ರಾಜ್ಯ

ಪುಟ್ಟ ಮಗುವಿನ ಶವ ತೇಲುತ್ತಿರುವ‌ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ

ಬೆಂಗಳೂರು: ಪುಟಾಣಿ ಮಗುವಿನ ಶವವೊಂದು ‌ಮಾಗಡಿ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುದೂರು ‌ಪೊಲೀಸ್ ಠಾಣಾ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿ ಈ ದೃಶ್ಯ ಕಂಡು ಬಂದಿದೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಈ ದೃಶ್ಯವನ್ನು ಮೊದಲು ನೋಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿಯನ್ವಯ ಮಗು ಸತ್ತು ಸುಮಾರು ಎರಡು ತಿಂಗಳುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ಆರಂಭ ಮಾಡಿರುವ ಪೊಲೀಸರು ಮಗುವಿನ ಈ ಸ್ಥಿತಿಗೆ ಕಾರಣ ಏನು?, […]

ಪುಟ್ಟ ಮಗುವಿನ ಶವ ತೇಲುತ್ತಿರುವ‌ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆ Read More »

ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ

ಜಿಡೆಕಲ್ಲು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆಕರ್ಷಕವಾಗಿ ನಡೆಯಿತು. ಕಾಲೇಜು ಅಭಿವೃದ್ಧಿಗೆ ಕೈ ಜೋಡಿಸೋಣ, ಪ್ರಾಂಶುಪಾಲರ ಪ್ರಯತ್ನ ಸ್ತುತ್ಯರ್ಹ – ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಜೀವನದಲ್ಲಿ ಯೋಗ್ಯವಾದ ಶಿಕ್ಷಣದ ಆಯ್ಕೆ ಮಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಸಂ‌ಸ್ಥೆಗೆ ಫಲ ನೀಡಬೇಕು ಎಂದರು. ವಿಧೇಯತೆ ಮತ್ತು ಯೋಜನಾಬದ್ಧ ಕಾರ್ಯ ನಿರ್ವಹಣೆಗಳನ್ನು ಪ್ರಾಯೋಗಿಕವಾಗಿ ಕಲಿತು ಜೀವನ ನಿರ್ವಹಣೆ ಮಾಡುವ ಕನಸು

ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ Read More »

ಎಂಟು ತಿಂಗಳಾದರೂ ಪತ್ತೆಯಾಗದ ಇಬ್ಬರು ವಿದ್ಯಾರ್ಥಿನಿಯರು : ತನಿಖೆ ಸಿಐಡಿಗೆ ಹಸ್ತಾಂತರ

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಿಗೂಢ ನಾಪತ್ತೆ ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರಿ ಇನ್ನೂ ಪತ್ತೆಯಾಗದಿರುವುದು ಕಳವಳ ಮೂಡಿಸಿದೆ. ಈ ನಿಗೂಢ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಈಗ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಒಪ್ಪಿಸಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ

ಎಂಟು ತಿಂಗಳಾದರೂ ಪತ್ತೆಯಾಗದ ಇಬ್ಬರು ವಿದ್ಯಾರ್ಥಿನಿಯರು : ತನಿಖೆ ಸಿಐಡಿಗೆ ಹಸ್ತಾಂತರ Read More »

ಪತ್ನಿಯನ್ನು ಭೀಕರವಾಗಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ: ಪುಟ್ಟ ಮಗು ಪಾರು

ಕಲಬುರ್ಗಿ: ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯೊಬ್ಬ ಕುಡುಗೋಲಿನಿಂದ ಪತ್ನಿಯನ್ನು ಹತ್ಯೆ ಮಾಡಿ, ಮಗುವನ್ನು ಹಿಡಿದುಕೊಂಡು ಬಾವಿಗೆ ಹಾರಿದ್ದಾನೆ. ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದು, ಪತಿ ಮೃತಪಟ್ಟ ಘಟನೆ ನಡೆದಿದೆ. ಅಫಜಲಪುರದ ಮದರಾ(ಕೆ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಜಲಿ(23) ಎಂಬಾಕೆಯನ್ನು ಪತಿ ಲಕ್ಷ್ಮೀಪುತ್ರ ಎಂಬಾತ ಕೊಲೆ ಮಾಡಿದ್ದಾನೆ. ಆ ಬಳಿಕ ತನ್ನ ಪುಟ್ಟ ಮಗುವಿನ ಜೊತೆಗೆ ಆತ್ಮಹತ್ಯೆಯ ಉದ್ದೇಶದಿಂದ ಗ್ರಾಮದ ಬಾವಿಗೆ ಹಾರಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಮಗುವನ್ನು ಬಾವಿಯಿಂದ ಹೊರತೆಗೆದು ರಕ್ಷಣೆ ಮಾಡಿದ್ದಾರೆ. ಆದರೆ ಲಕ್ಷ್ಮೀಪುತ್ರ

ಪತ್ನಿಯನ್ನು ಭೀಕರವಾಗಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ: ಪುಟ್ಟ ಮಗು ಪಾರು Read More »

ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡು, ನೃತ್ಯಗಳಿಗೆ ಬ್ರೇಕ್‌

ಖಾಸಗಿ ಶಾಲೆಗಳೂ ಸೇರಿ ಎಲ್ಲ ಶಾಲೆಗಳಿಗೆ ನಿಯಮ ಅನ್ವಯ ಬೆಂಗಳೂರು : ಶಾಲೆಗಳ ವಾರ್ಷಿಕೋತ್ಸವ ಸೇರಿದಂತೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ

ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡು, ನೃತ್ಯಗಳಿಗೆ ಬ್ರೇಕ್‌ Read More »

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್

ಬೆಂಗಳೂರು: ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರು ಮಂದಿ ವಿದೇಶಿ ಮಹಿಳೆಯರನ್ನು ಕೋರಮಂಗಲ ಚೆಕ್ ಪೋಸ್ಟ್ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತುಕೊಂಡು ಗಂಡಸರನ್ನು ಪ್ರಚೋದನೆ ಮಾಡುತ್ತಿದ್ದ ವಿದೇಶಿ ಮಹಿಳೆಯರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರೈಡ್ ನಡೆಸಿರುವುದಾಗಿದೆ. ಈ ಪ್ರಕರಣದಲ್ಲಿ ಆರು ಮಂದಿ ವಿದೇಶಿ ಮಹಿಳೆಯರು ಪೊಲೀಸರ ವಶವಾಗಿದ್ದಾರೆ. ಪಾಸ್‌ಪೋರ್ಟ್, ವಿಸಾ ಮೊದಲಾದ ಎಲ್ಲಾ ದಾಖಲೆಗಳನ್ನು ಬಂಧಿತ‌ ಮಹಿಳೆಯರು ಹೊಂದಿದ್ದು, ಅವರು ಇಲ್ಲಿಗೆ ಬಂದು ಯಾತಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದರು ಎನ್ನುವ ಬಗ್ಗೆ

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್ Read More »

ಪ್ಲಾಸ್ಟಿಕ್‌ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : 50 ಯುವತಿಯರು ಅದೃಷ್ಟವಶಾತ್‌ ಪಾರು

ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪಿಜಿಯಲ್ಲಿದ್ದ ಯುವತಿಯರು ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್‌ವೊಂದು ಸಂಪೂರ್ಣ ಭಸ್ಮವಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಲೇಡಿಸ್ ಪಿಜಿಗೂ ಹಬ್ಬಿದ ಪರಿಣಾಮ ಯುವತಿಯರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನಂದಿನಿ ಲೇಔಟ್ ವ್ಯಾಪ್ತಿಯ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳು ಕೂಡ ಹೊತ್ತಿ

ಪ್ಲಾಸ್ಟಿಕ್‌ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : 50 ಯುವತಿಯರು ಅದೃಷ್ಟವಶಾತ್‌ ಪಾರು Read More »

ಮಸಾಲೆ ಪೌಡರ್‌ಗಳಲ್ಲೂ ರಾಸಾಯನಿಕ ಅಂಶ ಇರುವ ದೂರು

ಅರಿಶಿಣ ಪುಡಿಗೆ ರಾಸಾಯನಿಕ ಅಂಶ ಸೇರಿಸುವ ಸಂಶಯ ಬೆಂಗಳೂರು: ಗೋಬಿ ಮಂಚೂರಿ, ಕೇಕ್‌, ಸಮೋಸ ಬಳಿಕ ಈಗ ಆಹಾರ ತಯಾರಿಸುವ ಮಸಾಲೆ ಪದಾರ್ಥಗಳಲ್ಲೂ ರಾಸಾಯನಿಕ ಅಂಶ ಪತ್ತೆಯಾಗಿದೆ. ಅರಿಶಿಣ ಪುಡಿಯಲ್ಲಿ ಕಲಬೆರಕೆ ಕುರಿತು ದೂರು ದಾಖಲಾಗುತ್ತಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಮಸಾಲೆ ಪೌಡರ್, ಅರಿಶಿಣ ಪುಡಿ ಟೆಸ್ಟ್‌ಗೆ ಸರ್ಕಾರ ಆದೇಶಿಸಿದೆ. ಅರಿಶಿಣ ಪುಡಿ ಮತ್ತು ಬೇರುಗಳಲ್ಲಿ ಸೀಸದ ಅಂಶ ಕಲಬೆರಕೆ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಗೆ ದೂರು ದಾಖಲಾಗಿದೆ. ಅರಿಶಿಣಪುಡಿ ಮತ್ತು

ಮಸಾಲೆ ಪೌಡರ್‌ಗಳಲ್ಲೂ ರಾಸಾಯನಿಕ ಅಂಶ ಇರುವ ದೂರು Read More »

ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ತೆ : ಕೊಲೆ ಶಂಕೆ

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವಿನ ಸುತ್ತ ಅನುಮಾನ ಬೆಂಗಳೂರು: ಬಾಡಿಗೆ ಮನೆಯಲ್ಲಿ ಬೆತ್ತಲೆ ಹಾಗೂ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಪೂಜಾ ದತ್ತ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೂಜಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಋು. ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಿಂದ ಭಾರಿ ದುರ್ನಾತ

ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ತೆ : ಕೊಲೆ ಶಂಕೆ Read More »

ಸರ್ಕಾರಿ ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ನಾ ಪತ್ತೆ: ದೂರು ದಾಖಲು

ಬಂಟ್ವಾಳ: ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಚಿನ್ನಾಭರಣ, ನಗದು ಇದ್ದ ಪರ್ಸ್ ಕಳವಾದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬರಿಮಾರಿನ ಕಾಗೆಕಾನ ಬಲ್ಯ ‌ನಿವಾಸಿ ಕ್ರಿಸ್ತಿನಾ ವೇಗಸ್ ಅವರು ಪರ್ಸ್ ಕಳೆದುಕೊಂಡ ಮಹಿಳೆ. ಪರ್ಸಿನಲ್ಲಿ ಐದೂವರೆ ಪವನಿನ ಕರಿಮಣಿ, ನಾಲ್ಕು ಗ್ರಾಂ ತೂಕದ ಚಿನ್ನದುಂಗುರ ಇದ್ದು, ಇದರ ಒಟ್ಟು ಮೌಲ್ಯ ಸುಮಾರು 6,24,000 ರೂ. ಎಂದು ತಿಳಿದು ಬಂದಿದೆ. ಇವರು ತಮ್ಮ ಪತಿಯ

ಸರ್ಕಾರಿ ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ನಾ ಪತ್ತೆ: ದೂರು ದಾಖಲು Read More »

error: Content is protected !!
Scroll to Top