ಸುದ್ದಿ

ಮತ್ತೊಮ್ಮೆ ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆ ಬರೆ

ಪೆಟ್ರೋಲು 87 ಪೈಸೆ, ಡೀಸೆಲ್‌ 91 ಪೈಸೆ ಹೆಚ್ಚಳ ನವದೆಹಲಿ : ಹತ್ತೇ ದಿನದ ಅವಧಿಯಲ್ಲಿ ಮತ್ತೊಮ್ಮೆ ಪೆಟ್ರೋಲು ಮತ್ತು ಡೀಸೆಲ್‌ ದರ ಏರಿಕೆಯಾಗಿದೆ. ದೇಶದಲ್ಲಿ ದೀರ್ಘಕಾಲದವರೆಗೆ ಸ್ಥಿರವಾಗಿದ್ದ ಇಂಧನ ದರಗಳಿಗೆ ಈಗ ಜಾಗತಿಕ ಮಾರುಕಟ್ಟೆಯ ಬಿಸಿ ತಟ್ಟಿದೆ. ಶನಿವಾರದ ತೈಲ ಕಂಪನಿಗಳ ನಿರ್ಧಾರದಂತೆ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಆಗಿದ್ದು ಡೀಸೆಲ್ ಬೆಲೆ 95.04 ರೂ. ಆಗಿದೆ. […]

ಮತ್ತೊಮ್ಮೆ ಪೆಟ್ರೋಲು, ಡೀಸೆಲ್‌ ಬೆಲೆ ಏರಿಕೆ ಬರೆ Read More »

ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಶ್ರೀ ಮಹಾಭಾರತ ಕಥಾವ್ಯಾಖ್ಯಾನ

ಗುರುವಾಯನಕೆರೆ: ಶ್ರೀ ಶಾರದಾ ಭಜನಾ ಮಂಡಳಿ ತಣ್ಣೀರು ಪಂತ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ವಲಯ ಸಹಯೋಗದಲ್ಲಿ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಭಜನಾ ಮಂಡಳಿಯ ವಠಾರದಲ್ಲಿ ಜರಗಿತು. ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಶಿಬಿರಾರ್ಥಿಗಳಿಗೆ ಶ್ರೀ ಮಹಾಭಾರತ ಕಥಾ ನಿರೂಪಣೆ ಮಾಡಿದರು. ಮಹಾಭಾರತವೂ ದಾಯಾದಿಗಳ ಕಲಹವಾದರೂ ಧರ್ಮ ಅಧರ್ಮಗಳ ಸಂಘರ್ಷವಾಗಿದೆ. ಶ್ರೀ ಕೃಷ್ಣನು ಪಾಂಡವರ ಮೂಲಕ ಧರ್ಮವನ್ನು ಉದ್ದರಿಸಿ ಸತ್ಯ

ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಶ್ರೀ ಮಹಾಭಾರತ ಕಥಾವ್ಯಾಖ್ಯಾನ Read More »

ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ: ಪಾಣೆಮಂಗಳೂರು ನೂತನ ಸೇತುವೆಯ ಕೆಳಭಾಗದಲ್ಲಿ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಮೃತನನ್ನು ಗೂಡಿನ ಬಳಿ ನಿವಾಸಿ ಇರ್ಫಾನ್ (36) ಎಂದು ಗುರುತಿಸಲಾಗಿದೆ. ಸೇತುವೆ ಕೆಳಭಾಗದಲ್ಲಿ ಇಂದು ಮುಂಜಾನೆ ಇರ್ಫಾನ್ ಶವ ಸಿಕ್ಕಿದೆ. ಬಂಟ್ವಾಳ ಪುರಸಭಾ ಪೌರ ಕಾರ್ಮಿಕರು ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ನೇತ್ರಾವತಿ ನದಿಯಲ್ಲಿ ಮೃತದೇಹ ಕಂಡಿದೆ. ಶವವನ್ನು ಸ್ಥಳೀಯರು ನದಿಯಿಂದ ಮೇಲಕ್ಕೆತ್ತಿ, ಗುರುತು ಪತ್ತೆಗಾಗಿ ಬಂಟ್ವಾಳ‌ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಮೃತ ವ್ಯಕ್ತಿಯ ಗುರುತು

ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ Read More »

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ: ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿ

ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಮುಸ್ಲಿಮರನ್ನು ಓಲೈಸುವ ದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಚುನಾವಣಾ ಬಳಿಕ ಮುಸಲ್ಮಾನರ ವಿರೋಧ ಸರಿಪಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್‌ ಸಂಬಂಧ ಮುಸ್ಲಿಂ ವಿದ್ಯಾರ್ಥಿನಿಯರೇ ಕೋರ್ಟ್‌ಗೆ ಹೋಗಿದ್ದರು. ಆದರೆ ಹಿಜಾಬ್ ಕಡ್ಡಾಯ ಎಂದು ಕುರಾನ್‌ನಲ್ಲಿ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಶಾಲೆಯ ಗೇಟಿನ

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ: ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿ Read More »

24 ರಾಜ್ಯಸಭಾ ಸ್ಥಾನಗಳಿಗೆ ಜೂ.18ರಂದು ಚುನಾವಣೆ

ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಎರಡು ಉಪಚುನಾವಣೆ ನವದೆಹಲಿ: 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಜೂನ್ 18ರಂದು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಜೊತೆಗೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಎರಡು ಉಪಚುನಾವಣೆಗಳನ್ನೂ ನಡೆಸಲಾಗುವುದು ಎಂದು ತಿಳಿಸಿದೆ. ಭಾರತೀಯ ಚುನಾವಣಾ ಆಯೋಗವು ಇಂದು ಶುಕ್ರವಾರ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದ್ದು, ಜೂನ್ 18ರಂದು ಮತದಾನ ನಡೆಯಲಿದೆ ಎಂದು ತಿಳಿಸಿದೆ. ಪ್ರಸ್ತುತ ರಾಜ್ಯಸಭಾ ಸದಸ್ಯರ ಅವಧಿ

24 ರಾಜ್ಯಸಭಾ ಸ್ಥಾನಗಳಿಗೆ ಜೂ.18ರಂದು ಚುನಾವಣೆ Read More »

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ : ಹಿಂದು ಮುಖಂಡರ ಆಕ್ರೋಶ

ಸ್ಪೀಕರ್‌ ಯು.ಟಿ.ಖಾದರ್‌ ಶಿಫಾರಸ್ಸಿನ ಮೇರೆಗೆ ಕೇಸ್‌ ಹಿಂಪಡೆದ ಸರ್ಕಾರ ಬೆಂಗಳೂರು: ರಾಜ್ಯ ಸರ್ಕಾರ ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆಯಲು ನಿರ್ಧರಿಸಿ ಮತ್ತೆ ಅಲ್ಪಸಂಖ್ಯಾತರನ್ನು ಓಲೈಸಲು ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 52 ಪ್ರಕರಣಗಳನ್ನು ವಾಪಸ್‌ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಬಿಜೆಪಿ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದೆ. ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮನವಿ ಮೇರೆಗೆ ಈ ಕೇಸ್ ವಾಪಸ್ ಪಡೆದುಕೊಂಡಿದೆ. ಈ ಮೂಲಕ ಮುಸ್ಲಿಂ ಯುವಕರು ಹಾಗೂ ಕೆಲ

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ : ಹಿಂದು ಮುಖಂಡರ ಆಕ್ರೋಶ Read More »

ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

ಲೋಕಾಯುಕ್ತರೇ ಬಹಿರಂಗಪಡಿಸಿದ ಮಾಹಿತಿ ಬೆಂಗಳೂರು : ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದ್ದು, ಕರ್ನಾಟಕ ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಮಂಡ್ಯ ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಬಾಕಿ ಉಳಿದಿದ್ದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಲಿದೆ. ಬದಲಾವಣೆ ಅಧಿಕಾರಿಗಳಿಂದಲೂ, ನಾಗರಿಕರಿಂದಲೂ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ 16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು

ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ Read More »

ಪ. ಬಂಗಾಳ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸಿದ ಬಿಜೆಪಿ ಸರ್ಕಾರ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಮಹತ್ವದ ಕ್ರಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಪ. ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದನ್ನು ‌ಕಡ್ಡಾಯಗೊಳಿಸಿ ಅಲ್ಲಿನ ನೂತನ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಮದರಸಾ ನಿರ್ದೇಶನಾಲಯದಿಂದ ‌ಮೇ 21 ರಂದು ಈ ಆದೇಶ ಬಂದಿರುವುದಾಗಿದೆ. ಶಾಲೆಗಳಲ್ಲಿ ರಾಷ್ಟ್ರೀಯ ಗೀತೆಗಳನ್ನು ಹಾಡುವುದನ್ನು ಕಳೆದ ವಾರವಷ್ಟೇ ಜಾರಿಗೊಳಿಸಲಾಗಿತ್ತು. ಇದೀಗ ಹೊರಬಿದ್ದಿರುವ ಆದೇಶದ ಪ್ರಕಾರ ಮದರಸಾಗಳು, ಸರ್ಕಾರ ಸಮ್ಮತಿಸಿರುವ ಶಿಕ್ಷಾ ಕೇಂದ್ರಗಳು, ಅನುದಾನಿತ ಮದರಸಾಗಳು, ಮಾಧ್ಯಮಿಕ ಶಿಕ್ಷಾ ಕೇಂದ್ರಗಳಲ್ಲಿ ತರಗತಿ ಆರಂಭಕ್ಕೂ

ಪ. ಬಂಗಾಳ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸಿದ ಬಿಜೆಪಿ ಸರ್ಕಾರ Read More »

ಅಜ್ಜಿ ಮನೆಯಲ್ಲಿದ್ದ ಯುವತಿಗೆ ‌ಕುಡುಕ ಮಾವನಿಂದ ಹಲ್ಲೆ: ಪ್ರಕರಣ ದಾಖಲು

ಕಡಬ: ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದ ಯುವತಿಯೊಬ್ಬಳ ಮೇಲೆ ಮದ್ಯದ ಅಮಲಿನಲ್ಲಿದ್ದ ಮಾವ‌ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿ ವಿಕೃತಿ ಮೆರೆದ ಘಟನೆ ಕೊಡಿಂಬಾಳದ ಬಳ್ಳಿಕಜೆ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ಬಿಜು ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವತಿಯನ್ನು ‌ಸೋನ್ವಿ(22) ಎಂದು ಗುರುತಿಸಲಾಗಿದೆ. ಈಕೆ ತನ್ನ ತಾಯಿಯ ಮರಣದ ನಂತರ ತನ್ನ ಅಜ್ಜಿಯ ಜೊತೆಗೆ ಅವರ ಮನೆಯಲ್ಲಿ ವಾಸವಿದ್ದಳು. ಆರೋಪಿ ಬಿಜು ಬೆಳ್ತಂಗಡಿಯ ಕಡಿರುದ್ಯಾವರ ನಿವಾಸಿಯಾಗಿದ್ದು

ಅಜ್ಜಿ ಮನೆಯಲ್ಲಿದ್ದ ಯುವತಿಗೆ ‌ಕುಡುಕ ಮಾವನಿಂದ ಹಲ್ಲೆ: ಪ್ರಕರಣ ದಾಖಲು Read More »

error: Content is protected !!
Scroll to Top