ಸುದ್ದಿ

ಇರಾನ್‌ ಅನಿಲ ಸ್ಥಾವರಗಳ ಮೇಲೆ ದಾಳಿ ನಡೆಸದಿರಲು ಇಸ್ರೇಲ್‌ ನಿರ್ಧಾರ

ಜಾಗತಿಕವಾಗಿ ಇಂಧನ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಯುದ್ಧ ನೀತಿ ಬದಲಾವಣೆ ಜೆರುಸಲೇಂ: ಜಾಗತಿಕವಾಗಿ ಇಂಧನ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮನವಿ ಬಳಿಕ ಇರಾನ್​​ನ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ಇಸ್ರೇಲ್ ನಿರ್ಧರಿಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವಿನ ಇಪ್ಪತ್ತು ದಿನಗಳ ಜಂಟಿ ಕಾರ್ಯಾಚರಣೆಗಳ ನಂತರ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಇರಾನ್‌ನ ಸಾಮರ್ಥ್ಯ ದುರ್ಬಲಗೊಂಡಿದೆ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ. ಆರಂಭಿಕ ಹಂತದ ಯುದ್ಧ […]

ಇರಾನ್‌ ಅನಿಲ ಸ್ಥಾವರಗಳ ಮೇಲೆ ದಾಳಿ ನಡೆಸದಿರಲು ಇಸ್ರೇಲ್‌ ನಿರ್ಧಾರ Read More »

ಯುದ್ಧದ ನಡುವೆಯೇ ಮೂವರು ಯುವಕರನ್ನು ಸಾರ್ವಜನಿಕವಾಗಿ ಗಲ್ಲೆಗೇರಿಸಿದ ಇರಾನ್‌ ಸರ್ಕಾರ

ಸರ್ಕಾರಿ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಸೆರೆಯಾಗಿದ್ದ ಯುವಕರು ಟೆಹ್ರಾನ್‌ : ಘನಘೋರ ಸಮರದ ನಡುವೆಯೇ ಇರಾನ್‌ ಮೂವರು ಹೋರಾಟಗಾರರನ್ನು ಗುರುವಾರ ಸಾರ್ವಜನಿಕವಾಗಿ ಗಲ್ಲೆಗೇರಿಸಿದೆ. 19ರ ಹರೆಯದ ಕುಸ್ತಿ ಚಾಂಪಿಯನ್‌ ಸಲೇಹ್‌ ಮೊಹಮ್ಮದಿ, ಸಯೀದ್‌ ದಾವೂದಿ ಮತ್ತು ಮೆಹ್ದಿ ಘಸೇಮಿ ಎಂಬವರನ್ನು ಗಲ್ಲಿಗೇರಿಸಲಾಗಿದೆ. ಇವರು ಕಳೆದ ಜನವರಿ 8ರಂದು ನಡೆದ ಸರ್ಕಾರಿ ವಿರುದ್ಧದ ಪ್ರತಿಭಟನೆ ವೇಳೆ ಇಬ್ಬರು ಪೊಲೀಸರನ್ನು ಕೊಂದ ಆರೋಪ ಹೊತ್ತಿದ್ದರು. ಇರಾನ್‌ನ ಖೋಮ್‌ ನಗರದಲ್ಲಿ ಸಾರ್ವಜನಿಕವಾಗಿ ಈ ಮೂವರು ಯುವಕರನ್ನು ಗಲ್ಲೆಗೇರಿಸಲಾಗಿದೆ ಎಂದು ವರದಿಗಳು

ಯುದ್ಧದ ನಡುವೆಯೇ ಮೂವರು ಯುವಕರನ್ನು ಸಾರ್ವಜನಿಕವಾಗಿ ಗಲ್ಲೆಗೇರಿಸಿದ ಇರಾನ್‌ ಸರ್ಕಾರ Read More »

ಅಸಭ್ಯ ಹಾಡಿಗೆ ಕುಣಿದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ

ಬಿರುಗಾಳಿ ಎಬ್ಬಿಸಿರುವ ಕೆಡಿ ಚಿತ್ರದ ಅಸಭ್ಯ ಹಾಡು ಲಖನೌ: ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಬಾಲಿವುಡ್‌ ನಟಿ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ

ಅಸಭ್ಯ ಹಾಡಿಗೆ ಕುಣಿದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ Read More »

ಕರಾವಳಿಯಲ್ಲಿ ಇಂದು ಈದ್‌ ಹಬ್ಬ ಆಚರಣೆ : ಜಿಲ್ಲಾಧಿಕಾರಿಗಳಿಂದ ರಜೆ ಘೋಷಣೆ

ಗುರುವಾರ ರಾತ್ರಿ ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಹಬ್ಬ ಮಂಗಳೂರು : ಗುರುವಾರ ಸಂಜೆ ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 20ರ ಶುಕ್ರವಾರದಂದು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಗಿರುವ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಚಂದ್ರ ದರ್ಶನವಾಗಿರುವುದಾಗಿ ತಿಳಿಸಿದ್ದು, ಶುಕ್ರವಾರ ಹಬ್ಬವನ್ನು ಆಚರಿಸುವಂತೆ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಮಸೀದಿ ಝೀನತ್ ಭಕ್ಷ್ ಇದರ ಕೋಶಾಧಿಕಾರಿ ಹಾಜಿ ಎಸ್.

ಕರಾವಳಿಯಲ್ಲಿ ಇಂದು ಈದ್‌ ಹಬ್ಬ ಆಚರಣೆ : ಜಿಲ್ಲಾಧಿಕಾರಿಗಳಿಂದ ರಜೆ ಘೋಷಣೆ Read More »

ತಲೆನೋವಿಗೆ ‌ಮನೆಯಲ್ಲೇ ಇದ್ದ ಔಷಧ ಸೇವಿಸಿ ಬಾಲಕ ಸಾವು

ಕಡಬ: ತಲೆನೋವಿಗೆಂದು ‌ಮನೆಯಲ್ಲೇ ಇದ್ದ ಔಷಧ ಕುಡಿದ ಪರಿಣಾಮ 10 ವರ್ಷದ ಬಾಲಕ ಮೃತ ಪಟ್ಟ ಘಟನೆ ರಾಮಕುಂಜದಲ್ಲಿ ‌ನಡೆದಿದೆ. ಈ ಸಂಬಂಧ ಮೃತ ಬಾಲಕನ ತಂದೆ ಸಂಜೀವ ಪೂಜಾರಿ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅವರ ಪುತ್ರನಿಗೆ ‌ಪದೇ ಪದೇ ತಲೆನೋವು ಕಾಣಿಸಿಕೊಂಡಿದೆ. ಮಾ. 18 ರಂದು ತಲೆನೋವು ಎಂದು ಹುಡುಗ ಮನೆಯಲ್ಲೇ ಇದ್ದ ಔಷಧ ಕುಡಿದಿದ್ದಾನೆ. ಆ ಬಳಿಕ ಆರೋಗ್ಯ ಹದೆಗೆಟ್ಟು ಬಾಲಕ ಕಂಗಾಲಾಗಿ ‌ನರಳಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ

ತಲೆನೋವಿಗೆ ‌ಮನೆಯಲ್ಲೇ ಇದ್ದ ಔಷಧ ಸೇವಿಸಿ ಬಾಲಕ ಸಾವು Read More »

ತಾಯಿ, ಸಹೋದರಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಸ್ನೇಹಿತನನ್ನು ಹತ್ಯೆಗೈದ ಯುವಕ ಪೊಲೀಸ್ ವಶಕ್ಕೆ

ಬೆಂಗಳೂರು: ತನ್ನ ತಾಯಿ ಮತ್ತು ಸಹೋದರಿಗೆ ‌ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸ್ನೇಹಿತನನ್ನು ಯುವಕನೊಬ್ಬ ಹತ್ಯೆ ಮಾಡಿದ ಘಟನೆ ಆವಲಹಳ್ಳಿಯಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ಬಿಹಾರ ಮೂಲದ ಕುನಾಲ್ (22) ಎಂದು ಗುರುತಿಸಲಾಗಿದೆ. ಕೊಲೆಗಾರನನ್ನು ನಸ್ರುಲ್ಲಾ(24) ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹದಿನೈದು ದಿನಗಳ ಹಿಂದೆ ಇವರಿಬ್ಬರ ನಡುವೆ ಜಗಳ ನಡೆದಿತ್ತು.‌ ಈ ಸಂದರ್ಭದಲ್ಲಿ ನಸ್ರುಲ್ಲಾನ ತಾಯಿ ಮತ್ತು ಸಹೋದರಿಯ ಬಗ್ಗೆ ಕುನಾಲ್ ಕೆಟ್ಟದಾಗಿ ಮಾತನಾಡಿದ್ದು, ಇದರಿಂದ ಆಕ್ರೋಶಗೊಂಡಿದ್ದ ನಸ್ರುಲ್ಲಾ ಮದ್ಯದ ಅಮಲಿನಲ್ಲಿ ಕುನಾಲ್‌ನ ರೂಮ್‌ಗೆ ನುಗ್ಗಿ ಆತನ

ತಾಯಿ, ಸಹೋದರಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಸ್ನೇಹಿತನನ್ನು ಹತ್ಯೆಗೈದ ಯುವಕ ಪೊಲೀಸ್ ವಶಕ್ಕೆ Read More »

ಜಾತ್ರೆಯಲ್ಲಿ ಅನ್ಯಕೋಮಿನ ಬಾಲಕನ ಮೇಲೆ ಹಲ್ಲೆ : ಕೇಸ್‌ ದಾಖಲು

ಕಾಲೇಜಿನ ಗೆಳೆಯರೊಂದಿಗೆ ಜಾತ್ರೆಗೆ ಬಂದಿದ್ದ ಬಾಲಕ ಬೆಳ್ತಂಗಡಿ : ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅನ್ಯಕೋಮಿನ 17 ವಯಸ್ಸಿನ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರು ಎನ್ನಲಾದ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿ ಅಪಹರಿಸಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾ.11ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ

ಜಾತ್ರೆಯಲ್ಲಿ ಅನ್ಯಕೋಮಿನ ಬಾಲಕನ ಮೇಲೆ ಹಲ್ಲೆ : ಕೇಸ್‌ ದಾಖಲು Read More »

ಕಡಬ : ತಲೆನೋವಿನ ಮಾತ್ರೆ ಸೇವಿಸಿ ಬಾಲಕ ಸಾವು

ಕಡಬ: ತಲೆನೋವಿನಿಂದ ಬಳಲುತ್ತಿದ್ದ 10 ವರ್ಷದ ಬಾಲಕನೊಬ್ಬ ಔಷಧಿ ಸೇವಿಸಿದ ಬಳಿಕ ಮೃತಪಟ್ಟ ದುರ್ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಡಬ ತಾಲೂಕಿನ ರಾಮಕುಂಜ ನಿವಾಸಿ ಸಂಜೀವ ಪೂಜಾರಿ (50) ಅವರ ಪುತ್ರನಿಗೆ ಪದೇಪದೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಮಾರ್ಚ್ 18ರಂದು ಸಂಜೆ ಬಾಲಕ ತಲೆನೋವಿಗಾಗಿ ಮನೆಯಲ್ಲಿದ್ದ ಔಷಧಿ ಸೇವಿಸಿದ್ದಾನೆ. ಬಳಿಕ ಅವನು ಮನೆಯಲ್ಲಿ ಅಸ್ವಸ್ಥಗೊಂಡು ಹೊರಳಾಡುತ್ತಿದ್ದಾನೆಂದು ತಾಯಿ ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಗೆ ಬಂದ ತಂದೆ, ಮಗನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ

ಕಡಬ : ತಲೆನೋವಿನ ಮಾತ್ರೆ ಸೇವಿಸಿ ಬಾಲಕ ಸಾವು Read More »

ಬಾಗಲಕೋಟೆಗೆ ವೀರಣ್ಣ ಚರಂತಿಮಠ, ದಾವಣಗೆರೆಗೆ ದಾಸಕರಿಯಪ್ಪ ಬಿಜೆಪಿ ಅಭ್ಯರ್ಥಿಗಳು

ಏ.9ರಂದು ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ

ಬಾಗಲಕೋಟೆಗೆ ವೀರಣ್ಣ ಚರಂತಿಮಠ, ದಾವಣಗೆರೆಗೆ ದಾಸಕರಿಯಪ್ಪ ಬಿಜೆಪಿ ಅಭ್ಯರ್ಥಿಗಳು Read More »

ಯುಗಾದಿಗೆ ‌ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ನಮೋ

ನವದೆಹಲಿ: ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೂ ಶುಭಾಶಯಗಳನ್ನು ತಿಳಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಹೊಸ ವರ್ಷ, ವಸಂತ ಋತುವಿನ ಆಗಮನ ಪ್ರತಿಯೊಬ್ಬರ ಬದುಕಿನಲ್ಲಿಯೂ ಹೊಸ ಉತ್ಸಾಹ ಮತ್ತು ಅವಕಾಶಗಳನ್ನು ತರಲಿ ‌ಎಂದು ಹಾರೈಸಿದ್ದಾರೆ. ಪ್ರಕೃತಿಯಲ್ಲಿನ ಹಸಿರು, ಹೂವುಗಳ ಸುವಾಸನೆ, ಹಣ್ಣುಗಳ ಆಗಮನ ಹೊಸ ಶಕ್ತಿಯ ಸಂಕೇತ. ರೈತಾಪಿ ವರ್ಗ ಈ ಸಂದರ್ಭದಲ್ಲಿ ಹೊಸ ಕೃಷಿ ಚಟುವಟಿಕೆಗಳಿಗೆ ತೊಡಗಲು ಸಿದ್ಧತೆ ನಡೆಸುತ್ತಿರುವ ಬಗೆಗೂ ಆವರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬದುಕಿನ ಸಿಹಿ –

ಯುಗಾದಿಗೆ ‌ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ನಮೋ Read More »

error: Content is protected !!
Scroll to Top