂ ಕಾರಣವಾಗಿದೆ. ಶ್ರೀನಿವಾಸ ಶೆಟ್ಟಿಯವರು ಓರ್ವ ಮಾದರಿ ಜನನಾಯಕ ಎಂದು ಧಾರಾಳವಾಗಿ ಹೇಳಬಹುದು. ಸತತ

ಕರಾವಳಿಯ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ Read More »

ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷಧಾರಿ : ತುಳುವರಿಂದ ಭಾರಿ ಆಕ್ರೋಶ

ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ-ಕಾಂತಾರ-2 ಬೇಡ ಎಂದು ಒತ್ತಾಯ ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿಕೊಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ಆತ ಪಂಜುರ್ಲಿ ವೇಷ ಹಾಕಿದ್ದಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಫೋಟೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕ್ರೀಡಾಂಗಣದಲ್ಲಿ ದೈವದ ವೇಷ ಹಾಕಿದ್ದನ್ನು ನೋಡಿ ತುಳುವರು ಆಕ್ರೋಶ

ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷಧಾರಿ : ತುಳುವರಿಂದ ಭಾರಿ ಆಕ್ರೋಶ Read More »

ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರವನ್ನು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಏಪ್ರಿಲ್ 26, 27ರಂದು ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ. ಅದೇ ದಿನ ಚಂಡಿಕಾ ಹೋಮ ಸಹಿತ ಮಹಾ ಉತ್ಸವ ನಡೆಯಲಿದೆ. ಶ್ರೀ ಅಮ್ಮನವರ ಬೆಳ್ಳಿಯ ಕತ್ತಿ ಮತ್ತು ಬೆಳ್ಳಿಯ ತ್ರಿಶೂಲ ಸಮರ್ಪಣೆಯೂ ನಡೆಯಲಿದೆ. ವಾರ್ಷಿಕ ಮಹೋತ್ಸವಕ್ಕೆ ಮೊದಲು ಅಂದರೆ ಏಪ್ರಿಲ್ 20ರಂದು ಗೊನೆ ಮುಹೂರ್ತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ Read More »

ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ

ಉಪ್ಪಿನಂಗಡಿ: ಇಲ್ಲಿನ ಬಟ್ಟೆ ಮಳಿಗೆ ವಿವಾ ಫ್ಯಾಶನ್‍ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಉಪ್ಪಿನಂಗಡಿ ಮುಖ್ಯಪೇಟೆಯಲ್ಲೇ ಇರುವ ವಿವಾ ಫ್ಯಾಷನ್ ನ 1ನೇ ಹಾಗೂ 2ನೇ ಮಹಡಿಯಲ್ಲಿ ಈ ಶೋ ರೂಂ ಇದೆ. ಬೆಳಗ್ಗೆ ಮಳಿಗೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಗ್ನಿಶಾಮಕ ಹಾಗೂ ಸ್ಥಳಿಯರ ಗಮನಕ್ಕೆ ತಂದಿದ್ದಾರೆ. ಈ ಕಟ್ಟಡದ ನೆಲ ಅಂತಸ್ತಿನಲ್ಲೀ ಅನೇಕ ಅಂಗಡಿ ಮಳಿಗೆಗಳಿವೆ.

ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ Read More »

ಕೂಜುಗೋಡಿನಿಂದ ಮಠಂದೂರುವರೆಗಿನ ಶಾಸಕತ್ವದ ಅವಧಿ | ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಶಾಸಕ ಮಠಂದೂರು ಭಾಗಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಕೂಜುಗೋಡು ವೆಂಕಟ್ರಮಣ ಗೌಡ. ಈಗಿನ ಶಾಸಕ ಸಂಜೀವ ಮಠಂದೂರು. ಶಾಸಕ ಸಂಜೀವ ಮಠಂದೂರು ಅವರು ಕೂಜುಗೋಡು ವೆಂಕಟ್ರಮಣ ಗೌಡ ಅವರ ಮನೆಗೆ ಭೇಟಿ ನೀಡಿದರು. ಗೌಡ ಸಮುದಾಯದ ಪ್ರತಿಷ್ಠಿತ ಮನೆತನವಾದ ಕೂಜುಗೋಡು ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರಿಬ್ಬರೂ ಪ್ರತಿಷ್ಠಿತ ಗೌಡ ಸಮುದಾಯದ ಮನೆತನಗಳಿಗೆ ಸೇರಿದವರು ಎನ್ನುವುದೇ ಇಲ್ಲಿನ ವಿಶೇಷತೆ. ಅವಿಭಜಿತ ವಿಧಾನಸಭಾ ಕ್ಷೇತ್ರ: 1952ರಲ್ಲಿ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ಒಂದೇ ವಿಧಾನಸಭಾ ಕ್ಷೇತ್ರವಾಗಿತ್ತು. ಅದು ಪುತ್ತೂರು ವಿಧಾನಸಭಾ

ಕೂಜುಗೋಡಿನಿಂದ ಮಠಂದೂರುವರೆಗಿನ ಶಾಸಕತ್ವದ ಅವಧಿ | ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಶಾಸಕ ಮಠಂದೂರು ಭಾಗಿ Read More »

ಮಹಾಲಿಂಗೇಶ್ವರನ ಜಾತ್ರೆಗೆ ಸಾಂಪ್ರದಾಯಿಕ ತಟ್ಟಿ ಚಪ್ಪರದ ಸೊಬಗು | ಚಪ್ಪರಕ್ಕಾಗಿ ಶಾಶ್ವತ ಕಂಬ ಅಳವಡಿಕೆ

ಪುತ್ತೂರು: ತಟ್ಟಿ ಚಪ್ಪರಕ್ಕೆ ಸಾಂಪ್ರದಾಯಿಕ ಮನ್ನಣೆಯಿದೆ. ಜಾತ್ರೆಯಲ್ಲೂ ತಟ್ಟಿ ಚಪ್ಪರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತದೆ. ಪುತ್ತೂರ ಈಶನ ಜಾತ್ರೆಯಲ್ಲಿ ತಟ್ಟಿ ಚಪ್ಪರದ ವಿಶೇಷ ಮೆರುಗು ಇರುತ್ತದೆ. ಈ ವರ್ಷದ ಹೆಚ್ಚುಗಾರಿಕೆ ಎಂದರೆ, ಅಡಿಕೆ ಕಂಬದ ಬದಲಿಗೆ ಶಾಶ್ವತ ಕಂಬದ ಅಳವಡಿಕೆ. ಪ್ರತೀ ವರ್ಷ ಒಳಾಂಗಣದಲ್ಲಿ ಹಾಕುವ ಚಪ್ಪರದ ಕಂಬಗಳನ್ನು ಅಡಕೆ ಮರದಿಂದ ತಯಾರಿಸಿದ ಕಂಬಗಳನ್ನು ಹಾಕಲಾಗುತ್ತದೆ. ಆದರೆ ಈ ಬಾರಿಯ ವಿಶೇಷತೆ ಎಂದರೆ ಶಾಶ್ವತ ಸ್ಟೀಲ್ ಕಂಬಗಳನ್ನು ಈಗಾಗಲೇ ಹಾಕಲಾಗಿದೆ. ಕಂಬದ ಮೇಲೆ ಕೇವಲ ತಟ್ಟಿಗಳನ್ನು ಹಾಕಲಾಗುತ್ತದೆ. ಜಾತ್ರೆ

ಮಹಾಲಿಂಗೇಶ್ವರನ ಜಾತ್ರೆಗೆ ಸಾಂಪ್ರದಾಯಿಕ ತಟ್ಟಿ ಚಪ್ಪರದ ಸೊಬಗು | ಚಪ್ಪರಕ್ಕಾಗಿ ಶಾಶ್ವತ ಕಂಬ ಅಳವಡಿಕೆ Read More »

ಐಪಿಎಲ್ 2023 : ಅರ್ಧಶತಕ, ದಾಖಲೆ ನಿರ್ಮಿಸಿದ ಆರ್ ಸಿಬಿ ‘ರನ್ ಮಷಿನ್’ ವಿರಾಟ್ ಕೊಹ್ಲಿ

ಬೆಂಗಳೂರು : ಐಪಿಎಲ್ ಸೀಸನ್ 16ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದ್ದು, ಆರ್ ಸಿಬಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ 8 ವಿಕೆಗಳ ಭರ್ಜರಿ ಜಯ ದಾಖಲಿಸಿತು. ಇದೇ ಪಂದ್ಯದಲ್ಲಿ ಕೊಹ್ಲಿ ಅಪರೂಪದ ದಾಖಲೆ ಕೂಡ ನಿರ್ಮಾಣ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ ಸಿಬಿ ತಂಡ ಎಂಟು

ಐಪಿಎಲ್ 2023 : ಅರ್ಧಶತಕ, ದಾಖಲೆ ನಿರ್ಮಿಸಿದ ಆರ್ ಸಿಬಿ ‘ರನ್ ಮಷಿನ್’ ವಿರಾಟ್ ಕೊಹ್ಲಿ Read More »

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು

ರಾಮನಗರ : ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿರುವ ದುರಂತ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಕಾರೊಂದು ಬೈಕ್‌ನ ಹಿಂಬದಿಯಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದಿದೆ. ಯೋಗೇಶ್(47), ಹರ್ಷಿತಾ(14) ಅಪಘಾತದಲ್ಲಿ ಮೃತಪಟ್ಟವರು. ಮೃತರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಸಾಬರಪಾಳ್ಯದ ಮಾರ್ಗವಾಗಿ ಹೋಗುತ್ತಿದ್ದಾಗ ಜವರಾಯನಾಗಿ

ಬೈಕ್‌-ಕಾರು ಡಿಕ್ಕಿ : ತಂದೆ-ಮಗಳ ಸಾವು Read More »

error: Content is protected !!
Scroll to Top