ನಿಧನ

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ

ಭಾರತೀಯ ಸಿನಿಮಾರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಬೋಸ್ಲೆ ಯವರಿಗೆ ನಿನ್ನೆ ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆ ನೋವಿನಿಂದ ಮುಂಬೈನ ಬ್ರಿಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮದ್ಯಾಹ್ನ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಶಾ ಬೋಸ್ಲೆ ಅವರು ಹಲವಾರು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಆಶಾ ಭೋಸ್ಲೆ ಅವರು ಹಿಂದಿ ಕನ್ನಡ ಮರಾಠಿ ತಮಿಳು ತೆಲುಗು […]

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ Read More »

ಚಾರಣಕ್ಕೆ ಬಂದು ಕಾಣೆಯಾಗಿದ್ದ ಕೇರಳದ ಶ್ರೀನಂದಾ ಶವ ಪ್ರಪಾತದಲ್ಲಿ ‌ಪತ್ತೆ

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಶ್ರೀನಂದಾ ಎಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್. ಮತ್ತು ಪೊಲೀಸ್ ತಂಡಗಳ ತೀವ್ರ ಶೋಧ ಕಾರ್ಯದ ನಂತರ ಇಂದು ಮೃತದೇಹ ಪತ್ತೆಯಾಗಿದೆ.ಸುಮಾರು 40 ಜನ ಪ್ರವಾಸಿಗರ ತಂಡದಲ್ಲಿ ಶ್ರೀನಂದಾ ‌ಸಹ ಇದ್ದರು. ಮಾಣಿಕ್ಯಧಾರಾ ಸಮೀಪ ಹಠತ್ತಾಗಿ ಶ್ರೀನಂದಾ ಕಾಣೆಯಾಗಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಅವರ

ಚಾರಣಕ್ಕೆ ಬಂದು ಕಾಣೆಯಾಗಿದ್ದ ಕೇರಳದ ಶ್ರೀನಂದಾ ಶವ ಪ್ರಪಾತದಲ್ಲಿ ‌ಪತ್ತೆ Read More »

ಜಾತ್ರಾ ಸಂದರ್ಭ ರಥದ ಚಕ್ರದಡಿ ‌ಸಿಲುಕಿ ವ್ಯಕ್ತಿ ಮೃತ್ಯು

ಕಲಬುರ್ಗಿ: ಹಾಗರಗುಂಡಗಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವರ ಜಾತ್ರೆಯ ರಥೋತ್ಸವದ ವೇಳೆ ರಥದ ಚಕ್ರದಡಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ವಿನೋದ್ ರೆಡ್ಡಿ ಎಂದು ಗುರುತಿಸಲಾಗಿದೆ. ರಥದ ಹಗ್ಗವನ್ನು ಎಳೆಯುತ್ತಿದ್ದ ‌ವೇಳೆ ಅಯತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ರಥದ ಚಕ್ರ ವಿನೋದ್ ಅವರ ತೊಡೆಯ ಮೇಲೆ ಚಲಿಸಿದ್ದು, ಪರಿಣಾಮ ಅವರಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದ ಹಾಗೆ ಫರಹತ್ತಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾತ್ರಾ ಸಂದರ್ಭ ರಥದ ಚಕ್ರದಡಿ ‌ಸಿಲುಕಿ ವ್ಯಕ್ತಿ ಮೃತ್ಯು Read More »

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯ ಕುಶಾಲಪ್ಪ ಗೌಡ ನಿಧನ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯರಾಗಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಶ್ರೀ ಕುಶಾಲಪ್ಪ ಗೌಡ (78) ಇವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 31.03.2026ರಂದು ಉಪ್ಪಿನಂಗಡಿ ಕಟ್ಟೆಚಾರು  ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು  ಉಪ್ಪಿನಂಗಡಿಯ ಶ್ರೀ ಗಣೇಶ ಸ್ಟೋರ್ ಜವಳಿ ಮಳಿಗೆಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದ್ದು, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದ ಇವರು ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸಂಘದೊಂದಿಗೆ ಸಕ್ರಿಯರಾಗಿದ್ದರು. ರಾವಣ, ಇಂದ್ರಜಿತು, ವಾಲಿ,ಸುಗ್ರೀವ,ಮಾಗಧ ,ಕೌರವ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರಲ್ಲದೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಹಿರಿಯ ಸದಸ್ಯ ಕುಶಾಲಪ್ಪ ಗೌಡ ನಿಧನ Read More »

ಅಸೌಖ್ಯದಿಂದ ಮಹಿಳೆ ಸಾವು

ಪುತ್ತೂರು: ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ‌ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರನ್ನು ದೇವಚಳ್ಳ ಗ್ರಾಮದ ಕಲ್ಲುಪಣೆ ಕೃಷ್ಣಪ್ಪ ನಾಯ್ಕ ಎಂಬವರ ಪುತ್ರಿ ಉಷಾಲತಾ(31) ಎಂದು ಗುರುತಿಸಲಾಗಿದೆ. ಉಷಾ ಅವರು ಮಾವಿನಕಟ್ಟೆಯ ಅರ್ಣ ಗ್ಯಾಸ್‌ನಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಎರಡು ವರ್ಷದ ಹಿಂದಷ್ಟೇ ಅಲೆಟ್ಟಿಯ ಸೂರಜ್ ಎಂಬವರ ಜೊತೆ ಇವರ ವಿವಾಹ ನಡೆದಿತ್ತು. ಮೃತರು ಪತಿ, ತಂದೆ, ತಾಯಿ, ಸಹೋದರಿಯರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಸಾವು Read More »

ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು

ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ. ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ

ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು Read More »

ಅಸೌಖ್ಯದಿಂದ ಮಹಿಳೆ ಮೃತ್ಯು

ಕಾಣಿಯೂರು: ಅಸೌಖ್ಯದಿಂದ ಕಾಣಿಯೂರು ಗ್ರಾಮದ ಕೆನ್ನಾರುವಿನ ರಂಜಿತಾ(33) ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮೃತರು ಪತಿ ರಾಘವೇಂದ್ರ, ಪುತ್ರರಾದ ದಿಶಾಂತ್, ಸುಮಂತ್, ಅತ್ತೆ ಪುಷ್ಪಾವತಿ ಅವರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಮೃತ್ಯು Read More »

ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ಟರು ಇನ್ನಿಲ್ಲ

ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿದ್ದ ಸವ್ಯಸಾಚಿ ಕಲಾವಿದ ಮಂಗಳೂರು : ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ ಅದ್ವಿತೀಯ ವೇಷಧಾರಿ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಯಲಕ್ಷಗಾನದಿಂದ ನೇಪಥ್ಯಕ್ಕೆ ಸರಿದ ಬಳಿಕ ಹೆಚ್ಚಾಗಿ ತೀರ್ಥಹಳ್ಳಿಯಲ್ಲಿರುವ ಮಗನ ಮನೆಯಲ್ಲಿ ಇರುತ್ತಿದ್ದರು. ಇತ್ತೀಚೆಗಷ್ಟೆ ವಯೋಸಹಜ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಶುಕ್ರವಾರ ರಾತ್ರೊ 9.10ರ ಸುಮಾರಿಗೆ ತೀರ್ಥಹಳ್ಳಿಯಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ. ಅರ ಪತ್ನಿ

ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ಟರು ಇನ್ನಿಲ್ಲ Read More »

ರೀಲ್ಸ್‌ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಂಡ 15 ವರ್ಷದ ಬಾಲಕ

ಹುಬ್ಬಳ್ಳಿ: ರೀಲ್ಸ್ ಹುಚ್ಚಿನಿಂದ ಹದಿನೈದು ವರ್ಷದ ಹುಡುಗನೊಬ್ಬ ಪ್ರಾಣವನ್ನೇ ಕಳೆದುಕೊಂಡ ದುರಂತ ಘಟನೆ ನಡೆದಿದೆ. ಮೃತನನ್ನು ನಮೀಷ ಸಂಗಳದ ಎಂದು ಗುರುತಿಸಲಾಗಿದೆ. ಈತ ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಯುಗಾದಿ ರಜಾ ಹಿನ್ನೆಲೆ ಮನೆಗೆ ಬಂದಿದ್ದಾಗಿ ತಿಳಿದು ಬಂದಿದೆ. ಐಷಾರಾಮಿ ಕಾರು ಮತ್ತು ಬೈಕ್‌ಗಳಲ್ಲಿ ‌ತನ್ನ ಗೆಳೆಯರ ಜೊತೆಗೆ ಸ್ಟಂಟ್ ಮಾಡಲು ನಮೀಷ ಮುಂದಾಗಿದ್ದಾನೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ನಮೀಷ ಚಲಾಯಿಸುತ್ತಿದ್ದ ಬೈಕ್‌ಗೆ ಗುದ್ದಿದೆ. ಸ್ಥಳದಲ್ಲೇ ನಮೀಷ ಮೃತಪಟ್ಟಿದ್ದಾನೆ. ಮೃತ ಬಾಲಕ ಬಿಜೆಪಿ ಮುಖಂಡ

ರೀಲ್ಸ್‌ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಂಡ 15 ವರ್ಷದ ಬಾಲಕ Read More »

ತಲೆನೋವಿಗೆ ‌ಮನೆಯಲ್ಲೇ ಇದ್ದ ಔಷಧ ಸೇವಿಸಿ ಬಾಲಕ ಸಾವು

ಕಡಬ: ತಲೆನೋವಿಗೆಂದು ‌ಮನೆಯಲ್ಲೇ ಇದ್ದ ಔಷಧ ಕುಡಿದ ಪರಿಣಾಮ 10 ವರ್ಷದ ಬಾಲಕ ಮೃತ ಪಟ್ಟ ಘಟನೆ ರಾಮಕುಂಜದಲ್ಲಿ ‌ನಡೆದಿದೆ. ಈ ಸಂಬಂಧ ಮೃತ ಬಾಲಕನ ತಂದೆ ಸಂಜೀವ ಪೂಜಾರಿ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅವರ ಪುತ್ರನಿಗೆ ‌ಪದೇ ಪದೇ ತಲೆನೋವು ಕಾಣಿಸಿಕೊಂಡಿದೆ. ಮಾ. 18 ರಂದು ತಲೆನೋವು ಎಂದು ಹುಡುಗ ಮನೆಯಲ್ಲೇ ಇದ್ದ ಔಷಧ ಕುಡಿದಿದ್ದಾನೆ. ಆ ಬಳಿಕ ಆರೋಗ್ಯ ಹದೆಗೆಟ್ಟು ಬಾಲಕ ಕಂಗಾಲಾಗಿ ‌ನರಳಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ

ತಲೆನೋವಿಗೆ ‌ಮನೆಯಲ್ಲೇ ಇದ್ದ ಔಷಧ ಸೇವಿಸಿ ಬಾಲಕ ಸಾವು Read More »

error: Content is protected !!
Scroll to Top