ಸುದ್ದಿ

ಉಡುಪಿ: ಗಾಂಧೀಜಿಯನ್ನು ಟೀಕಿಸಿದ ಹಿಂದೂ ಕಾರ್ಯಕರ್ತೆಯ ವಿರುದ್ಧ ಕೇಸ್‌

ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಗಾಂಧೀಜಿ ಬಗ್ಗೆ ಕಮೆಂಟ್‌ ಮಾಡಿದ್ದ ಮೀನಾಕ್ಷಿ ಸೆಹ್ರಾವತ್‌ ಉಡುಪಿ: ಕೆಲವು ದಿನಗಳ ಹಿಂದೆ ಉಡುಪಿಯಲ್ಲಿ ಗಾಂಧೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಡೆಹ್ರಾಡೂನ್‌ನ ವಾಗ್ಮಿ ಮೀನಾಕ್ಷಿ ಸೆಹ್ರಾವತ್‌ ಎಂಬವರ ವಿರುದ್ಧ ಕೇಸ್‌ ದಾಖಲಾಗಿದೆ. ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಬಾಂಗ್ಲಾ ಪಾಠ ಎಂಬ ವಿಷಯದ ಬಗ್ಗೆ ಹಿಂದಿಯಲ್ಲಿ ಮಾತನಾಡಿ, ಜಿನ್ನಾ ಜೊತೆ ಸೇರಿಕೊಂಡು ಮಹಾತ್ಮ ಗಾಂಧಿ ಪಾಕಿಸ್ಥಾನಕ್ಕೆ ಜನ್ಮ ನೀಡಿದ್ದಾರೆ. ಗಾಂಧೀಜಿ ಹಿಂದೂಗಳನ್ನು ದುರ್ಬಲಗೊಳಿಸಲು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. […]

ಉಡುಪಿ: ಗಾಂಧೀಜಿಯನ್ನು ಟೀಕಿಸಿದ ಹಿಂದೂ ಕಾರ್ಯಕರ್ತೆಯ ವಿರುದ್ಧ ಕೇಸ್‌ Read More »

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವಿವೇಕಾನಂದ

ಇಂದು ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನ ಭಾರತವನ್ನು ಓದಬೇಕೆಂದರೆ ವಿವೇಕಾನಂದರನ್ನು ಓದಿ ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತಿವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ ಬಗ್ಗೆ ಮರು ಓದು ಆರಂಭ ಆಗುತ್ತದೆ. ನಮ್ಮ ದೇಶದ ಬಲಿಷ್ಠ ಯುವಜನತೆಗೆ ಹಿಂದೆ, ಇಂದು ಮತ್ತು ಮುಂದು ಕೂಡ ಅವರೇ ನಿಜವಾದ ಐಕಾನ್. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಶತಮಾನವೇ ಸಂದರೂ ಅವರ ತತ್ವ, ಬೋಧನೆಗಳು ಸಾರ್ವತ್ರಿಕ ಸತ್ಯವಾಗಿ ಕಣ್ಣ ಮುಂದೆ ಇರುತ್ತವೆ. ಬೆಳಕಿನ ಕಿರಣಗಳನ್ನು ಚೆಲ್ಲುತ್ತವೆ.

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವಿವೇಕಾನಂದ Read More »

ಉಪ್ಪಿನಂಗಡಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಉಪ್ಪಿನಂಗಡಿ  : ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಋಣದಿಂದ  ಮುಕ್ತರಾಗುವುದಲ್ಲದೆ ಒಂಟಿತನದಿಂದ ಹೊರಬರಲು ಹಿರಿಯರಿಗೆ ಸಹಾಯಕವಾಗುತ್ತದೆಯೆಂದು ನಿವೃತ್ತ ಭೂ ಸೇನಾ ಕಮಾಂಡೆಂಟ್, ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಸಂಸ್ಥೆಯ ಮಾಲಕ ಡಿ. ಚಂದಪ್ಪ ಮೂಲ್ಯ ತಿಳಿಸಿದರು. ಉಪ್ಪಿನಂಗಡಿ ಪಂಜಳದ ವಿರಾಮದ ಮನೆಯಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ. ರಿ ಮೆಲ್ಕಾರು ಇದರ ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.  ಕಾರ್ಯಕ್ರಮದ ಅತಿಥ್ಯವನ್ನು ವಹಿಸಿದ್ದ ಮುಂಬೈ  ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ

ಉಪ್ಪಿನಂಗಡಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಬಾರ್ಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ

ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ  ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠ  ಉತ್ಸವ ಮತ್ತು ಗ್ರಾಮದೈವದ ನೇಮೋತ್ಸವವು ಫೆಬ್ರವರಿ 7ರಂದು ನಡೆಯಲಿದ್ದು ದೇವಳದ ಆವರಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ದೈವಗಳ ಗುರಿಕಾರ ಭಾಸ್ಕರ ಬಾರ್ಯ ಬಿಡುಗಡೆಗೊಳಿಸಿದರು. ಫೆಬ್ರವರಿ 6ರಂದು ಹಸಿರು ಹೊರೆಕಾಣಿಕೆ, ಭಜನಾ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿದ್ದು ಭಕ್ತಾದಿಗಳು ಸಹಕರಿಸಬೇಕೆಂದು ತಿಳಿಸಿದರು.  ಈ ಸಂದರ್ಭದಲ್ಲಿ  ದೇವಳದ ಅರ್ಚಕ ಗುರುಪ್ರಸಾದ ನೂರಿತ್ತಾಯ,

ಬಾರ್ಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವ ಆಮಂತ್ರಣ ಬಿಡುಗಡೆ Read More »

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕೃಷಿಮೇಳಕ್ಕೆ ಚಾಲನೆ | ದ.ಕ.ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ರಿಂದ ಕೃಷಿ ಮೇಳಕ್ಕೆ ಚಾಲನೆ | ಕಾಣಿಯೂರು ರಾಮತೀರ್ಥ ಮಠದ ಜಾತ್ರಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಕೃಷಿಮೇಳ

ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಕೃಷಿ ಮೇಳದ ಅಂಗವಾಗಿ ಬೃಹತ್ ಕೃಷಿ ಮೇಳಕ್ಕೆ ಶನಿವಾರ ಕಾಣಿಯೂರು ರಾಮತೀರ್ಥಮಠದ ಜಾತ್ರಾ ಮೈದಾನದಲ್ಲಿ ಚಾಲನೆ ನೀಡಲಾಯಿತು. ದ.ಕ.ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ಕೃಷಿಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ನುಡಿದಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕರಾದ ಮನ್ಮಥ ಎಸ್‍.ಎನ್., ಕುಶಾಲಪ್ಪ ಗೌಡ ಪೂವಾಜೆ, ಚಾರ್ವಾಕ

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕೃಷಿಮೇಳಕ್ಕೆ ಚಾಲನೆ | ದ.ಕ.ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ರಿಂದ ಕೃಷಿ ಮೇಳಕ್ಕೆ ಚಾಲನೆ | ಕಾಣಿಯೂರು ರಾಮತೀರ್ಥ ಮಠದ ಜಾತ್ರಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಕೃಷಿಮೇಳ Read More »

ನಿರೂಪಕ ಬಾಲಕೃಷ್ಣ ರೈ ಪೊರ್ದಾಲ್‍ರವರಿಗೆ ಪುತ್ತೂರು ತಾಲೂಕು ಯುವ ಪ್ರಶಸ್ತಿ..!

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆಯಾಗಿದ್ದಾರೆ. ಬಾಲಕೃಷ್ಣ ರೈ ಪೊರ್ದಾಲ್ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಬಹುಮುಖ ಪ್ರತಿಭಾವಂತ ಯುವ ಸಾಧಕ ಎಂದು ಹೇಳಬಹುದು. ರಂಗ ಕಲಾವಿದನಾಗಿ,

ನಿರೂಪಕ ಬಾಲಕೃಷ್ಣ ರೈ ಪೊರ್ದಾಲ್‍ರವರಿಗೆ ಪುತ್ತೂರು ತಾಲೂಕು ಯುವ ಪ್ರಶಸ್ತಿ..! Read More »

ಅಂತರ್ ರಾಜ್ಯ ಮನೆಕಳ್ಳತನ ಆರೋಪಿ ಬಂಧನ | ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು

ಪುತ್ತೂರು  : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎನ್ನುವ ಓರ್ವರ ಮನೆಯಲ್ಲಿ  ಯಾರು ಇಲ್ಲದೇ ಇರುವ ಸಂದರ್ಭದಲ್ಲಿ  ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ದಿನಾಂಕ 20.12.2024ರಂದು ನಡೆದಿದೆ.   ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕಳ್ಳತನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ನಡೆಯುತ್ತಿದ್ದು, ಜಿಲ್ಲಾ, ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು

ಅಂತರ್ ರಾಜ್ಯ ಮನೆಕಳ್ಳತನ ಆರೋಪಿ ಬಂಧನ | ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು Read More »

ಗುತ್ತಿಗೆದಾರ ಆತ್ಮಹತ್ಯೆ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರು ಸಿಐಡಿ ಕಸ್ಟಡಿಗೆ

ಬೆಂಗಳೂರು: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್​ ಸೇರಿದಂತೆ ಐವರು ಆರೋಪಿಗಳನ್ನು ಬೀದರ್​ನ ಜೆಎಂಎಫ್​ಸಿ ನ್ಯಾಯಾಲಯ 5 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ರಾಜು ಕಪನೂರ್​​​, ಗೋರಕ್​ನಾಥ್​​, ಸತೀಶ್​, ನಂದಕುಮಾರ್​​ ನಾಗಭುಂಜಗೆ, ರಾಮಾಗೌಡ ಪಾಟೀಲ್​ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು, ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ.2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ

ಗುತ್ತಿಗೆದಾರ ಆತ್ಮಹತ್ಯೆ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರು ಸಿಐಡಿ ಕಸ್ಟಡಿಗೆ Read More »

ಟ್ರಕ್ – ಬೈಕ್‍ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ; ಟ್ರಕ್ ಬೆಂಕಿಗಾಹುತಿ

ಉಡುಪಿ : ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ  ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಬೈಕ್‍ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜ.10ರ ಶುಕ್ರವಾರ ಮದ್ಯರಾತ್ರಿ ರಾ.ಹೆ. 66 ರ ಉದ್ಯಾವರ ಕೊರಂಗ್ರಪಾಡಿ ಬಳಿ ನಡೆದಿದೆ. ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯರಿಗೆ ಬರುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಯುವಕ ಎನ್ನಲಾಗಿದೆ. ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಅವಿನಾಶ್ ಆಚಾರ್ಯ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಂದ ಹಿಂತಿರುಗುತ್ತಿದ್ದ

ಟ್ರಕ್ – ಬೈಕ್‍ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ; ಟ್ರಕ್ ಬೆಂಕಿಗಾಹುತಿ Read More »

ಕೊಪ್ಪದ ಕಾಡಿನಲ್ಲಿ ಎಕೆ 47 ಬಂದೂಕು ಸಹಿತ ಶಸ್ತ್ರಾಸ್ತ್ರ ಪತ್ತೆ

ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಎಂಬ ಅನುಮಾನ ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಜಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕಿತ್ತಲೆಗಂಡಿ ಕಾಡಿನಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವುಗಳು ಇತ್ತೀಚೆಗೆ ಶರಣಾಗಿರುವ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ಇನ್ನೂ ದೃಢಪಡಿಸಿಲ್ಲ. ಮೇಲ್ನೋಟಕ್ಕೆ ನಕ್ಸಲರದ್ದೇ ಎಂದು ಹೇಳಲಾಗುತ್ತಿದ್ದರೂ ಇನ್ನೂ ಖಚಿತವಾಗಿಲ್ಲ. ತನಿಖೆಯಿಂದ ಗೊತ್ತಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಎಕೆ-47, ಐದು 303 ಕೋವಿ , ಒಂದು ಪಿಸ್ತೂಲ್, 100ಕ್ಕೂ ಹೆಚ್ಚು ಗುಂಡುಗಳು ಮೇಗೂರು ಅರಣ್ಯ ವ್ಯಾಪ್ತಿಯ ಕಿತ್ತಲೆಗಂಡಿ ಅರಣ್ಯ

ಕೊಪ್ಪದ ಕಾಡಿನಲ್ಲಿ ಎಕೆ 47 ಬಂದೂಕು ಸಹಿತ ಶಸ್ತ್ರಾಸ್ತ್ರ ಪತ್ತೆ Read More »

error: Content is protected !!
Scroll to Top