ಸುದ್ದಿ

ಭೀಕರ ಗುಂಡಿನ ದಾಳಿ : 6 ಪೊಲೀಸರ ಸಹಿತ 25 ಮಂದಿ ಸಾವು

ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು ವಾಷಿಂಗ್ಟನ್ : ಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಹಾಗೂ ಗ್ಯಾಂಗ್‌ವಾರ್​ಗಳಿಂದ ಸದಾ ಸುದ್ದಿಯಲ್ಲಿರುವ ಹೊಂಡುರಾಸ್ ಕರಾವಳಿ ಪ್ರದೇಶದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಎರಡು ಪ್ರತ್ಯೇಕ ಘಟನೆಯಲ್ಲಿ 6 ಮಂದಿ ಪೊಲೀಸರು ಸೇರಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಂಡುರಾಸ್ ಎಂಬುದು ಮಧ್ಯ ಅಮೆರಿಕದಲ್ಲಿರುವ ಮತ್ತೊಂದು ದೇಶವಾಗಿದೆ. ಮೊದಲ ಆಘಾತಕಾರಿ ಘಟನೆ ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊದಲ್ಲಿ ನಡೆದಿದೆ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹಕ್ಕುಗಳಿಗಾಗಿ ದಶಕಗಳಿಂದ ಸಂಘರ್ಷ ನಡೆಯುತ್ತಿರುವ ಈ […]

ಭೀಕರ ಗುಂಡಿನ ದಾಳಿ : 6 ಪೊಲೀಸರ ಸಹಿತ 25 ಮಂದಿ ಸಾವು Read More »

ಜಾನುವಾರು ಅಕ್ರಮ ಸಾಗಾಟ : ಓರ್ವ ಸೆರೆ, ಇನ್ನೋರ್ವ ಪರಾರಿ

ವಧಿಸಲು ಎರಡು ಜಾನುವಾರುಗಳ ಅಕ್ರಮ ಸಾಗಾಟ ವಿಟ್ಲ: ಇಲ್ಲಿನ ಕೊಳ್ನಾಡು ಸಮೀಪ ಪಂಜರಕೋಡಿ ಎಂಬಲ್ಲಿ ಪಿಕಪ್ ವಾಹನದಲ್ಲಿ ವಧಿಸುವ ಉದ್ದೇಶದಿಂದ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆ ಮಾಡಿ ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಬಶೀರ್ ಬಂತಾ ಪರಾರಿಯಾಗಿದ್ದಾನೆ‌ ಎಂದು ಪೊಲೀಸರು ತಿಳಿಸಿದ್ದು, ಚಾಲಕ ಬಾಳೆಪುಣಿ ನಿವಾಸಿ ಹನೀಫ್ (44) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮೇ 21ರಂದು ಬೆಳಗ್ಗೆ ಅಕ್ರಮ ಗೋ ಸಾಗಾಟದ ಮಾಹಿತಿ ಪಡೆದ ಪೊಲೀಸರು ಪಂಜರಕೋಡಿ ಎಂಬಲ್ಲಿಗೆ

ಜಾನುವಾರು ಅಕ್ರಮ ಸಾಗಾಟ : ಓರ್ವ ಸೆರೆ, ಇನ್ನೋರ್ವ ಪರಾರಿ Read More »

ಕಾಣೆಯಾಗಿದ್ದ ಆಟೋ ಚಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರು ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಇರ್ಫಾನ್ (36) ಅವರ ಮೃತದೇಹ ಎಂದು ತಿಳಿದು ಬಂದಿದೆ. ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಣೆ ಕಾರ್ಯ ಮಾಡುತ್ತಿದ್ದ ವೇಳೆ ಮೃತದೇಹ ನದಿಯಲ್ಲಿ ಕಂಡು ಬಂದಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಪೊಲೀಸರು ಹಾಗೂ ಗೂಡಿನ‌ಬಳಿಯ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿ, ಗುರುತು ಪತ್ತೆ

ಕಾಣೆಯಾಗಿದ್ದ ಆಟೋ ಚಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಮಂಗಳೂರು : ಧರೆ ಕುಸಿದು ಕಾಂಟ್ರಾಕ್ಟರ್‌ ಸಾವು

ಕುಸಿವ ಭೀತಿಯಲ್ಲಿದ್ದ ಧರೆಗೆ ತಡೆಗೋಡೆ ನಿರ್ಮಿಸುವಾಗ ಸಂಭವಿಸಿದ ದುರಂತ ಮಂಗಳೂರು: ನಗರದಲ್ಲಿ ಮಳೆಗಾಲಕ್ಕೂ ಮೊದಲೇ ಭೂಕುಸಿತ ಘಟನೆ ಸಂಭವಿಸಿದೆ. ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಿಕಾನ ಸಮೀಪದ ಲೋಹಿತ್ ನಗರದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಧರೆ ಜರಿತ ದುರಂತದಲ್ಲಿ ಕಂಟ್ರಾಕ್ಟರ್ ಒಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಉರ್ವ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಎಂದು ಗುರುತಿಸಲಾಗಿದೆ. ಮೇ 21ರಂದು ಸುಮಾರು ಮಧ್ಯಾಹ್ನ ವೇಳೆಗೆ ಮನೆಯೊಂದರ ಹಿಂಭಾಗದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಅಳತೆ ಮಾಡುವ ಕಾರ್ಯ ನಡೆಯುತ್ತಿತ್ತು. ಮಳೆಗಾಲದಲ್ಲಿ

ಮಂಗಳೂರು : ಧರೆ ಕುಸಿದು ಕಾಂಟ್ರಾಕ್ಟರ್‌ ಸಾವು Read More »

ಮನೆಗೆ ನುಗ್ಗಿ ಹಲ್ಲೆ : ಆರೋಪಿ ಸೆರೆ

ಬೆಳ್ತಂಗಡಿ : ಹಳೆ ದ್ವೇಷದಲ್ಲಿ ಅತ್ತೆ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಬಳಿಕ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣ ಆರಂಬೋಡಿ ಗ್ರಾಮದ ದೇಲೋಡಿಯಲ್ಲಿ ನಡೆದಿದ್ದು ಪ್ರಕರಣದ‌ ಆರೋಪಿ ಪ್ರಸನ್ನ ಕುಮಾರ್ (33) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪ್ರಸನ್ನ ಕುಮಾರ್ ದೂರುದಾರ ಸುಜಾತ ಅವರ ಗಂಡನ ತಮ್ಮನಾಗಿದ್ದು ಈತ ಸುಜಾತ ಹಾಗೂ ಆಕೆಯ ತಾಯಿಯದಿಗೆ ಪೂರ್ವ ದ್ವೇಷ ಹೊಂದಿದ್ದು ಆಗಾಗ ತಾಯಿ ಮಗಳಿಗೆ ನಿಮ್ಮನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದ. ಇದೇ ವಿಚಾರದಲ್ಲಿ

ಮನೆಗೆ ನುಗ್ಗಿ ಹಲ್ಲೆ : ಆರೋಪಿ ಸೆರೆ Read More »

ಮತ್ತೆ ಶುರುವಾದ ಬುರುಡೆ ಪ್ರಕರಣದ ತನಿಖೆ : ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲನೆ

ಬುರುಡೆ ತೆಗೆದ ಸ್ಥಳದಲ್ಲಿ ಘಟನೆಯನ್ನು ಮರಸೃಷ್ಟಿಸಿ ತನಿಖೆ ಮಂಗಳೂರು: ಕೆಲ ಸಮಯದಿಂದ ತಣ್ಣಗಾಗಿದ್ದ ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 4 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಕಾಡಿಗೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದೆ. ಮೂವರು ಅಧಿಕಾರಿಗಳನ್ನೊಳಗೊಂಡ ಎಫ್‌ಎಸ್‌ಎಲ್‌ ಅಧಿಕಾರಿಗಳ ತಂಡ ಗುರುವಾರ ಬೆಂಗಳೂರಿನಿಂದ ಎಸ್‌ಐಟಿ ಅಧಿಕಾರಿಗಳೊಂದಿಗೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದೆ. 4

ಮತ್ತೆ ಶುರುವಾದ ಬುರುಡೆ ಪ್ರಕರಣದ ತನಿಖೆ : ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲನೆ Read More »

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು

ರನ್‌ವೇಗೆ ಅಪ್ಪಳಿಸಿದ ಇಳಿಯುತ್ತಿದ್ದ ವಿಮಾನದ ಹಿಂಭಾಗ ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಬಾಲವು ನೆಲಕ್ಕೆ ಅಪ್ಪಳಿಸಿದ್ದು, ಭಾರಿ ಅವಘಡ ತಪ್ಪಿದೆ. ಗುರುವಾರ ಬೆಳಗ್ಗೆ 181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ AI2651 ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಇನ್ನೊಂದು ವಿಮಾನ ಅದೇ ರನ್‌ವೇಯಿಂದ ಟೇಕ್-ಆಫ್ ಆಗುತ್ತಿತ್ತು. ಇದರಿಂದಾಗಿ ಗಾಳಿಯಲ್ಲಿ ಅಸಮತೋಲನ ಉಂಟಾದಂತೆ

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು Read More »

ದ್ವಿತೀಯ ಪಿಯುಸಿ 2ನೇ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಎ. 30 ರಿಂದ ಮೇ 13 ರ ವರೆಗೆ 253 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ 2 ನೇ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ 80,535 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌. ಫಲಿತಾಂಶ ತಿಳಿಯಲು ನೋಂದಣಿ ಸಂಖ್ಯೆ ಮತ್ತು ಸಂಯೋಜನೆಯನ್ನು ವೆಬ್‌ಸೈಟ್ https://dpue-https://karresults.nic.in ಅಥವಾ https://dpue-exam.karnataka.gov.in/kseabdpue2025e1e2e3/WebForm1.aspx ನಲ್ಲಿ ಅಥವಾ ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು.

ದ್ವಿತೀಯ ಪಿಯುಸಿ 2ನೇ ಪರೀಕ್ಷಾ ಫಲಿತಾಂಶ ಪ್ರಕಟ Read More »

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ

ಭಟ್ಕಳ: ಕಾರುಗಳೆರಡರ ನಡುವೆ ನಡೆದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡು, ಎರಡೂ ಕಾರುಗಳು ಜಖಂ ಆದ ಘಟನೆ ವೆಂಕ್ಟಾಪುರ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ನಡೆದಿದೆ. ಗಾಯಾಳುಗಳನ್ನು ಹಾವೇರಿ ಮೂಲದ ಬೀಮಪ್ಪ ಹನುಮಂತಪ್ಪ ಗಣಜೂರು, ಮೊಹಮ್ಮದ್ ಮುಶಾಫರ್ (26), ಪೌಜಿಯಾ ಎ., ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ಸ್ (19) ಎಂದು ಗುರುತಿಸಲಾಗಿದೆ. ಹಾವೇರಿಯಿಂದ ಬಂಟ್ವಾಳದತ್ತ ಹೋಗುತ್ತಿದ್ದ ಕಾರಿಗೆ ಭಟ್ಕಳದಿಂದ ಹೊನ್ನಾವರದತ್ತ ಹೋಗುತ್ತಿದ್ದ ಕಾರು ಗುದ್ದಿದೆ.

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ Read More »

ಹಿಂದೂ ಯುವತಿ ಮತಾಂತರ ಪ್ರಯತ್ನ ಪ್ರಶ್ನಿಸಿದ ಹಿಂದೂ ಯುವಕನ ಮೇಲೆ‌ ಹಲ್ಲೆ

ಪುತ್ತೂರು: ಹಿಂದೂ ಯುವತಿಯ ಮತಾಂತರ ಯತ್ನವನ್ನು ‌ಪ್ರಶ್ನೆ ಮಾಡಿದ ಹಿಂದೂ ಕಾರ್ಯ ಕೀರ್ತನ ಮೇಲೆ ಹಲ್ಲೆ ನಡೆದ ಘಟನೆ ಪೆರ್ಲದಲ್ಲಿ ನಿನ್ನೆ ನಡೆದಿದೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಅವಿನಾಶ್ (23) ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಅವಿನಾಶ್ ಅವರನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಿಯೋಗ ಭೇಟಿ ಮಾಡಿದ್ದು, ಆರೋಗ್ಯ ವಿಚಾರಣೆ ನಡೆಸಿದೆ.

ಹಿಂದೂ ಯುವತಿ ಮತಾಂತರ ಪ್ರಯತ್ನ ಪ್ರಶ್ನಿಸಿದ ಹಿಂದೂ ಯುವಕನ ಮೇಲೆ‌ ಹಲ್ಲೆ Read More »

error: Content is protected !!
Scroll to Top