ಸುದ್ದಿ

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಆರಿಕ್ಕಾಡಿಯಲ್ಲಿ ಟೋಲ್‌ ವಸೂಲಿ ಶುರುವಾದ ದಿನವೇ ಪ್ರತಿಭಟನೆಯ ಬಿಸಿ ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಟೋಲ್‌ ವಸೂಲು ಮಾಡುವುದನ್ನು ಪ್ರತಿಭಟಿಸಲು ಸೋಮವಾರ ಬೆಳಗ್ಗೆಯೇ ಸಾವಿರಾರು ಜನರು ಜಮಾಯಿಸಿದ ಪರಿಣಾಮವಾಗಿ ಮಂಗಳೂರು-ಕಾಸರಗೋಡು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಆರಿಕ್ಕಾಡಿಯಲ್ಲಿ ಇಂದಿನಿಂದ ಟೋಲ್‌ ವಸೂಲಿ ಶುರುವಾಗಿದೆ. ಈಗಾಗಲೇ ಕೇರಳ-ಕರ್ನಾಟಕ ಗಡಿಯಾಗಿರುವ ತಲಪ್ಪಾಡಿಯಲ್ಲಿ ಟೋಲ್‌ಗೇಟ್‌ ಇದ್ದು, ಇಲ್ಲಿಂದ ಬರೀ 20 ಕಿ.ಮೀ. ದೂರದಲ್ಲಿರುವ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೊಂದು ಟೋಲ್‌ಗೇಟ್‌ ಹಾಕಿದೆ. ಎರಡು ಟೋಲ್‌ಗೇಟ್‌ಗಳ […]

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ Read More »

ಬಾಂಗ್ಲಾದೇಶದವ ಎಂದು ಜಾರ್ಖಂಡ್‌ನ ಕಾರ್ಮಿಕನ ಮೇಲೆ ಹಲ್ಲೆ

ದೈಹಿಕ, ಮಾನಸಿಕ ಹಿಂಸೆ ನೀಡಿದ ನಾಲ್ವರ ವಿರುದ್ಧ ಕೇಸ್‌ ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಭಾವಿಸಿ ನಾಲ್ವರು ವ್ಯಕ್ತಿಗಳು ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್, ಮೋಹನ್ ಹಲ್ಲೆ ಮಾಡಿದವರು ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ನಾಲ್ವರು

ಬಾಂಗ್ಲಾದೇಶದವ ಎಂದು ಜಾರ್ಖಂಡ್‌ನ ಕಾರ್ಮಿಕನ ಮೇಲೆ ಹಲ್ಲೆ Read More »

ಪ್ರಶ್ನೆ ಪತ್ರಿಕೆ ಸೋರಿಕೆ : ಹೆಡ್‌ಮಾಸ್ಟರ್‌ ಸಹಿತ ಎಂಟು ಮಂದಿ ಬಂಧನ

ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್‌ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು, ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ 9ರಂದು ಹಿಂದಿ ಪರೀಕ್ಷೆ ಇತ್ತು. ಆದರೆ ಜನವರಿ 8ರಂದು ನಿರಂಜನ್ ಶೆಟ್ಟಿ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಪದವಿ ಪೂರ್ವ ಇಲಾಖೆಯ ಜಂಟಿ ನಿರ್ದೇಶಕ ರಾಜು ನೀಡಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸೈಬರ್ ಸೆನ್ ಪೊಲೀಸ್ ಠಾಣೆಯಲ್ಲಿ

ಪ್ರಶ್ನೆ ಪತ್ರಿಕೆ ಸೋರಿಕೆ : ಹೆಡ್‌ಮಾಸ್ಟರ್‌ ಸಹಿತ ಎಂಟು ಮಂದಿ ಬಂಧನ Read More »

ಗಡಿಭಾಗದಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್‌ಗಳ ಹಾರಾಟ ಪತ್ತೆ

ಭಾರತಕ್ಕೆ ನುಗ್ಗಲು ಯತ್ನಿಸಿದ 5ಕ್ಕೂ ಅಧಿಕ ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ ನವದೆಹಲಿ: ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಹೇಳಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್‌ಗಳ ಹಾರಾಟ

ಗಡಿಭಾಗದಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಹೊತ್ತ ಡ್ರೋನ್‌ಗಳ ಹಾರಾಟ ಪತ್ತೆ Read More »

ಮಂಗಳೂರು : ಸುಟ್ಟ ಗಾಯಕ್ಕೊಳಗಾಗಿದ್ದ ಎಎಸ್‌ಐ ಸಾವು

ಮಂಗಳೂರು: ಸುಟ್ಟ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ (57) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಅವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನಗರದ ಕೆಪಿಟಿ ಬಳಿಯ ವ್ಯಾಸ ನಗರದ ಮನೆಯಲ್ಲಿ ಡಿ.28ರಂದು ತರಗೆಲೆಯನ್ನು ಸುಡುವ ವೇಳೆ ಬೆಂಕಿ ಅವಘಡಕ್ಕೊಳಗಾಗಿ ತೀವ್ರ ತರದ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಾಸರಗೋಡು ಜಿಲ್ಲೆಯ ಕಾವುಗೋಳಿಯ ನಿವಾಸಿಯಾಗಿದ್ದ ಹರಿಶ್ಚಂದ್ರ ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ

ಮಂಗಳೂರು : ಸುಟ್ಟ ಗಾಯಕ್ಕೊಳಗಾಗಿದ್ದ ಎಎಸ್‌ಐ ಸಾವು Read More »

ಮಂಗಳೂರಿನ ಮಹಿಳಾ ಟೆಕ್ಕಿ ಸಾವು ಆಕಸ್ಮಿಕವಲ್ಲ, ಕೊಲೆ

ತಲೆದಿಂಬಿನಿಂದ ಉಸಿರುಗಟ್ಟಿಸಿ, ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿ ಬೆಂಗಳೂರು: ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಪ್ರಕರಣ ಆಕಸ್ಮಿಕ ಸಾವು ಅಲ್ಲ ಬದಲಾಗಿ ಕೊಲೆ ಎಂಬುದು ಬಯಲಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆಕೆಯನ್ನು ಕೊಲೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಶರ್ಮಿಳಾ (34) ಕೊಲೆಯಾದ ಮಹಿಳೆ. ಅವರು ಮೂಲತಃ ಮಂಗಳೂರಿನವರು. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಜನವರಿ 3ರ

ಮಂಗಳೂರಿನ ಮಹಿಳಾ ಟೆಕ್ಕಿ ಸಾವು ಆಕಸ್ಮಿಕವಲ್ಲ, ಕೊಲೆ Read More »

ವರ್ಷದ ಮೊದಲ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಶುಭಾರಂಭ

7 ರನ್‌ಗಳಿಂದ ಶತಕ ಮಿಸ್‌ ಮಾಡಿಕೊಂಡ ಕೊಹ್ಲಿ ವಡೋದರ: ವರ್ಷದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಶುಭಾರಂಭ ಮಾಡಿದೆ. ವಡೋದರದ ಬಿಸಿಎ ಮೈದಾನದಲ್ಲಿ ನಿನ್ನೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸುಮಾರು 15 ವರ್ಷಗಳ ನಂತರ ವಡೋದರದಲ್ಲಿ ಏಕದಿನ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಅದ್ಭುತ

ವರ್ಷದ ಮೊದಲ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಶುಭಾರಂಭ Read More »

ಕಾರ್ಕಳ: ಪರಶುರಾಮ ಥೀಮ್‌ ಪಾರ್ಕ್‌ನ ತಾಮ್ರದ ಶೀಟ್‌ ಕಳವು ಮಾಡಿದವರು ಸೆರೆ

ರಾಜಕೀಯ ಕಾರಣಗಳಿಗಾಗಿ ಭಾರಿ ವಿವಾದಕ್ಕೊಳಗಾಗಿದ್ದ ಪ್ರಕರಣ ಕಾರ್ಕಳ : ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಶೀಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಜ.3ರಂದು ಥೀಮ್‌ ಪಾರ್ಕ್‌ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ

ಕಾರ್ಕಳ: ಪರಶುರಾಮ ಥೀಮ್‌ ಪಾರ್ಕ್‌ನ ತಾಮ್ರದ ಶೀಟ್‌ ಕಳವು ಮಾಡಿದವರು ಸೆರೆ Read More »

ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಿ ಭಾಗಿ ಗಾಂಧಿನಗರ: ಮೂರು ದಿನಗಳ ಕಾಲ ತವರು ರಾಜ್ಯ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತ್‌ನ ಶ್ರೀ ಸೋಮನಾಥ ದೇವಾಲಯದ ಮೇಲೆ 1026ರ ಜನವರಿಯಲ್ಲಿ ಮಹಮ್ಮದ್‌ ಘಜ್ನಿ ಮೊದಲ ಬಾರಿಗೆ ದಾಳಿ ನಡೆಸಿ ಜ.10ಕ್ಕೆ (ನಿನ್ನೆ) 1,000 ವರ್ಷಗಳು ಕಳೆದಿವೆ. 1 ಸಾವಿರ ವರ್ಷಗಳ ನಂತರವೂ ಈ ದೇವಾಲಯ ಇಂದಿಗೂ ವೈಭವದಿಂದ ಕಂಗೊಳಿಸುತ್ತಿದೆ.

ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ Read More »

ವೃದ್ಧ ವೈದ್ಯ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳೆಸಿದ್ದೆಲ್ಲವನ್ನು ಎರಡು ವಾರದಲ್ಲಿ ಕಳೆದುಕೊಂಡ ವೈದ್ಯ ದಂಪತಿ ನವದೆಹಲಿ : ಅನಿವಾಸಿ ಭಾರತೀಯ ವೃದ್ಧ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಸುಮಾರು 15 ಕೋ. ರೂ. ಲಪಟಾಯಿಸಿದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವೈದ್ಯರಾಗಿ ದುಡಿದು ಗಳಿಸಿದ್ದನ್ನೆಲ್ಲ ಈ ವೃದ್ಧ ವೈದ್ಯರು ಬರೀ ಎರಡು ವಾರದಲ್ಲಿ ಕಳೆದುಕೊಂಡಿದ್ದಾರೆ. ಡಾ.ಓಂ ತನೇಜಾ ಮತ್ತು ಡಾ.ಇಂದಿರಾ ತನೇಜಾ ಅವರನ್ನು ಸೈಬರ್‌ ವಂಚಕರು ಎರಡು ವಾರಕ್ಕೂ ಅಧಿಕ ಕಾಲ ಬೆದರಿಸಿ ಡಿಜಿಟಲ್‌

ವೃದ್ಧ ವೈದ್ಯ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ರೂ. ಲಪಟಾಯಿಸಿದ ಸೈಬರ್‌ ವಂಚಕರು Read More »

error: Content is protected !!
Scroll to Top