ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ | ಗಣ ಹೋಮ, ಶಾರದಾ ಪೂಜೆಯೊಂದಿಗೆ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತ

ಪುತ್ತೂರು: ಅಂಬಿಕಾ ಸಿ.ಬಿ.ಎಸ್.ಇ ಶಾಲೆಯ 2023-24ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಗಣಪತಿ ಹೋಮ, ಶಾರದಾ ಪೂಜೆಯೊಂದಿಗೆ ಪುನರಾರಂಭಗೊಂಡಿತು. ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನೂತನ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮೊದಲ ದಿನದಿಂದಲೇ ಓದುವಿಕೆ, ಬರೆಯುವಿಕೆಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಕರು ನೀಡಿದ ಕೆಲಸವನ್ನು ಅಂದೇ ಪೂರ್ತಿ ಗೊಳಿಸಬೇಕು. ಕಳೆದ ಬಾರಿ ಕಡಿಮೆ ಅಂಕ ಗಳಿಸಿದ್ದರೆ ಅದನ್ನು […]

ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ | ಗಣ ಹೋಮ, ಶಾರದಾ ಪೂಜೆಯೊಂದಿಗೆ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋವೆಂಚುರ-ಅವಿನ್ಯ 2023 ಸಮಾರೋಪ | ಸೇಕ್ರೆಡ್‌ ಹಾರ್ಟ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾದ ವತಿಯಿಂದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋ ವೆಂಚುರ-ಅವಿನ್ಯ 2023ರ ಸಮಾರೋಪ ಸಮಾರಂಭ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು. ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥ ಪ್ರೊ| ಲಿಯೋ ನೊರೋನ್ಹ ಮಾತನಾಡಿ, ಪ್ರತಿಯೋರ್ವನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊರತರುವುದು ಹಾಗೂ ಪ್ರತಿಭೆಗಳನ್ನು ಅನ್ವೇಶಿಸುವುದು ಸ್ಪರ್ಧೆಗಳ ಮೂಲ ಉದ್ದೇಶ ಎಂದು ಹೇಳಿದರು. ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಡಾ|

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋವೆಂಚುರ-ಅವಿನ್ಯ 2023 ಸಮಾರೋಪ | ಸೇಕ್ರೆಡ್‌ ಹಾರ್ಟ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ Read More »

ಚಲಿಸುತ್ತಿದ್ದ ಬಸ್ಸಿನಿಂದ ಬಿದಿದ್ದ ಗೋಳಿತ್ತಡಿ ಮಹಿಳೆ ಮೃತ್ಯು

ಕಡಬ: ಚಲಿಸುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡಬ ಮಾರ್ಗವಾಗಿ ಸಾಗುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ಸಿನಲ್ಲಿ ಮೇ 25ರಂದು ಆಲಂಕಾರಿನಲ್ಲಿ ಘಟನೆ ನಡೆದಿತ್ತು. ಗೋಳಿತ್ತಡಿ ಶಾರದಾ ನಗರದ ಗುಲಾಬಿ ಎಂಬ ಮಹಿಳೆ ಆಲಂಕಾರಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಮಾರ್ಗಕ್ಕೆ ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸ್ಥಳೀಯ ಕ್ಲಿನಿಕ್‌ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ

ಚಲಿಸುತ್ತಿದ್ದ ಬಸ್ಸಿನಿಂದ ಬಿದಿದ್ದ ಗೋಳಿತ್ತಡಿ ಮಹಿಳೆ ಮೃತ್ಯು Read More »

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ

ಪುತ್ತೂರು: ದಶಕಗಳ ಹಿಂದೆ ಕ್ರೀಡಾಕ್ಷೇತ್ರದಲ್ಲಿ ಭಾರತದ ಪ್ರದರ್ಶನ ನೀರಸವಾಗಿರುತ್ತಿತ್ತು. ಅಲ್ಲೋ ಇಲ್ಲೋ ಒಬ್ಬ ಕ್ರೀಡಾಪಟು ಮೂರು – ನಾಲ್ಕನೇ ಸ್ಥಾನ ಗಳಿಸುವುದೇ ದೊಡ್ಡ ಸಾಧನೆ ಎನಿಸುತ್ತಿತ್ತು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಒಲಿಂಪಿಕ್ಸ್ ನಂತಹ ಸ್ಪರ್ಧೆಗಳಲ್ಲೂ ನಿರಂತರವಾಗಿ ಚಿನ್ನ, ಬೆಳ್ಳಿ ಪದಕಗಳು ಭಾರತಕ್ಕೆ ಬರಲಾರಂಭಿಸಿವೆ. ಹಾಗಾಗಿ ನಮ್ಮ ಕ್ರೀಡಾಳುಗಳು ದೇಶಕ್ಕೆ ಹೆಮ್ಮೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ ಶೆಟ್ಟಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ Read More »

ದೇಶದ ಸಂಸ್ಕೃತಿ, ಸಂಸ್ಕಾರ ಉಳಿವು ಬಿಜೆಪಿಯಿಂದ ಮಾತ್ರ ಸಾಧ್ಯ | ರಾಮಕುಂಜದಲ್ಲಿ ಸುಳ್ಯ ಶಾಸಕರಿಗೆ, ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲಿ ಭಾಗೀರಥಿ ಮುರುಳ್ಯ

ಕಡಬ: ಭಾರತ ದೇಶ ವಿಶ್ವಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಿ ಜಗತ್ತಿನಲ್ಲಿ ಮಾನ್ಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ ವೈಶಿಷ್ಟ್ಯತೆ ಇಡೀ ಪ್ರಪಂಚದಲ್ಲಿ ಜನಜನಿತವಾಗಿದೆ. ನಮ್ಮ ದೇಶದ ಮೌಲ್ಯಗಳು ಉಳಿಯಬೇಕಾದರೆ, ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.  ಅವರು ಮಂಗಳವಾರ ಸಂಜೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕೊಯಿಲ ಮಹಾಶಕ್ತಿಕೇಂದ್ರ ಹಾಗೂ ರಾಮಕುಂಜ,

ದೇಶದ ಸಂಸ್ಕೃತಿ, ಸಂಸ್ಕಾರ ಉಳಿವು ಬಿಜೆಪಿಯಿಂದ ಮಾತ್ರ ಸಾಧ್ಯ | ರಾಮಕುಂಜದಲ್ಲಿ ಸುಳ್ಯ ಶಾಸಕರಿಗೆ, ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲಿ ಭಾಗೀರಥಿ ಮುರುಳ್ಯ Read More »

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ

ಪುತ್ತೂರು: ಪ್ರತೀ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಸಿ  ಆಂಗ್ಲ ಶಿಕ್ಷಕರನ್ನು ನೀಡುವ ಯೋಜನೆಯಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಬುಧವಾರ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲಾ ಅಭಿವೃದ್ಧಿಯಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಜತೆಗೆ ಸರಕಾರ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ Read More »

ಅಳಕೆಮಜಲು: ಯುವಕ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ಇಲ್ಲಿನ ಅಳಕೆಮಜಲು ನಿವಾಸಿ ಧೀರಜ್ (30) ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಕೆಮಜಲಿನಲ್ಲಿ ಸಮೀಪ ನಡೆದಿದೆ. ಧೀರಜ್ ಅವರು ಬಿ.ಸಿ.ರೋಡ್ ನ ಹೋಂಡಾ ಶೋ ರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಒಂದು ವರುಷದ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

ಅಳಕೆಮಜಲು: ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಪಕ್ಷರ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡುವಂತೆ ಮನವಿ

ಪುತ್ತೂರು: ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ. ಸರಕಾರಿ ಒದ್ಯೋಗಿಯಾಗಿದ್ದ ಈ ರೀತಿಯಾಗಿ ಒಂದು ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ಯಾವುದೇ ಪಕ್ಷದ ಪರ ಇರುವಂತಿಲ್ಲ. ಬೇರೆ ಬೇರೆ ಧರ್ಮ ಜಾತಿಗಳ ವಿದ್ಯಾರ್ಥಿಗಳರುವ ಈ ಕಾಲೇಜನಲ್ಲಿ ಒಬ್ಬರು ಅಧ್ಯಾಪಕರು ಈ ರೀತಿ

ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಪಕ್ಷರ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡುವಂತೆ ಮನವಿ Read More »

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ

ಕಾಣಿಯೂರು: ಕಾಣಿಯೂರು ಸ.ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. 1994ರಲ್ಲಿ ಬಂಟ್ವಾಳ ಕೊಯಿಲ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, 1996ರಲ್ಲಿ ಕುದ್ಮಾರು ಸ.ಉ.ಹಿ.ಪ್ರಾ ಶಾಲೆಯಲ್ಲಿ, ಒಂದು ವರ್ಷ ಬೆಳಂದೂರು ಸ.ಹಿ.ಪ್ರಾ.ಶಾಲೆಗೆ ನಿಯೋಜನೆಗೊಂಡು ಕರ್ತವ್ಯ ಸಲ್ಲಿಸಿದ್ದಾರೆ. 2016ರಲ್ಲಿ ಕಾಣಿಯೂರು ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ 21 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು, ಇದೀಗ ಸೇವಾ ನಿವೃತ್ತರಾಗುತ್ತಿದ್ದಾರೆ.

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ Read More »

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ

ಸವಣೂರು : ಸವಣೂರು ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ಸದಸ್ಯರಾದ ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ಗಿರಿಶಂಕರ ಸುಲಾಯ,ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ  ದಿನೇಶ್ ಮೆದು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹನೀಫ್,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ,ಶಾಲಾ ಮುಖ್ಯಗುರು ಬಾಲಕೃಷ್ಣ ಕೆ.ಮೊದಲಾದವರಿದ್ದರು.

ಉನ್ನತೀಕರಿಸಿದ ಹಿ ಪ್ರಾ ಶಾಲೆ ಶಾಲಾ ಪ್ರಾರಂಭೋತ್ಸವ ,ಶಾಸಕರಿಗೆ ಅಭಿನಂದನೆ Read More »

error: Content is protected !!
Scroll to Top