ತಣ್ಣೀರು ಬಾವಿ ಕಡಲ ತೀರದಲ್ಲಿ ಕುಸ್ತಿ ಕಲರವ| ಮಂಗಳೂರಿಗರ ಗಮನ ಸೆಳೆದ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್-2025| ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಚಾಲನೆ
ಮಂಗಳೂರು : ತಣ್ಣೀರು ಬಾವಿ ಕಡಲತೀರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ 2025ರ ರಾಜ್ಯಮಟ್ಟದ ಬೀಚ್ ಕುಸ್ತಿ ಚಾಂಪಿಯನ್ ಶಿಪ್ ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯ ತಣ್ಣೀರು ಬಾವಿ ಕಡಲತೀರದಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ನಲ್ಲಿ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ತಪಸ್ಯ ಫೌಂಡೇಶನ್ ಸಹಕಾರದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್ ಶಿಪ್ -2025 ನಲ್ಲಿ ಮಂಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 110 ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 15ಕ್ಕೂ ಹೆಚ್ಚು […]