ಸುದ್ದಿ

ಮನೆಗಳಿಗೆ ಕಿಟಿಕಿಗಳಿಡುವುದನ್ನು ನಿಷೇಧಿಸಿದ ಸರಕಾರ!

ಕಿಟಿಕಿ ಇದ್ದರೆ ಗೋಡೆ ಕಟ್ಟಿ ಮುಚ್ಚಬೇಕು ಕಾಬೂಲ್‌ : ಅಫಘಾನಿಸ್ಥಾನದ ತಾಲಿಬಾನ್‌ ಆಡಳಿತ ಮನೆಗಳಿಗೆ ಕಿಟಿಕಿ ಅಳವಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಹೊಸದಾಗಿ ನಿರ್ಮಿಸುವ ಮನೆಗಳಿಗೆ ಕಿಟಿಕಿ ಅಳವಡಿಸಲೇ ಬಾರದು. ಈಗಾಗಲೇ ನಿರ್ಮಿಸಿರುವ ಮನೆಗಳ ಕಿಟಿಕಿಗಳನ್ನು ಮುಚ್ಚಬೇಕೆಂದು ತಾಲಿಬಾನ್‌ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಮನೆಗಳಿಗೆ ಕಿಟಿಕಿಗಳಿದ್ದರೆ ಪಡಸಾಲೆ, ಅಡುಗೆಕೋಣೆ, ಹಿತ್ತಿಲು ಇತ್ಯಾದಿ ಮನೆಯ ಒಳಗಿನ ಕೋಣೆಗಳು ಹೊರಗಿನವರಿಗೆ ಕಾಣುತ್ತವೆ. ಮನೆಯ ಸ್ತ್ರೀಯರು ಓಡಾಡುವ ಮನೆಯೊಳಗಿನ ಈ ಸ್ಥಳಗಳು ಪರರ ಕಣ್ಣಿಗೆ ಕಾಣದಿರಲು ಮನೆಗಳಿಗೆ ಕಿಟಿಕಿಗಳು ಇರಲೇಬಾರದು ಎಂದು […]

ಮನೆಗಳಿಗೆ ಕಿಟಿಕಿಗಳಿಡುವುದನ್ನು ನಿಷೇಧಿಸಿದ ಸರಕಾರ! Read More »

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌

ಹ್ಯಾಪಿ ನ್ಯೂ ಇಯರ್‌ ಸಂದೇಶ ಕಳುಹಿಸಿ ಹಣ ಲಪಟಾಯಿಸುವ ತಂತ್ರ ಬೆಂಗಳೂರು : ಅಮಾಯಕ ಜನರ ಬ್ಯಾಂಕ್‌ ಖಾತೆಗಳಿಂದ ಹಣ ಲಪಟಾಯಿಸಲು ನಾನಾ ತಂತ್ರಗಳನ್ನು ಬಳಸುತ್ತಿರುವ ಸೈಬರ್‌ ಕಳ್ಳರು ಈಗ ಕಂಡುಕೊಂಡಿರುವ ಹೊಸ ತಂತ್ರ ಹೊಸ ವರ್ಷದ ಶುಭಾಶಯ. ಹೊಸ ವರ್ಷವನ್ನು ಗಮನದಲ್ಲಿಟ್ಟುಕೊಂಡ ವಂಚಕರು ಈಗ ಜನರ ಖಾತೆಯನ್ನು ಖಾಲಿ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ವಾಟ್ಸಪ್‌, ಫೇಸ್‌ಬುಕ್‌ ಅಥವಾ ಟಿಲಿಗ್ರಾಂನಂಥ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಹೊಸ ವರ್ಷದ ಶುಭಾಶಯದ ಗ್ರೀಟಿಂಗ್‌ ಕಳುಹಿಸುತ್ತಾರೆ. ಇದನ್ನು ತೆರೆದ ಕೂಡಲೇ

ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌ Read More »

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ

ಯುವಕ-ಯುವತಿಯರು ಹೊಸ ವರ್ಷದ ನೆಪದಲ್ಲಿ ಮೋಜು ಮಾಡದಂತೆ ಸೂಚನೆ ಹೊಸದಿಲ್ಲಿ: ಇಡೀ ಜಗತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದರೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮುಸ್ಲಿಮರು ಹೊಸವರ್ಷಾಚರಣೆ ಸಂಭ್ರಮ ಮಾಡಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೊಸ ವರ್ಷಾಚರಣೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರುವುದರಿಂದ ನೈಜ ಮುಸ್ಲಿಮರು ಇಂಥ ಸಂಭ್ರಮಗಳಲ್ಲಿ ಭಾಗಿಯಾಗಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಮುಸ್ಲಿಮರು ಹೊಸವರ್ಷಾಚರಣೆಯ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುವ ಬದಲು ತಮ್ಮ ನಂಬಿಕೆಗೆ

ಹೊಸ ವರ್ಷಾಚರಣೆ ವಿರುದ್ಧ ಮುಸ್ಲಿಂ ಜಮಾತ್‌ ಫತ್ವಾ Read More »

ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ವಾಪಸ್‌

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಒಪ್ಪಿದ ಸರಕಾರ ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಸಾರಿಗೆ ‌ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ. ಡಿ.31ರ ಮಧ್ಯರಾತ್ರಿಯಿಂದ ತೊಡಗಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಸಾರಿಗೆ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು. ಆದರೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ‌ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ.

ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ವಾಪಸ್‌ Read More »

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು?

ಯಾರೂ ಬದುಕುಳಿದಿಲ್ಲ ಎಂದ ಅಧಿಕಾರಿಗಳು ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ 179 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಮಾತ್ರ ಜೀವ ಸಹಿತ ರಕ್ಷಿಸಲು ಸಾಧ್ಯವಾಗಿದ್ದು, ಉಳಿದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.175 ಪ್ರಯಾಣಿಕರು ಮತ್ತು 6 ವೈಮಾನಿಕ ಸಿಬ್ಬಂದಿಯಿದ್ದ ವಿಮಾನ ಇಂದು ಬೆಳಗ್ಗೆ 9.05ಕ್ಕೆ (ಅಲ್ಲಿನ ಕಾಲಮಾನ) ಲ್ಯಾಂಡಿಂಗ್‌ ಗಿಯರ್‌

ದಕ್ಷಿಣ ಕೊರಿಯಾ ವಿಮಾನ ದುರಂತ : 179 ಮಂದಿ ಸಾವು? Read More »

ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಉರಿ ಬೌಲಿಂಗ್‌ : 147 ವರ್ಷದ ಟೆಸ್ಟ್‌ ದಾಖಲೆ ಪತನ

20ಕ್ಕಿಂತ ಕಡಿಮೆ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಮೆಲ್ಬೋರ್ನ್‌: ಇಲ್ಲಿನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್​ನಲ್ಲಿ 474 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 369 ರನ್​ ಪೇರಿಸಿದೆ. ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಕಬಳಿಸಿದ್ದ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ, ದ್ವಿತೀಯ ಇನಿಂಗ್ಸ್​ನಲ್ಲಿ ಮತ್ತೆ 4 ವಿಕೆಟ್ ಉರುಳಿಸಿದ್ದಾರೆ. ಈ 8 ವಿಕೆಟ್​ಗಳೊಂದಿಗೆ

ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಉರಿ ಬೌಲಿಂಗ್‌ : 147 ವರ್ಷದ ಟೆಸ್ಟ್‌ ದಾಖಲೆ ಪತನ Read More »

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು

ಲ್ಯಾಂಡಿಂಗ್‌ ಗೇರ್‌ ವಿಫಲಗೊಂಡು ತಡೆಗೋಡೆಗೆ ಡಿಕ್ಕಿ ಹೊಡೆದ ವಿಮಾನ ಸಿಯೋಲ್‌ : ದಕ್ಷಿಣ ಕೊರಿಯಾದಲ್ಲಿ 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯಿದ್ದ ವಿಮಾನವೊಂದು ಪತನಗೊಂಡಿದ್ದು, ಇದುವರೆಗೆ 62 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ವಿಮಾನ ಸಂಪೂರ್ಣ ನಾಶವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಕ್ಷಿಣ ಕೊರಿಯಾದ ನಗರವಾದ ಮುವಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನ ಲ್ಯಾಂಡಿಂಗ್ ಆಗುವಾಗ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಕಳೆದ ವಾರ ಕಜಾಕಿಸ್ಥಾನದ ಅಕ್ಟೌ

ಲ್ಯಾಂಡಿಂಗ್‌ ಆಗುತ್ತಿದ್ದ ವಿಮಾನ ಅಪಘಾತ : 62 ಮಂದಿ ಸಾವು Read More »

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು

ಹುಬ್ಬಳ್ಳಿ: ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಅಯ್ಯಪ್ಪ ವ್ರತಧಾರಿ ಸಾವನ್ನಪ್ಪುವುದರೊಂದಿಗೆ ಈ ಅವಘಡದಲ್ಲಿ ಮಡಿದವರ ಸಂಖ್ಯೆ ಐದಕ್ಕೇರಿದೆ. ಶಂಕರ್ ಚವ್ಹಾಣ್ ​(29) ಮೃತ ಅಯ್ಯಪ್ಪ ವ್ರತಧಾರಿ. ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್​ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ 9 ಅಯ್ಯಪ್ಪ ವ್ರತಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಶಂಕರ್​

ಸಿಲಿಂಡರ್‌ ಸ್ಫೋಟ : ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು Read More »

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ ವೈರಸ್‌

ಕಾಡಿಗೆ ಹೋಗುವವರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ಶಿವಮೊಗ್ಗ : ದಶಕಗಳಿಂದ ಕಾಡುತ್ತಿರುವ ಮಂಗನಕಾಯಿಲೆ ಮಲೆನಾಡಿನಲ್ಲಿ ಮತ್ತೆ ಕಾಣಿಸಿರುವುದು ಆತಂಕವುಂಟು ಮಾಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಗ್ಗಿನಗದ್ದೆ ಬಳಿ ಉಣುಗುಗಳಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡಿದೆ. ಸದ್ಯ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ ಬಾರಿ ಜನರನ್ನು ಕಾಡಿ ಅನೇಕ ಸಾವುನೋವುಗಳಿಗೆ ಕಾರಣವಾಗಿದ್ದ ಕೆಎಫ್‌ಡಿ (ಕ್ಯಾಸನೂರು ಅರಣ್ಯ ಕಾಯಿಲೆ) ವೈರಸ್ ಈ ಬಾರಿ ಮತ್ತೆ ಬಂದಿದೆ.ಬೆಟ್ಟಬಸವಾನಿ

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ ವೈರಸ್‌ Read More »

ಡಿ.ಕೆ.ಸುರೇಶ್‌ ತಂಗಿಯ ಸೋಗಿನಲ್ಲಿ 14.600 ಕೆಜಿ ಚಿನ್ನ ಖರೀದಿಸಿ ವಂಚಿಸಿದ ಮಹಿಳೆ

ಚಿತ್ರನಟನಿಂದ ಡಿಕೆಸು ಧ್ವನಿಯಲ್ಲಿ ಕರೆಮಾಡಿಸಿ ಬೆದರಿಕೆಯೊಡ್ಡಿದ್ದ ಖಿಲಾಡಿ ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಬರೋಬ್ಬರಿ 14.600 ಕೆಜಿ ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಸಂಭವಿಸಿದೆ. ಪೊಲೀಸರು ಮಹಿಳೆ ಹಾಗೂ ಆಕೆಯ ಪತಿಯನ್ನು ಬಂಧಿಸಿದ್ದು, ಇಬ್ಬರನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.ಚಂದ್ರ ಲೇಔಟ್ ಪೊಲೀಸರು ನಿನ್ನೆ ಆರೋಪಿ ಐಶ್ವರ್ಯ ಗೌಡ ಆಕೆಯ ಪತಿ ಹರೀಶ್‌ನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಬಳಿಕ ಕೋರಮಂಗಲದ

ಡಿ.ಕೆ.ಸುರೇಶ್‌ ತಂಗಿಯ ಸೋಗಿನಲ್ಲಿ 14.600 ಕೆಜಿ ಚಿನ್ನ ಖರೀದಿಸಿ ವಂಚಿಸಿದ ಮಹಿಳೆ Read More »

error: Content is protected !!
Scroll to Top