ಸುದ್ದಿ

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ

ಕೇರಳದ ದೇವಸ್ಥಾನದಲ್ಲಿ ರಾಜಕೀಯದವರ ಸಮ್ಮುಖದಲ್ಲಿ ಮದುವೆ ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ಸಖತ್‌ ಜನಪ್ರಿಯಳಾಗಿದ್ದ ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ನಿನ್ನೆ ಕೇರಳದಲ್ಲಿ ಮುಸ್ಲಿಂ ಯುವಕನನ್ನು ಮನೆಯವರ ವಿರೋಧ ಲೆಕ್ಕಿಸದೆ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪ್ರಿಯಕರ ಮೊಹಮ್ಮದ್‌ ಫರ್ಮಾನ್‌ ಖಾನ್‌ ಎಂಬಾತನ ಜೊತೆ ಕುಂಭಮೇಳದ ಮೊನಾಲಿಸಾ ಬೋಂಸ್ಲೆಯ ಮದುವೆ ಕೇರಳದ ದೇವಸ್ಥಾನವೊಂದರಲ್ಲಿ ನೆರವೇರಿದೆ. ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ […]

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ Read More »

ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ

ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಡಿಸಿ ಸೂಚನೆ ಮಂಗಳೂರು: ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ. ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿವೆ. ಹೋಟೆಲ್, ಕ್ಯಾಂಟೀನ್‍ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಿಸಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್‌ಗಳಲ್ಲಿ

ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ Read More »

ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ

ವಿಟ್ಲ: ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ಸುಮಾರು ರೂ.1,79,700 ಮೌಲ್ಯದ 17.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಶ್ರಫ್ ಜಿ ಎಂಬಾತ ತನ್ನ ಮನೆಯಲ್ಲಿ ಎಂಡಿಎಂಎ ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ

ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಸೆರೆ Read More »

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ

ಅನ್ಯಮಾರ್ಗಗಳ ಮೂಲಕ ಕಚ್ಚಾತೈಲ ಆಮದು; ಸಿಲಿಂಡರ್‌ಗಾಗಿ ಮುಗಿಬೀಳುವ ಅಗತ್ಯವಿಲ್ಲ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ದೇಶಾದ್ಯಂತ ಗ್ಯಾಸ್‌ ಕೊರತೆಯಿಂದ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಭರವಸೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್‌ಗಾಗಿ

ಎರಡು ದಿನದಲ್ಲಿ ಗ್ಯಾಸ್‌ ಸಮಸ್ಯೆ ಪರಿಹಾರ : ಕೇಂದ್ರ ಭರವಸೆ Read More »

ಬೀದಿ ನಾಯಿಗಳ ನಿಯಂತ್ರಣಕ್ಕೂ ಶಿಕ್ಷಕ ನೇಮಕ: ರಾಜ್ಯ ಸರ್ಕಾರದ ಕ್ರಮಕ್ಕೆ ಹೊರಟ್ಟಿ ಆಕ್ರೋಶ

ಬೆಂಗಳೂರು: ಶಿಕ್ಷಕರನ್ನು ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ನೊಡೆಲ್ ಅಧಿಕಾರಿಗಳನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಶಿಕ್ಷಕರಿಗೆ ಈಗಾಗಲೇ ಅನೇಕ ಬೋಧಕೇತರ ಜವಾಬ್ದಾರಿಗಳು ನೀಡಲಾಗಿರುವ ಸಂದರ್ಭದಲ್ಲಿ ಇಂತಹ ಕೆಲಸಗಳನ್ನು ನೀಡುವುದು ಹಾಸ್ಯಾಸ್ಪದ ಹಾಗೂ ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದಿದ್ದಾರೆ. ರಾಜ್ಯದ ಶಿಕ್ಷಕರು ಈಗಾಗಲೇ ಮತದಾನ ಕಾರ್ಯಗಳು, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ

ಬೀದಿ ನಾಯಿಗಳ ನಿಯಂತ್ರಣಕ್ಕೂ ಶಿಕ್ಷಕ ನೇಮಕ: ರಾಜ್ಯ ಸರ್ಕಾರದ ಕ್ರಮಕ್ಕೆ ಹೊರಟ್ಟಿ ಆಕ್ರೋಶ Read More »

ಕರೆಂಟ್ ಶಾಕ್‌ ಹೊಡೆದು ಇಬ್ಬರು ಸಾವು

ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದ ಇಬ್ಬರಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಚ ಘಟನೆ ಮೇದರೀಪೇಟೆ ಎಂಬಲ್ಲಿ ನಡೆದಿದೆ. ಸಲ್ಲಾ ‌ಲಕ್ಷ್ಮೀನಾರಾಯಣ ಮತ್ತು ಚಂದನಗರಿಯ ನಾಗರಾಜು ಎಂಬವರೇ ಮೃತ ದುರ್ದೈವಿಗಳು. ಮಂಚೇರಿಯಲ್ ಜಿಲ್ಲೆಯ ಪೆಟ್ರೋಲ್ ಬಂಕ್ ಒಂದರ ಸಮೀಪ ಈ ದುರಂತ ಸಂಭವಿಸಿದೆ. ಮೂವರು ಕೂಲಿ ಕಾರ್ಮಿಕರು ಎತ್ತರವಾದ ಕಬ್ಬಿಣದ ಸ್ಟಾಂಡ್ ಅನ್ನು ಸಾಗಿಸುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಅದೃಷ್ಟವಶಾತ್

ಕರೆಂಟ್ ಶಾಕ್‌ ಹೊಡೆದು ಇಬ್ಬರು ಸಾವು Read More »

ಕರೆಂಟ್ ಶಾಕ್‌ನಿಂದ ವಿದ್ಯಾರ್ಥಿ ಸಾವು: ಶವವನ್ನು ನೀರಿಗೆಸೆದ ‌ಸ್ನೇಹಿತರು

ರಾಯಚೂರು: ಕರೆಂಟ್ ಶಾಕ್‌ನಿಂದ 9 ನೇ ತರಗತಿಯ ಬಾಲಕನೊಬ್ಬ ಮೃತಪಟ್ಚ ಘಟನೆ ನಡೆದಿದ್ದು, ಸ್ನೇಹಿತರು ಆತನ ಶವವನ್ನು ಕೆರೆಗೆಸೆದ ಘಟನೆ ನಡೆದಿದೆ. ಮೃತನನ್ನು ಗುಂಡಸಾಗರ ‌ಗ್ರಾಮದ ಕಾರ್ತಿಕ್(15) ಎಂದು ಗುರುತಿಸಲಾಗಿದೆ. ಕಾರ್ತಿಕ್ ಓದುತ್ತಿದ್ದ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಹೊಸ ಬಟ್ಟೆ ಖರೀದಿ ಮಾಡಲು ಹತ್ತನೇ ತರಗತಿಯ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಹೋಗಿದ್ದ. ದಾರಿ ಮಧ್ಯೆ ನೀರು ಕುಡಿಯಲು ಬಾವಿಯೊಂದರ ಸಮೀಪ ಹೋಗಿದ್ದು, ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

ಕರೆಂಟ್ ಶಾಕ್‌ನಿಂದ ವಿದ್ಯಾರ್ಥಿ ಸಾವು: ಶವವನ್ನು ನೀರಿಗೆಸೆದ ‌ಸ್ನೇಹಿತರು Read More »

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ: ಡಾ. ಅನುರಾಧಾ ಕುರುಂಜಿ

ಪುತ್ತೂರು: ಹೆಣ್ಣು ಮಗಳು ಶಿಕ್ಷಣ ಪಡೆದರೆ ಕುಟುಂಬ ಮಾತ್ರವಲ್ಲ, ಸಮಾಜವೂ ಪ್ರಗತಿ ಸಾಧಿಸುತ್ತದೆ. ಶಿಕ್ಷಣವು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯವನ್ನು ನೀಡುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರೆ, ಎನ್ನೆಂಸಿಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳಾ ದಿನಾಚರಣೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಯನಗರ ಕಾರ್ಯಕ್ಷೇತ್ರದ ಬಾಂಧವ್ಯ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಪನ್ಮೂಲ

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ: ಡಾ. ಅನುರಾಧಾ ಕುರುಂಜಿ Read More »

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು

13 ವರ್ಷದಿಂದ ಕೋಮಾದಲ್ಲಿರುವ ಯುವಕನಿಗೆ ಗೌರವಯುತವಾದ ಸಾವು ಕರುಣಿಸಲು ನ್ಯಾಯಾಲಯದಿಂದ ಅನುಮತಿ ನವದೆಹಲಿ : ಐತಿಹಾಸಿಕ ಮಹತ್ವದ ತೀರ್ಪೋಂದರಲ್ಲಿ ಸುಪ್ರೀಂ ಕೋರ್ಟ್‌ ಕಳೆದ ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ (32) ಎಂಬ ಯುವಕನಿಗೆ ದಯಾಮರಣ ನೀಡಲು ಅನುಮತಿಸಿದೆ. ದಯಾಮರಣ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಚರ್ಚೆಯಲ್ಲಿರುವ ವಿಷಯವಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಅಪರೂಪದ್ದು ಎನ್ನಲಾಗಿದೆ. ಮುಂದಿನ

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು Read More »

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಉಳ್ಳಾಲ: ಕೆಲಸಕ್ಕೆಂದು ಮನೆಯಿಂದ ತೆರಳಿ ಸೋಮವಾರದಿಂದ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಸೋಮೇಶ್ವರ ಸೋಮನಾಥ ಗದಾತೀರ್ಥ ಕೆರೆಯಲ್ಲಿ ಪತ್ತೆಯಾಗಿದೆ. ಮೃತನನ್ನು ವಿವೇಕ್ ಶೆಟ್ಟಿಗಾರ್(32) ಎಂದು ಗುರುತಿಸಲಾಗಿದೆ. ಪತ್ನಿಯಿಂದ ‌ವಿಚ್ಛೇದನಗೊಂಡು ಖಿನ್ನತೆಯಿಂದ ವಿವೇಕ್ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ವಿವೇಕ್ ಕದ್ರಿ ವೇದ ಮೋಟಾರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಸೋಮವಾರ ಕೆಲಸಕ್ಕೆಂದು ‌ಮನೆಯಿಂದ ಹೋಗಿದ್ದರು. ಅದೇ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತಾಯಿಗೆ ಕರೆ ಮಾಡಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ ರಾತ್ರಿ

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ Read More »

error: Content is protected !!
Scroll to Top