ಸುದ್ದಿ

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು

ಸುಳ್ಯ: ನಿಯಂತ್ರಣ ತಪ್ಪಿ ಬೈಕೊಂದು ‌ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸವಾರ ಮೃತಪಟ್ಟ ಘಟನೆ ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ. ಮೆಸ್ಕಾಂ ಗುತ್ತಿಗೆ ನೌಕರ ಲೋಕನಾಥ್ ಎಂಬವರೇ ‌ಮೃತ ದುರ್ದೈವಿ. ಸುಳ್ಯದಿಂದ ತಮ್ಮ ಮನೆಯತ್ತ ಮರಳುತ್ತಿದ್ದ ‌ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾದರೂ, ಗಾಯದ ತೀವ್ರತೆ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು Read More »

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 17 ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೇರಳಕಟ್ಟೆಯ ನಾಟೇಕಲ್ ನಿವಾಸಿ ರಿಯಾಜ್ ಎಂದು ಗುರುತಿಸಲಾಗಿದೆ. ಈತ ಬರ್ಕೆ ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ 15/2009ರಡಿ, ಕಾಪಿರೈಟ್ ಕಾಯ್ದೆಯ ಕಲಂ 52(ಎ) ಮತ್ತು 63ರ ಪ್ರಕಾರ ದಾಖಲಾಗಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಪ್ರಕರಣ ದಾಖಲಾದ ನಂತರದಿಂದಲೇ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಸುಮಾರು 17 ವರ್ಷಗಳಿಂದ ಪರಾರಿಯಾಗಿರುವ ಆರೋಪಿತನನ್ನು ಬರ್ಕೆ ಪೊಲೀಸ್‌ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾರ್ಚ್

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ Read More »

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ 3 ಮತ್ತು 4 ನೇ ಆರೋಪಿಗಳಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಾದ ಮಂಜುನಾಥ ಶೆಣೈ ಮತ್ತು ಕೇಶವ್ ಪರವಾಗಿ ವಾದ ಮಂಡನೆ ಮಾಡಿರುವ ವಕೀಲ ನರಸಿಂಹ ಪ್ರಸಾದ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಧೀಶೆ ಸರಿತಾ ಡಿ. ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದಾಗಿದೆ.

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು Read More »

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ

ಕಾರ್ಕಳ: ವಿದ್ಯಾಭಾರತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಿ ವಿದ್ಯಾ ಭಾರತಿ ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸಿ ಯಶಸ್ವಿಯಾಗಿ ಮಾಡಿದ್ದೀರಿ. ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳಿಗೆ, ಅವರ ವಿದ್ವತ್ತಿಗೆ ನಾವು ಪ್ರೇರಣೆಯನ್ನು ಪ್ರೋತ್ಸಾಹವನ್ನು ನೀಡಿ ಸಮಾಜದ, ದೇಶದ ಸಂಸ್ಕೃತಿಯ ಅರಿವನ್ನು ಮೂಡಿಸಿ ದೇಶಕ್ಕೆ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ನಮ್ಮ ವಿದ್ಯಾ ಭಾರತಿಯ ಕಲ್ಪನೆ. ಈ ಸೇವಾ ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಿರುವುದು ತುಂಬಾ ಸಂತೋಷವಾಗಿದೆ. ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಅವರು ಮಾತನಾಡಿದರು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ Read More »

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು

ಗದಗ: ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೂ ಹೋಗದೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದು ಅಧಿಕಾರಿಗಳು ಪರೀಕ್ಷೆ ಬರೆಸಿದ ಘಟನೆ ಮುಂಡರಗಿಯ ಬರ್ಡೂರಿನಲ್ಲಿ ನಡೆದಿದೆ. ಪಲ್ಲವಿ ಎಂಬ ಬಾಲಕಿ ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿ ತೀರದ ಬಡತನದ ಕಾರಣಕ್ಕೆ ಆಕೆ ತನ್ನ ಪರೀಕ್ಷೆಗೂ ಹೋಗದೆ ದ್ರಾಕ್ಷಿ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗಿದ್ದಳು. ಅವಳ ಪರಿಸ್ಥಿತಿ ಅರಿತ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ, ಆಕೆಯ ಪೋಷಕರ ಮನವೊಲಿಸಿ

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು Read More »

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು

ಮಂಡ್ಯ: ಈಜಲೆಂದು ಹೋದ ಬಾಲಕ ಕೃಷಿ ಹೊಂಡದಲ್ಲಿ ‌ಮುಳುಗಿ ಸಾವನ್ನಪ್ಪಿದ ಘಟನೆ ಮಳವಳ್ಳಿಯ ನಂದೀಪುರದಲ್ಲಿ ‌ನಡೆದಿದೆ. ಕೊಡೀಹಳ್ಳಿ ನಿವಾಸಿ ಪೃಥ್ವಿನ್ (15) ಮೃತ ಬಾಲಕ. ಈತ ದಳವಾಯಿ ಕೊಡೀಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 8 ತರಗತಿ ವಿದ್ಯಾರ್ಥಿ. ಶಾಲೆಗೆ ರಜೆ ಇದ್ದುದರಿಂದ ತನ್ನ ನಾಲ್ವರು ಗೆಳೆಯರ ಜೊತೆಗೆ ಭಾನುವಾರ ಈಜಾಟಕ್ಕೆ ತೆರಳಿದ್ದ. ಆದರೆ ಸಂಜೆಯ ವರೆಗೂ ಬಾಲಕ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಮನೆಯವರು ಶೋಧ ನಡೆಸಿದ್ದರು. ಬಾಲಕನ ಮೃತದೇಹ ‌ನಂದೀಪುರದ ರಾಜೇಗೌಡ ಎಂಬವರ ಜಮೀನಿನ ಕೃಷಿ

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು Read More »

ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ಇಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಯಾವುದೇ ಧರ್ಮಕ್ಕೆ ಮತಾಂತರವಾದರೂ ಎಸ್‌ಸಿ ಸ್ಥಾನಮಾನ ನಷ್ಟ ನವದೆಹಲಿ: ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿಯ (ಎಸ್‌ಸಿ) ಸ್ಥಾನಮಾನ ಅನ್ವಯವಾಗುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ. ಹಿಂದೂ, ಸಿಖ್‌ ಅಥವಾ ಬೌದ್ಧ ಧರ್ಮದವರು ಎಸ್‌ಸಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಆದರೆ ಕ್ರೈಸ್ತ ಸೇರಿದಂತೆ ಬೇರೆ ಯಾವುದೇ ಧರ್ಮಕ್ಕೆ ಮತಾಂತರವಾದರೆ ಅವರು ಎಸ್‌ಸಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಭಾರಿ ಮಹತ್ವದ ತೀರ್ಪಿನಲ್ಲಿ ಹೇಳಲಾಗಿದೆ. ನ್ಯಾ. ಪಿ.ಕೆ.ಮಿಶ್ರಾ ಮತ್ತು ನ್ಯಾ.ಎನ್‌.ವಿ.ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ

ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ಇಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು Read More »

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಶ್ರಫ್ ಬಂಧನ

ಬಂಟ್ವಾಳ: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ‌ವಾರಂಟ್ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ‌ವೀರಕಂಬ ನಿವಾಸಿ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಈತ ಅ.ಕ್ರ :117/2019 ಹಾಗೂ ಅ.ಕ್ರ :111/2020 ಪ್ರಕರಣಗಳಿಗೆ ಸಂಬಂಧಿಸಿದಂತೆ, ಬಂಟ್ವಾಳ ACJ & JMFC ನ್ಯಾಯಾಲಯಕ್ಕೆ ಹಲವು ಬಾರಿ ಹಾಜರಾಗದೇ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಹತ್ತಕ್ಕೂ ಹೆಚ್ಚು ಬಾರಿ ವಾರಂಟ್ ಸಹ ಜಾರಿಯಾಗಿತ್ತು. ಸದ್ಯ ಬಂಟ್ವಾಳ ನಗರ ಪೊಲೀಸ್ ಠಾಣೆಯ ASI ಸುಜು ಹಾಗೂ

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅಶ್ರಫ್ ಬಂಧನ Read More »

ಉಗ್ರರ ‌ಜೊತೆ ನಂಟು: ಶಂಕಿತ ಆರೋಪಿಗಳನ್ನು ಬಂಧಿಸಿದ ಆಂಧ್ರಪ್ರದೇಶ ಪೊಲೀಸರು

ವಿಜಯವಾಡ: ಉಗ್ರವಾದಿ ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದ ಮತ್ತು ಉಗ್ರರ ಸಂಘಟನೆಗಳ ಜೊತೆೆಗ ಸಂಪರ್ಕ ಇರಿಸಿಕೊಂಡಿದ್ದ ಆರೋಪದಲ್ಲಿ ಮೂವರು ಶಂಕಿತರನ್ನು ಆಂಧ್ರಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶಂಕಿತ ಉಗ್ರರನ್ನು ಮಹಮ್ಮದ್ ರಹಮತುಲ್ಲಾ ಷರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮಹಮ್ಮದ್ ದಾನಿಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಿಜಯವಾಡದ ಟೂ ಟೌನ್ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಗುಪ್ತಚರ ಇಲಾಖೆಯ ಸಂಘಟಿತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆನ್-ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ, ಸದ್ಯ ಬಂಧನದಲ್ಲಿರುವ

ಉಗ್ರರ ‌ಜೊತೆ ನಂಟು: ಶಂಕಿತ ಆರೋಪಿಗಳನ್ನು ಬಂಧಿಸಿದ ಆಂಧ್ರಪ್ರದೇಶ ಪೊಲೀಸರು Read More »

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ

ವಿಟ್ಲ : ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಶಾಂತಿನಗರ ಎಂಬಲ್ಲಿ ನಡೆದಿದೆ. ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ವೀರಕಂಬ ಮೂಲದವರು ಎನ್ನಲಾದ ಸವಾರ ಮತ್ತು ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾರು ವಿಟ್ಲದ ಮೇಗಿನಪೇಟೆಯ ನಿವಾಸಿಯದ್ದು, ಹೊರ

ಕಾರು-ಬೈಕ್‌ ಡಿಕ್ಕಿ : ಇಬ್ಬರು ಸವಾರರು ಗಂಭೀರ Read More »

error: Content is protected !!
Scroll to Top