ಸುದ್ದಿ

ಟಿಪ್ಪರ್ – ಸರ್ಕಾರಿ ಬಸ್ಸಿನ ನಡುವೆ ಅಪಘಾತ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಟಿಪ್ಪರ್ ಚಾಲಕ

ವಿಟ್ಲ: ಮುಚ್ಚಿರಪದವಿನಲ್ಲಿ ಸರ್ಕಾರಿ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಬಸ್ಸು ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿತ್ತು. ಟಿಪ್ಪರ್ ‌ಪೆರುವಾಯಿ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಇವೆರಡೂ ವಾಹನಗಳು ಮುಖಾಮುಖಿ ಗುದ್ದಿಕೊಂಡಿವೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ಅಪಘಾತದ ಬಳಿಕ ಎರಡೂ ವಾಹನಗಲ‌ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಪ್ಪರ್ ‌ಚಾಲಕ ಬಿಲಾಲ್ ‌ಎಂಬಾತ‌ ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಕಂಡಕ್ಟರ್ ವಿಟ್ಲ […]

ಟಿಪ್ಪರ್ – ಸರ್ಕಾರಿ ಬಸ್ಸಿನ ನಡುವೆ ಅಪಘಾತ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಟಿಪ್ಪರ್ ಚಾಲಕ Read More »

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್

ಬೆಳ್ತಂಗಡಿ: ಸುಮಾರು ಐದು‌‌ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ‌ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೊಬ್ಬನನ್ನು ಕೊನೆಗೂ ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಈತ ಉಡುಪಿ ಜಿಲ್ಲೆಯ ಕಾಪು ಪ್ರದೇಶದವನು ಎಂದು ತಿಳಿದು ಬಂದಿದೆ. ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದ್ದು, ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಂದರ್ Read More »

ಅಮೆರಿಕ ಮಿಲಿಟರಿ ವಿಮಾನ ಪತನ : ಮೃತರ ಸಂಖ್ಯೆ 66ಕ್ಕೇರಿಕೆ

ಟೇಕಾಫ್‌ ಆದ ಮರುಕ್ಷಣ ಪತನಗೊಂಡ ವಿಮಾನ ವಾಷಿಂಗ್ಟನ್‌ : ದಕ್ಷಿಣ ಕೊಲಂಬಿಯಾದಲ್ಲಿ 121 ಮಂದಿ ಪ್ರಯಾಣಿಸುತ್ತಿದ್ದ ಅಮೆರಿಕದ ಸೇನಾ ವಿಮಾನ ಟೇಕ್‌ಆಫ್ ಆದ ತಕ್ಷಣ ಪತನಗೊಂಡ ಪರಿಣಾಮ ಮೃತಪಟ್ಟವರ ಸಂಖ್ಯೆ 66ಕ್ಕೇರಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ಪೆಡ್ರೋ ಸಾಂಚೆಝ್ ಎಕ್ಸ್ ಖಾತೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಈ ಅಪಘಾತ ಅಮೆಜಾನ್ ಪ್ರದೇಶದಲ್ಲಿರುವ ಪುಟುಮಾಯೋ ಪ್ರಾಂತ್ಯದ ದೂರದ ಪಟ್ಟಣವಾದ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದೆ. ಈ ಪ್ರದೇಶ ಪೆರು ಮತ್ತು ಇಕ್ವಡಾರ್ ದೇಶಗಳ ಗಡಿಗೆ

ಅಮೆರಿಕ ಮಿಲಿಟರಿ ವಿಮಾನ ಪತನ : ಮೃತರ ಸಂಖ್ಯೆ 66ಕ್ಕೇರಿಕೆ Read More »

ಪ್ರಚೋದನಕಾರಿ ವಿಡಿಯೋ ಹಂಚಿದ ಆರೋಪಿ ಸೆರೆ

ಫೇಸ್‌ಬುಕ್‌ ನಕಲಿ ಖಾತೆ ಮೂಲಕ ವಿಡಿಯೋ ಹಂಚುತ್ತಿದ್ದ ಪಾತಕಿ ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ತಿರುಚಿದ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡು ಸಮಾಜದಲ್ಲಿ ಕೋಮು ದ್ವೇಷದ ಕಿಚ್ಚು ಹಚ್ಚಲು ಯತ್ನಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಮಹಮ್ಮದ್ ರಫೀಕ್ (38) ಬಂಧಿತ ಆರೋಪಿ, ಈತ ನಝೀರ ಮಂಗಳೂರು ಫೇಸ್‌ಬುಕ್ ಖಾತೆಯ ಮೂಲಕ ವಿಡಿಯೋಗಳನ್ನು ಹರಿಬಿಡುತ್ತಿದ್ದ. ಕಳೆದ ಅಕ್ಟೋಬಋನಲ್ಲಿ ಈತ ತನ್ನ ಫೇಸ್‌ಬುಕ್ ಖಾತೆಯ ಮೂಲಕ ಎಐ ತಂತ್ರಜ್ಞಾನ

ಪ್ರಚೋದನಕಾರಿ ವಿಡಿಯೋ ಹಂಚಿದ ಆರೋಪಿ ಸೆರೆ Read More »

ಮಸೀದಿ ವಿಚಾರದಲ್ಲಿ ಮಾರಾಮಾರಿ : ಮೂರು ಪ್ರಕರಣ ದಾಖಲು

ಗುಂಪು ಕಟ್ಟಿಕೊಂಡು ಹೊಡೆದಾಟ; ಹಲವರಿಗೆ ಗಾಯ ಬಂಟ್ವಾಳ : ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಹೊಡೆದಾಟದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮೊದಲ ಪ್ರಕರಣದಲ್ಲಿ ಸಜಿಪಪಡು ನಿವಾಸಿ ಅಬ್ದುಲ್ ನವಾಝ್ (42) ಎಂಬವರು ನೀಡಿದ ದೂರಿನಂತೆ ಮಾರ್ಚ್ 22ರಂದು ಬೆಳಗ್ಗೆ ಇವರು ಮತ್ತು ಅವರ

ಮಸೀದಿ ವಿಚಾರದಲ್ಲಿ ಮಾರಾಮಾರಿ : ಮೂರು ಪ್ರಕರಣ ದಾಖಲು Read More »

ಅಮೆರಿಕದ ಮಿಲಿಟರಿ ವಿಮಾನ ಪತನ : ಕನಿಷ್ಠ 8 ಸೈನಿಕರು ಸಾವು

ಭಾರಿ ದುರಂತದಲ್ಲಿ ಎಲ್ಲ 121 ಮಂದಿ ಸಾವಿಗೀಡಾಗಿರುವ ಶಂಕೆ ವಾಷಿಂಗ್ಟನ್‌ : ಅಮೆರಿಕದ ಕೊಲಂಬಿಯಾದಲ್ಲಿ ಭಾರಿ ವಿಮಾನ ದುರಂತ ಸಂಭವಿಸಿದ್ದು, ದೇಶದ ಮಿಲಿಟರಿಗೆ ದೊಡ್ಡ ಆಘಾತ ತಂದಿದೆ. ವಾಯುಪಡೆಯ ಹರ್ಕ್ಯುಲಸ್ C-130 ಮಿಲಿಟರಿ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಕನಿಷ್ಠ 8 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಮಾನದಲ್ಲಿ ಸುಮಾರು 110 ಸೈನಿಕರ ಸಹಿತ 121 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಆದರೆ,

ಅಮೆರಿಕದ ಮಿಲಿಟರಿ ವಿಮಾನ ಪತನ : ಕನಿಷ್ಠ 8 ಸೈನಿಕರು ಸಾವು Read More »

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಪ್ರಕರಣ ಸಿಐಡಿಗೆ ವರ್ಗಾವಣೆ

ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಿದ ಸರ್ಕಾರ ಮಂಗಳೂರು : ಮೂಡುಬಿದಿರೆಯ ಅಮಾನತಿನಲ್ಲಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ಪಿ.ಜಿ.ಯ ಹೊಸ ಹೊಸ ಪ್ರಕರಣಗಳು ಬಯಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಬಿದ್ದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. 2018ರಲ್ಲಿ ವೇಣೂರು ಠಾಣೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕನ ವಿರುದ್ಧ ತಂಗಿ ದೂರು ನೀಡಿದ್ದರು. ಆ ಮಹಿಳೆ

ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಪ್ರಕರಣ ಸಿಐಡಿಗೆ ವರ್ಗಾವಣೆ Read More »

ದರ್ಬೆಯಲ್ಲಿ ರಿಕ್ಷಾ – ದ್ವಿಚಕ್ರ ವಾಹನದ ನಡುವೆ ಅಪಘಾತ

ಪುತ್ತೂರು: ದರ್ಬೆಯ ಹರ್ಷ ಮಳಿಗೆಯ ಸಮೀಪ ಇಂದು ಮಧ್ಯಾಹ್ನ ಅಟೋ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಸವಾರ ಗಾಯಗೊಂಡಿದ್ದಾರೆ. ಸ್ಕೂಟಿ ಸವಾರ ಒಳ ರಸ್ತೆಯಿಂದ ಮುಖ್ಯರಸ್ತೆಗೆ ‌ಸಂಪರ್ಕಿಸುತ್ತಿದ್ದು, ಆಟೋ ರಿಕ್ಷಾ ದರ್ಬೆಯಿಂದ ಪುತ್ತೂರಿಗೆ ‌ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಸ್ಕೂಟಿ ರಸ್ತೆಗೆ ಬಿದ್ದು ಸವಾರ ಮತ್ತು ಹಿಂಬದಿ ಸವಾರೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಇವರಿಗೆ ತರಚು ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಯ ‌ಬಳಿಕ ರಿಕ್ಷಾ ಚಾಲಕ ಮತ್ತು ಸ್ಕೂಟಿಯಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.

ದರ್ಬೆಯಲ್ಲಿ ರಿಕ್ಷಾ – ದ್ವಿಚಕ್ರ ವಾಹನದ ನಡುವೆ ಅಪಘಾತ Read More »

ಆಕ್ಸಿಡೆಂಟ್‌ನಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು

ಮೂಡಬಿದ್ರೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾರ್ಕಳದಲ್ಲಿ ನಡೆದಿದ್ದ ಆ್ಯಕ್ಸಿಡೆಂಟ್ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಚ ಘಟನೆ ನಡೆದಿದೆ. ಪಡುಮಾರ್ನಾಡು ನಿವಾಸಿ ಸಾತ್ವಿಕ್ ‌ಕುಲಾಲ್(21) ಎಂಬವರೇ ‌ಮೃತ ದುರ್ದೈವಿ. ಸಾತ್ವಿಕ್ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಅವರಿಗೆ ಕಳೆದ 2025 ರ ಅಕ್ಟೋಬರ್ ತಿಂಗಳಿನಲ್ಲಿ ಬೈಕ್ ಆ್ಯಕ್ಸಿಡೆಂಟ್ ಸಂಭವಿಸಿತ್ತು. ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿದೆ.

ಆಕ್ಸಿಡೆಂಟ್‌ನಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು Read More »

ಹರ್ಮುಜ್ ಜಲಸಂಧಿಯು ಈಗ ಹಡಗುಗಳ ಸಂಚಾರಕ್ಕೆ ಮುಕ್ತ ಎಂದ ಇರಾನ್

ನವದೆಹಲಿ: ಇರಾನಿನ ಶತ್ರು ರಾಷ್ಟ್ರಗಳನ್ನು ಹೊರತು ಪಡಿಸಿ, ಇತರ ರಾಷ್ಟ್ರಗಳಿಗೆ ಹರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸಲು ಇರಾನ್ ಅವಕಾಶ ನೀಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ವಿಷಯಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಂತಹ ಒಂದು ನಿರ್ಣಯಕ್ಕೆ ಇರಾನ್ ಬಂದಿದೆ. ಇರಾನಿನ ಶತ್ರು ರಾಷ್ಟ್ರಗಳ ಹಡಗುಗಳನ್ನು ಹೊರತುಪಡಿಸಿದಂತೆ ಇತರ ರಾಷ್ಟ್ರಗಳ ಹಡಗುಗಳಿಗೆ ಹರ್ಮುಜ್ ಜಲಸಂಧಿ ಮುಕ್ತವಾಗಿದೆ. ಮುಂದಿನ ನಲವತ್ತೆಂಟು ಗಂಟೆಗಳ ಒಳಗಾಗಿ ಹರ್ಮುಜ್ ಹಡಗುಗಳ ಸಂಚಾರಕ್ಕೆ ಮುಕ್ತವಾಗದೇ ಹೋದಲ್ಲಿ ಇರಾನಿನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಪೋಟ ಮಾಡುವ ಬೆದರಿಕೆಯನ್ನು

ಹರ್ಮುಜ್ ಜಲಸಂಧಿಯು ಈಗ ಹಡಗುಗಳ ಸಂಚಾರಕ್ಕೆ ಮುಕ್ತ ಎಂದ ಇರಾನ್ Read More »

error: Content is protected !!
Scroll to Top