ಸುದ್ದಿ

ದುಬಾರೆ ಪ್ರಕರಣ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ಮಡಿಕೇರಿ: ದುಬಾರೆಯ ಆನೆ ಕ್ಯಾಂಪಿನಲ್ಲಿ ಮಹಿಳೆ ಮತ್ತು ಸಾಕಾನೆಯೊಂದು ಮೃತಪಟ್ಟ ಪ್ರಕರಣದಲ್ಲಿ ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಸೋಮವಾರಪೇಟೆಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಎ., ಕುಶಾಲನಗರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಪ್ರಕರಣ ದಾಖಲು ಮಾಡಿರುವುದಾಗಿದೆ. ಕೆಲ ದಿನಗಳ ಹಿಂದೆ ದುಬಾರೆಯಲ್ಲಿ ಎರಡು ಆನೆಗಳ ನಡುವೆ ಭೀಕರ ಕಾದಾಟ ನಡೆದಿದ್ದು, ಇದರಲ್ಲಿ ತಮಿಳುನಾಡಿನ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. […]

ದುಬಾರೆ ಪ್ರಕರಣ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್ Read More »

ಡಾಕ್ಟರ್ ಮನೆಯಲ್ಲಿ ನಗದು ಕದ್ದ ‌ಕಳ್ಳ ಪೊಲೀಸರ ಬಲೆಗೆ

ಪುತ್ತೂರು: ಡಾಕ್ಟರ್ ಒಬ್ಬರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಬಪ್ಪಳಿಗೆಯ ಸಿಂಗಾಣಿ ನಿವಾಸಿ ಸುರೇಶ್(47) ಎಂದು ಗುರುತಿಸಲಾಗಿದೆ. ಸುರೇಶ್ ಉರ್ಲಾಂಡಿಯ ಸುಶ್ರುತ ಆಸ್ಪತ್ರೆಯ ಸಮೀಪದ ಡಾ. ವೆಂಕಟ್ರಮಣ ಭಟ್ ಅವರ ಮನೆಯ ಹೆಂಚು ಜಾರಿಸಿ, ಮನೆಯೊಳಗೆ ನುಗ್ಗಿ ನಗದು ಕಳ್ಳತನ ಮಾಡಿದ್ದ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆತನನ್ನು ಬಂಧಿಸಿರುವುದಾಗಿದೆ. ಸಿಸಿ ಕೆಮರಾ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ಸುಳಿವು ಪತ್ತೆ ಮಾಡಿ, ಆತನನ್ನು ಬಂಧಿಸಿರುವುದಾಗಿದೆ.

ಡಾಕ್ಟರ್ ಮನೆಯಲ್ಲಿ ನಗದು ಕದ್ದ ‌ಕಳ್ಳ ಪೊಲೀಸರ ಬಲೆಗೆ Read More »

ಮುಂಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕೈಯೂರಿನ ಯುವಕ

ಪುತ್ತೂರು: ಕೆಯ್ಯೂರು ನಿವಾಸಿ ಯುವಕನೊಬ್ಬ ಮುಂಬೈ‌ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತರನ್ನು ‌ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಅವರು ಉರ್ಲ ಎಂಬಲ್ಲಿ ಹೊಟೇಲ್ ಉದ್ಯೋಗಿಯಾಗಿ, ಅಲ್ಲೇ‌‌ ವಾಸಿಸುತ್ತಿದ್ದರು. ಮೇ. 21 ರಂದು ಅವರು ತಮ್ಮ ರೂಮ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕಾರ್ತಿಕ್ ಶವವನ್ನು ಹುಟ್ಟೂರಾದ ಕೈಯೂರಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೃತರು ‌ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಮುಂಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕೈಯೂರಿನ ಯುವಕ Read More »

ಪಹಲ್ಗಾಮ್ ದಾಳಿಕೋರರಿಗೆ ಆಹಾರ ನೀಡಿದ್ದರಾ ಸ್ಥಳೀಯರು?: ಎನ್‌ಐಎ ಚಾರ್ಜ್‌ಶೀಟ್‌ನಲ್ಲೇನಿದೆ ಗೊತ್ತಾ?

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರಗಾಮಿಗಳಿಗೆ ಅಲ್ಲಿನ ಸ್ಥಳೀಯರೇ ನೆರವು ನೀಡಿರುವ ಬಗ್ಗೆ ಎನ್‌‌ಐಎ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಎನ್‌ಐಎ ಸಲ್ಲಿಸಿದ ಆರೋಪ ಪಟ್ಟಿ ಮಾಧ್ಯಮಗಳಿಗೂ ‌ಲಭ್ಯವಾಗಿದ್ದು, ಪಹಲ್ಗಾಮ್ ದಾಳಿಯ ಹಿಂದಿನ ದಿನ ಸ್ಥಳೀಯ ಕುದುರೆ ಸವಾರರಾದ ಬಶೀರ್ ಅಹ್ಮದ್ ಮತ್ತು ಪರ್ವೈಜ್ ಅಹ್ಮದ್ ಎಂಬವರು ಮೂವರು ಉಗ್ರರಿಗೆ ತಮ್ಮ ಮನೆಯಲ್ಲೇ ಆಹಾರ ನೀಡಿದ್ದಾರೆ. ಸ್ಥಳೀಯರಿಂದಲೇ ಅಮರನಾಥ ಯಾತ್ರಿಗಳು ಮತ್ತು ಭದ್ರತಾ ಪಡೆಗಳ‌ ನಿಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾಗಿಯೂ ಈ ವರದಿಯಲ್ಲಿ

ಪಹಲ್ಗಾಮ್ ದಾಳಿಕೋರರಿಗೆ ಆಹಾರ ನೀಡಿದ್ದರಾ ಸ್ಥಳೀಯರು?: ಎನ್‌ಐಎ ಚಾರ್ಜ್‌ಶೀಟ್‌ನಲ್ಲೇನಿದೆ ಗೊತ್ತಾ? Read More »

ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಕಲ್ಬುರ್ಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ 13 ಪ್ರಕರಣಗಳನ್ನು ಸಂಪುಟ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು ಇದನ್ನು ಬಿಜೆಪಿ ಖಂಡಿಸಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಬಹುಸಂಖ್ಯಾತರ ಧಾರ್ಮಿಕ ಭಾವನೆ ಮತ್ತು ನಾಡಿನ ಸುರಕ್ಷತೆಯನ್ನು ಮುಸ್ಲಿಂ ಓಟ್‌ಬ್ಯಾಂಕ್‌ಗೆ ಅಡವಿಟ್ಟಿರುವ ಕಾಂಗ್ರೊಸಿನ ಜನವಿರೋಧಿ ಧೋರಣೆಯನ್ನು ಕರುನಾಡ ಜನತೆ ಎಂದಿಗೂ ಕಾಷಮಿಸುವುದಿಲ್ಲ ಎಂದು ಹೇಳಿದ್ದಾರೆ. ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ

ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿ ಆಕ್ರೋಶ Read More »

ಟ್ರಂಪ್‌ ಪುತ್ರಿಯ ಹತ್ಯೆಗೆ ಸಂಚು : ಇರಾನ್‌ನ ಉಗ್ರ ಸೆರೆ

ಇರಾನ್‌ ಕಮಾಂಡರ್ ಖಾಸೆಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಲು ಹೊಂಚು ಹಾಕಿದ್ದ ಉಗ್ರ ವಾಷಿಂಗ್ಟನ್‌: ಇರಾನ್‌ನ ಪ್ರಭಾವಿ ಕಮಾಂಡರ್ ಖಾಸೆಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರನ್ನು ಹತ್ಯೆ ಮಾಡಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನಿಂದ ತರಬೇತಿ ಪಡೆದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಈ ಹತ್ಯಾ ಸಂಚಿಗೆ ಸಂಬಂಧಿಸಿದಂತೆ ಮೊಹಮ್ಮದ್ ಬಾಕರ್ ಸಾದ್ ದಾವೂದ್ ಅಲ್-ಸಾದಿ (32) ಎಂಬ ಶಂಕಿತ ಉಗ್ರನನ್ನು ಇತ್ತೀಚೆಗೆ ಬಂಧಿಸಲಾಗಿದ್ದು,

ಟ್ರಂಪ್‌ ಪುತ್ರಿಯ ಹತ್ಯೆಗೆ ಸಂಚು : ಇರಾನ್‌ನ ಉಗ್ರ ಸೆರೆ Read More »

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ವ್ಯಕ್ತಿ ಸೆರೆ

ಪುಣೆಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಆರೋಪಿ ಪುಣೆ: ಮಹತ್ವದ ಬೆಳವಣಿಗೆಯಲ್ಲಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮತ್ತೊಂದು ಬಂಧನ ಮಾಡಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆ (CBI) ಅಧಿಕಾರಿಗಳು NEET UG 2026 ಭೌತಶಾಸ್ತ್ರ ಪ್ರಶ್ನೆಪತ್ರಿಕೆಯನ್ನು ಆಯ್ದ ವಿದ್ಯಾರ್ಥಿಗಳಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಪುಣೆಯ ಉಪನ್ಯಾಸಕಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಉಪನ್ಯಾಸಕಿಯನ್ನು ಮನಿಶಾ ಸಂಜಯ್ ಹವಾಲ್ದಾರ್ ಎಂದು ಗುರುತಿಸಲಾಗಿದ್ದು, ಅವರು ಪ್ರಸ್ತುತ ಪುಣೆಯ ಸೇಠ್

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ವ್ಯಕ್ತಿ ಸೆರೆ Read More »

ಉಪ್ಪಿನಂಗಡಿ : 70 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಪಂಜಳ ಎಂಬಲ್ಲಿ ಕೊಕ್ಕಡದ ಪಟ್ಟೂರಿಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 70 ಅಡಿ ಆಳಕ್ಕೆ ಉರುಳಿದ ಬಿದ್ದ ಘಟನೆ ಶುಕ್ರವಾರ ಸಂಬವಿಸಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಸುಮಾರು 70 ಅಡಿ ಆಳದ ಕಂದಕಕ್ಕೆ ಕಾರು ಉರುಳಿದೆ. ಅಪಘಾತಕ್ಕೀಡಾದ ಕಾರಿನಲ್ಲಿ ಪಟ್ರಮೆ ಗ್ರಾಮದ ದೇರಾಜೆ ನಿವಾಸಿ ಹಾಗೂ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ದೇರಾಜೆ ಮತ್ತು ಅವರ ಸಹೋದರ ಪ್ರವೀಣ್ ದೇರಾಜೆ ಪ್ರಯಾಣಿಸುತ್ತಿದ್ದರು.

ಉಪ್ಪಿನಂಗಡಿ : 70 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು Read More »

ಬಾವಿ ಕುಸಿದು ಕಾರ್ಮಿಕ ಸಾವು

ತೋಡುತ್ತಿರುವಾಗಲೇ ಕುಸಿದ ಬಾವಿ ಉಡುಪಿ : ಮಲ್ಪೆ ಸಮೀಪ ಕೊಡವೂರಿನ ಗರಡಿಮಜಲು ಎಂಬಲ್ಲಿ ಬಾವಿ ತೋಡುವ ಕೆಲಸದ ವೇಳೆ ಒಂದು ಭಾಗ ಕುಸಿದು ಕೊಪ್ಪಳದ 25 ವರ್ಷದ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ರಮೇಶ್ (25) ಎಂದು ಗುರುತಿಸಲಾಗಿದ್ದು, ಇವರು ಕಾರ್ಕಳದ ಪ್ರಭಾತ್ ಶೆಟ್ಟಿ ಎಂಬವರ ಗುತ್ತಿಗೆಯಡಿ ಬಾವಿ ತೋಡುವ ಕೆಲಸಲ್ಲೆ ಇತರ ಐದು ಮಂದಿಯೊಂದಿಗೆ ಕಾರ್ಕಳದಿಂದ ಬಂದಿದ್ದರು. ಬಾವಿ ತೋಡಿ ಕಾರ್ಮಿಕರು ಮೇಲೆ ಬರುವಾಗ ಕುಸಿತ ಸಂಭವಿಸಿದೆ. ಉಳಿದವರು ಅದಾಗಲೇ ಮೇಲೆ

ಬಾವಿ ಕುಸಿದು ಕಾರ್ಮಿಕ ಸಾವು Read More »

ಕ್ರೂಸರ್‌- ಲಾರಿ ಡಿಕ್ಕಿ : ಒಂದೇ ಕುಟುಂಬದ ಐವರು ಸಾವು

ಕಲಬುರಗಿ: ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ. ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಶಾ (48), ಮೈಬೂಬ್ ಅಲಿ (45), ರಸೂಲ್ ಬೀ (42), ಫಾತೀಮಾ ಅಲೀ (38) ಮೃತರು. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದವರು. ಲಾಡ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿ

ಕ್ರೂಸರ್‌- ಲಾರಿ ಡಿಕ್ಕಿ : ಒಂದೇ ಕುಟುಂಬದ ಐವರು ಸಾವು Read More »

error: Content is protected !!
Scroll to Top