ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ
ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿ ಎಸ್ ಸುದರ್ಶನ್ ಐವತೋಕ್ಲು ಗ್ರಾಮದ ಕಮಿಲ […]










