ಶ್ರೀ ರಾಮ ಭಜನಾ ತಂಡ ಆನಡ್ಕ ಪ್ರಥಮ ವಾರ್ಷಿಕೋತ್ಸವದಲ್ಲಿ ಮೇಳೈಸಿದ ಭಜನ ಸಂಕೀರ್ತನ | ಭಕ್ತಿ-ಭಾವ-ಕುಣಿತದ ಸಮ್ಮಿಲನ | ಮನಸೂರೆಗೊಂಡ ವೈಭವದ ಶೋಭಾಯಾತ್ರೆ
ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಶ್ರೀರಾಮ ಭಜನಾ ತಂಡದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಭಜನ ಕೀರ್ತನ ಸಂಭ್ರಮ, ಭಕ್ತಿ-ಭಾವ-ಕುಣಿತದ ಸಮ್ಮಿಲನ ಭಾನುವಾರ ಸಂಜೆ ಆನಡ್ಕದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಜೆ 6.30 ಕ್ಕೆ ಬೀಟಿಕಾಡುವಿನಿಂದ ಆನಡ್ಕದ ವರೆಗೆ ವೈಭವದ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಬನ್ನೂರು ಶನೀಶ್ವರ ಭಜನಾ ತಂಡ, ಕೈಕಾರ ಶ್ರೀ ವಿದ್ಯಾನಿಧಿ ಸರಸ್ವತಿ ಭಜನಾ ತಂಡ, ಸರ್ವೆ ಶ್ರೀ ಸುಬ್ರಾಯ ಭಜನಾ ತಂಡ ಪಾಲ್ಗೊಂಡಿದ್ದು, ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳಂ ನಿಂದ ಚೆಂಡೆ ಪ್ರದರ್ಶನಗೊಂಡಿತು. […]










