ಸುದ್ದಿ

ಮಗು ಕರುಣಿಸಿದ ಪ್ರಕರಣ : ಜೀವನಾಂಶ ನೀಡದೆ ಕೋರ್ಟ್‌ ಆದೇಶ ಉಲ್ಲಂಘನೆ

ಈ ತಿಂಗಳಿಂದ ಜೀವನಾಂಶ ಪಾವತಿಯಾಗಬೇಕಿತ್ತು ಎಂದ ವಿಶ್ವಕರ್ಮ ಮಹಾಸಭಾ ಪುತ್ತೂರು: ಕಾಲೇಜು ಸ್ನೇಹಿತೆಗೆ ಮಗು ಕರುಣಿಸಿದ ಪ್ರಕರಣದಲ್ಲಿ ಆರೋಪಿ ಹೈಕೋರ್ಟ್‌ ನೀಡಿದ ಆದೇಶದಂತೆ 75 ಸಾವಿರ ರೂ. ಜೀವನಾಂಶ ನೀಡಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆರೋಪಿಸಿದೆ. ಆರೋಪಿ ಕೃಷ್ಣ ಜೆ.ರಾವ್‌ಗೆ ಹೈಕೋರ್ಟ್‌ ಅಂತಿಮ ತೀರ್ಪು ಹೊರಬೀಳುವ ತನಕ ಸಂತ್ರಸ್ತ ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ ಜೀವನಾಂಶ ನೀಡಬೇಕೆಂದು ಆದೇಶಿಸಿತ್ತು. ಮೇ 1ರಂದು ಈ ತಿಂಗಳ ಜೀವನಾಂಶ ನೀಡಬೇಕಿತ್ತು. ಆದರೆ ಇನ್ನೂ ಯುವತಿಗೆ […]

ಮಗು ಕರುಣಿಸಿದ ಪ್ರಕರಣ : ಜೀವನಾಂಶ ನೀಡದೆ ಕೋರ್ಟ್‌ ಆದೇಶ ಉಲ್ಲಂಘನೆ Read More »

35 ಲ.ರೂ. ಮೌಲ್ಯದ ಗಾಂಜಾದ ಜೊತೆ ವಿದ್ಯಾರ್ಥಿನಿ ಅರೆಸ್ಟ್‌

ಚೆನ್ನೈನಿಂದ ಗಾಂಜಾ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಯುವತಿ ಮಂಗಳೂರು: ಗಾಂಜಾ ಮಾರಾಟ ಮಾಡಲು ಮತ್ತು ಸಾಗಾಟ ಮಾಡುತ್ತಿದ್ದ ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಿರುವ ಮೂಲ್ಕಿ ಪೊಲೀಸರು, ಸುಮಾರು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಹಾನಾ (21) ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದು,

35 ಲ.ರೂ. ಮೌಲ್ಯದ ಗಾಂಜಾದ ಜೊತೆ ವಿದ್ಯಾರ್ಥಿನಿ ಅರೆಸ್ಟ್‌ Read More »

ಸಿಡಿಲು ಬಡಿದು ಚಾರಣಕ್ಕೆ ಹೋದ ನಾಲ್ವರು ವಿದ್ಯಾರ್ಥಿಗಳು ಸಾವು

ಬೆಟ್ಟದ ವ್ಯೂ ಪಾಯಿಂಟ್‌ನಲ್ಲಿ ಸಂಭವಿಸಿದ ಭೀಕರ ದುರಂತ ಮಲಪ್ಪುರಂ : ಬೆಟ್ಟದ ವ್ಯೂ ಪಾಯಿಂಟ್‌ಗೆ ಚಾರಣ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ಸಿಡಿಲು ಬಡಿದು ಮೃತಪಟ್ಟ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ಮಂಗಳವಾರ ಸಂಜೆ ನಡೆದಿದೆ. ಅವರ ಜೊತೆಗಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ರಹೀಸ್(20), ಫಹಾದ್(19), ಬಹಾಸ್(18) ಮತ್ತು ಜಿಯಾದ್(18) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಮಲಪುರಂದವರಾಗಿದ್ದಾರೆ. 7 ವಿದ್ಯಾರ್ಥಿಗಳ ಗುಂಪು ಮಂಕಡದ ಕುರುಂಗನ್‌ಚೋಳ ವ್ಯೂ ಪಾಯಿಂಟ್‌ಗೆ ತಲುಪಿದ ವೇಳೆ ಈ ಅವಘಡ ಸಂಭವಿಸಿದೆ.

ಸಿಡಿಲು ಬಡಿದು ಚಾರಣಕ್ಕೆ ಹೋದ ನಾಲ್ವರು ವಿದ್ಯಾರ್ಥಿಗಳು ಸಾವು Read More »

ಹೊಸ ನೀತಿ ಜಾರಿಯಿಂದ ಮದ್ಯದ ದರ ಶೇ.20ರಷ್ಟು ಹೆಚ್ಚಳ

ಕಡಿಮೆ ಆದಾಯ ವರ್ಗದವರು ಬಳಸುವ ಮದ್ಯದ ಬೆಲೆ ಏರಿಕೆ ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಮತ್ತೆ ಶಾಕ್ ನೀಡಿದೆ. ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ 20% ತೆರಿಗೆ ಹೆಚ್ಚಿಸಿದ ಹೊಸ ಅಬಕಾರಿ ನೀತಿ ಮಂಗಳವಾರದಿಂದ ಜಾರಿಗೆ ಬಂದಿದ್ದು, ಇದರಿಂದ ಮದ್ಯದ ಬೆಲೆ ಭಾರಿ ಏರಿಕೆಯಾಗಿದೆ. ಆಲ್ಕೋಹಾಲ್ ಇನ್ ಬೇವರೇಜ್ ನೀತಿಯಿಂದ ದರ ಶೇ.20ರಿಂದ ಶೇ.30ರಷ್ಟು ಏರಿಕೆಯಾಗಿದೆ. ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲ್‌ನಲ್ಲಿ ಇರುವ ಆಲ್ಕೋಹಾಲ್ ಅಂಶವನ್ನು ಆಧರಿಸಿ ತೆರಿಗೆ ನಿಗದಿಯಾಗಲಿದೆ. ಅಂದರೆ ಹೆಚ್ಚು ಆಲ್ಕೋಹಾಲ್

ಹೊಸ ನೀತಿ ಜಾರಿಯಿಂದ ಮದ್ಯದ ದರ ಶೇ.20ರಷ್ಟು ಹೆಚ್ಚಳ Read More »

ವಾಟ್ಸಾಪ್‌ ಸಂದೇಶದಿಂದ ಬಯಲಾದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ

ಡಾಕ್ಟರ್‌ ಮಗ ವೈದ್ಯ ವಿದ್ಯಾರ್ಥಿಯೇ ಸೋರಿಕೆಯ ರೂವಾರಿ ನವದೆಹಲಿ : ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ವಿಚಾರೆ ಬಯಲಾಗಿದೆ ಎಂದು ತಿಳಿದುಬಂದಿದೆ. 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಪರೀಕ್ಷೆ ರದ್ದಾದ ಕಾರಣ ಛಿದ್ರವಾಗಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು ಈಗ ದೊಡ್ಡ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿದೆ. ದೇಶದಲ್ಲಿ ನೀಟ್

ವಾಟ್ಸಾಪ್‌ ಸಂದೇಶದಿಂದ ಬಯಲಾದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ Read More »

ಸರ್ಕಾರದಿಂದಲೇ ಪ್ರಾರಂಭವಾಗಲಿದೆ ಮಿತವ್ಯಯ ಪಾಲನೆ

ಸಚಿವರ ಪ್ರಯಾಣ, ಅದ್ದೂರಿ ಔತಣಕೂಟ, ಸಭೆ, ಸೆಮಿನಾರ್‌ಗಳಿಗೆ ಕಡಿವಾಣ ಹಾಕಲು ಚಿಂತನೆ ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದಾಗಿ ಭಾರತದಲ್ಲೂ ತೀವ್ರ ರೀತಿಯ ಆಥಿಕ ಬಿಕ್ಕಟ್ಟು ತಲೆದೋರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನಾಗರಿಕರು ಮಿತವ್ಯಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕರೆನೀಡಿದ್ದಾರೆ. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಸಲಹೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟದಲ್ಲಿ ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಸಚಿವರು ದೂರದ ರಾಜ್ಯಗಳಿಗೆ ಕಾರು, ಹೆಲಿಕಾಪ್ಟರ್​​ಗಳಲ್ಲಿ ಪ್ರಯಾಣ ಮಾಡುವ ಬದಲು

ಸರ್ಕಾರದಿಂದಲೇ ಪ್ರಾರಂಭವಾಗಲಿದೆ ಮಿತವ್ಯಯ ಪಾಲನೆ Read More »

ಕಲ್ಲಂಗಡಿ ಹಣ್ಣು ತಿಂದ ಬಳಿಕ ಬಾಲಕ ಸಾವು, ಮೂವರು ಅಸ್ವಸ್ಥ

ಬೆಳಗ್ಗೆ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಸಂಜೆ ತಿಂದಿದ್ದ ಮಕ್ಕಳು ಛತ್ತೀಸ್‌ಗಢ : ಮುಂಬೈಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ನೆನಪಿನಿಂದ ಮರೆಯಾಗುವ ಮೊದಲೇ ಇದೇ ಮಾದರಿಯ ಘಟನೆಯೊಂದು ಛತ್ತೀಸ್‌ಗಢದ ಜಾಂಜಗೀರ್-ಚಂಪಾ ಎಂಬಲ್ಲಿ ಸಂಭವಿಸಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಘಟನೆಗೆ ಕಲ್ಲಂಗಡಿ ಹಣ್ಣಿನೊಳಗೆ ಸೇರಿಕೊಂಡಿದ್ದ ಇಲಿಪಾಷಾಣ ಸಾವಿಗೆ ಕಾರಣವಾಗಿದೆ ಎಂದು ವರದಿ

ಕಲ್ಲಂಗಡಿ ಹಣ್ಣು ತಿಂದ ಬಳಿಕ ಬಾಲಕ ಸಾವು, ಮೂವರು ಅಸ್ವಸ್ಥ Read More »

ಇನ್ನೊಬ್ಬರ ರಕ್ಷಣೆಗೆ ಆದ್ಯತೆಯಿರಲಿ : ಡಾ.ಸಾಯಿಗೀತಾ ಜ್ಞಾನೇಶ್

ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಪ್ರಥಮ ಚಿಕಿತ್ಸೆ ಹಾಗೂ ಬಿಸಿಗಾಳಿ ನಿವಾರಣೆ ಕುರಿತು ಮಾಹಿತಿ ಕಾರ್ಯಕ್ರಮ ಸುಳ್ಯ: ಸುವರ್ಣ ಸಂಭ್ರಮಾಚರಣೆಯಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಬೆಳ್ಳಿಹಬ್ಬ ಸಂಭ್ರಮಾಚರಣೆಯಲ್ಲಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ “ಪ್ರಥಮ ಚಿಕಿತ್ಸೆ ಹಾಗೂ ಬಿಸಿಗಾಳಿ ನಿವಾರಣೆ ಕುರಿತು ಮಾಹಿತಿ“ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ

ಇನ್ನೊಬ್ಬರ ರಕ್ಷಣೆಗೆ ಆದ್ಯತೆಯಿರಲಿ : ಡಾ.ಸಾಯಿಗೀತಾ ಜ್ಞಾನೇಶ್ Read More »

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ

ತಲೆಮಾರಿನ ನಂಬಿಕೆಗೆ ಪಾತ್ರವಾದ ಪ್ರತಿಷ್ಠಿತ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಪುತ್ತೂರು: ಹೈದರಾಬಾದ್‌ನಲ್ಲಿ ಮೇ 8, 9, 10ರಂದು ನಡೆದ ‘ಪವರ್ ಆಫ್ ಯಂಗ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹೈದರಾಬಾದ್ ಹೈಟೆಕ್ ಸಿಟಿ ಜ್ಯುವೆಲ್ಲರಿ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ (HJMA), ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜಿನ್ ಹಾಗೂ ಇನ್‌ಫಾರ್ಮಾ ಮಾರ್ಕೆಟ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಭರಣ ಕ್ಷೇತ್ರದಲ್ಲಿ

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ Read More »

ಇಂದಿರಾ ಗಾಂಧಿ ಹೇಳಿದರೆ ರಾಷ್ಟ್ರೀಯ ಶಿಸ್ತು, ಮೋದಿ ಹೇಳಿದರೆ ಅನಾಹುತ : ಅಶೋಕ್‌

ಚಿನ್ನ ಖರೀದಿ ಬೇಡ ಎಂಬ ಕರೆಗೆ ಕಾಂಗ್ರೆಸ್‌ ವಿರೋಧಕ್ಕೆ ತಿರುಗೇಟು ಬೆಂಗಳೂರು: ದೇಶದ ಹಿತದೃಷ್ಟಿಯಿಂದ ಚಿನ್ನ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನೆನಪಿನ ಶಕ್ತಿ ನಿಗೂಢವಾಗಿ ಕೆಲಸ ಮಾಡುತ್ತದೆ ಎಂದು ಟೀಕಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಈ ಹಿಂದೆ ಕಾಂಗ್ರೆಸ್ ಸರ್ಕಾರಗಳೂ ಇದೇ ರೀತಿಯ ನಿಲುವು ತಳೆದಿದ್ದವು ಎಂದು

ಇಂದಿರಾ ಗಾಂಧಿ ಹೇಳಿದರೆ ರಾಷ್ಟ್ರೀಯ ಶಿಸ್ತು, ಮೋದಿ ಹೇಳಿದರೆ ಅನಾಹುತ : ಅಶೋಕ್‌ Read More »

error: Content is protected !!
Scroll to Top