ಸುದ್ದಿ

ಇಂದು ಸಂಜೆ ಕಾಂಗ್ರೆಸಿನ ಮಹತ್ವದ ಸಿಎಲ್‌ಪಿ ಸಭೆ : ಮುಖ್ಯಮಂತ್ರಿಯ ಅಧಿಕೃತ ಘೋಷಣೆ

ವಿಧಾನಸೌಧದ ಮೆಟ್ಟಿಲುಗಳ ಪ್ರಮಾಣವಚನ ಸ್ವೀಕರ ಸಾಧ್ಯತೆ ಬೆಂಗಳೂರು : ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ಬೆನ್ನಲ್ಲೇ ಮುಂದಿನ ಜವಾಬ್ದಾರಿ ವಹಿಸಿಕೊಳ್ಳಲು ಕಾಂಗ್ರೆಸ್ ಪಾಳಯದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ. ಇಡೀ ರಾಜ್ಯದ ದೃಷ್ಟಿ ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯತ್ತ ನೆಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರೇ ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ ತೀರ್ಮಾನವನ್ನು ಪ್ರಕಟಿಸಲಿದೆ. ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ನೂತನ […]

ಇಂದು ಸಂಜೆ ಕಾಂಗ್ರೆಸಿನ ಮಹತ್ವದ ಸಿಎಲ್‌ಪಿ ಸಭೆ : ಮುಖ್ಯಮಂತ್ರಿಯ ಅಧಿಕೃತ ಘೋಷಣೆ Read More »

ಈ ಬಾರಿ ಆರ್‌ಸಿಬಿ ಚಾಂಪಿಯನ್‌ ಆದರೂ ಸಂಭ್ರಮಾಚರಣೆಗೆ ಲಗಾಮು

ಫೈನಲ್‌ ಪಂದ್ಯದ ರಾತ್ರಿಯಿಂದಲೇ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿ ಬೆಂಗಳೂರು: ಐಪಿಎಲ್‌ 2026 ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಫೈನಲ್‌ ಪ್ರವೇಶಿಸಿದ್ದು, ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ.ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆದಿತ್ತು. ಮಧ್ಯರಾತ್ರಿ 12 ಗಂಟೆ ನಂತರ ರಸ್ತೆ ರಸ್ತೆಗಳಲ್ಲಿ ಆರ್‌ಸಿಬಿ ಫ್ಯಾನ್ಸ್‌ ಸೆಲಬ್ರೇಷನ್‌ ಮಾಡಿದ್ದರು. ಈ ಬಾರಿ ಸಂಭ್ರಮಾಚರಣೆಗೆಗೆ ಕಟ್ಟುನಿಟ್ಟಿನ ನಿಯಮ ತರಲಾಗಿದೆ. ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಸೋಷಿಯಲ್ ಮೀಡಿಯಾದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಒಂದು

ಈ ಬಾರಿ ಆರ್‌ಸಿಬಿ ಚಾಂಪಿಯನ್‌ ಆದರೂ ಸಂಭ್ರಮಾಚರಣೆಗೆ ಲಗಾಮು Read More »

ಕೇರಳ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣವಾಗಿ ಹಾಡದ ‌ವಂದೇ ಮಾತರಂ: ರಾಜ್ಯಪಾಲರ ಅಸಮಾಧಾನ

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಮಾಡದೇ ಇರುವುದಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಗತಿ ರಾಜ್ಯಪಾಲರ ಕಚೇರಿ ಮತ್ತು ಕೇರಳ ರಾಜ್ಯ ಸರ್ಕಾರದ ನಡುವಿನ ಉದ್ವಿಗ್ನತೆಗೆ ಕಾರಣವಾಗಿದೆ. ಹದಿನಾರನೇ ಕೇರಳ ವಿಧಾನಸಭಾ ಮೊದಲ ಅಧಿವೇಶನದಲ್ಲಿ ಕೇರಳ ಪೊಲೀಸ್ ಬ್ಯಾಂಡ್ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ನುಡಿಸದೇ ಇರುವ ಕಾರಣಕ್ಕೆ ಹೊಸ ರಾಜಕೀಯ ಕೋಲಾಹಲ‌ ಉಂಟಾಗಿರುವುದಾಗಿದೆ. ರಾಜ್ಯಪಾಲರು ತಾವು ಹಾಜರಿದ್ದಾಗ ವಿಧಾನಸಭೆಯಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡದ

ಕೇರಳ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣವಾಗಿ ಹಾಡದ ‌ವಂದೇ ಮಾತರಂ: ರಾಜ್ಯಪಾಲರ ಅಸಮಾಧಾನ Read More »

ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ : ಮುಳಿಯ’ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪುತ್ತೂರಿನ ಕೋರ್ಟ್ ರಸ್ತೆಯ ಶೋರೂಮ್ ನಲ್ಲಿ ಚಿನ್ನಾಭರಣಗಳ ಜತೆಗೆ ಗ್ರಾಹಕರಿಗೆ ಅತಿ ಅಗತ್ಯವಾಗಿರುವ ಉನ್ನತ ಶ್ರೇಣಿಯ ಬ್ರಾಂಡ್‌ಗಳ ವಾಚ್‌ಗಳು ಒಂದೇ ಸೂರಿನಡಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ನೂತನ ಮುಳಿಯ’ಸ್ ಟೈಮ್ ರೋನ್ ವಾಚ್ ಕೌಂಟರ್‌ ಶುಭಾರಂಭಗೊಂಡಿತು. ಸಮಾರಂಭದ ಮುಖ್ಯ ಅತಿಥಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಮುಳಿಯ ಚಿನ್ನಾಭರಣ ಮಳಿಗೆಯು ನಮ್ಮೆಲ್ಲರ ಹೆಮ್ಮೆಯ ಬ್ರಾಂಡ್ ಆಗಿದ್ದು,

ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ : ಮುಳಿಯ’ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ Read More »

ಸಾಲ ವಾಪಸ್ ಕೇಳಿದ್ದಕ್ಕೆ ಯುವಕನ ಅಪಹರಣ, ಹಲ್ಲೆ

ಪುತ್ತೂರು: ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಬೆಳೇತಂಗಡಿಯ ತೆಕ್ಕಾರಿನ ಯುವಕನನ್ನು ಪರಿಚಯಸ್ಥ ಮೂವರು ಅಪಹರಿಸಿ, ರಿಕ್ಷಾದಲ್ಲಿ ‌ಕರೆದೊಯ್ದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ. ಮೇ 25 ರಂದು ಕೆದಿಲದ ಗಡಿಯಾರದಲ್ಲಿ ‌ತಮ್ಮ ಭಾವನಿಗೆ ‌ಸ್ಕೂಟರ್ ನೀಡುವ ಸಲುವಾಗಿ ಕಾಯುತ್ತಿದ್ದಾಗ ಪರಿಚಯದವರೇ ಆದ ಆಸಿಫ್, ಶಾಕಿರ್ ಮತ್ತು ಆಸೀಫ್ ಎಂಬವರು ತನ್ನನ್ನು ಅಪಹರಿಸಿ ರಿಕ್ಷಾದಲ್ಲಿ ‌ಹಾಕಿಕೊಂಡು ಸಜೀಪ ಎಂಬಲ್ಲಿ ಗುಡ್ಡವೊಂದಕ್ಕೆ ‌ಕರೆದೊಯ್ದು ಹಲ್ಲೆ‌ ನಡೆಸಿದ್ದಾರೆ. ಮೇ 26 ರ ವರೆಗೆ ಗುಡ್ಡದಲ್ಲೇ

ಸಾಲ ವಾಪಸ್ ಕೇಳಿದ್ದಕ್ಕೆ ಯುವಕನ ಅಪಹರಣ, ಹಲ್ಲೆ Read More »

ಅನೇಕ ಪ್ರಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಮಹಮ್ಮದ್ ಅಶ್ರಫ್‌ನ ಬಂಧನ

ಮಂಗಳೂರು: ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದ ಹಾಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಂಗಳೂರು ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಅಜಿಲಮೊಗರುವಿನ ಮಾವಿನಕಟ್ಟೆ ‌ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ಅಜ್ಜು ಯಾನೆ ಸಮೀರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಔಪಚಾರಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಅಶ್ರಫ್ ‌ವಿರುದ್ಧ ಸುರತ್ಕಲ್, ಬಂಟ್ವಾಳ, ಪಾಂಡೇಶ್ವರ, ಪುತ್ತೂರು, ಉಪ್ಪಿನಂಗಡಿ ಸೇರಿದಂತೆ ಹಲವು ಠಾಣೆಗಳಲ್ಲಿ ದರೋಡೆ, ಕಳ್ಳತನ ಸೇರಿದಂತೆ ಹಲವಾರು ಪ್ರಕರಣ ದಾಖಲಾಗಿದೆ.

ಅನೇಕ ಪ್ರಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಮಹಮ್ಮದ್ ಅಶ್ರಫ್‌ನ ಬಂಧನ Read More »

ನಿಷೇದಿತ ಡ್ರಗ್ಸ್‌ ಸಾಗಾಟ: ಆರೋಪಿಗಳ ಬಂಧನ

ಬೆಳ್ತಂಗಡಿ: ನಿಷೇಧಿತ ಡ್ರಗ್ಸ್ MDMA ಯನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ವೇಣೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಮಿಜಾರಿನ ಮಹಮ್ಮದ್ ತಹ್ನವೀರ್ ಮತ್ತು ಮೂಡುಬಿದ್ರೆಯ ಮಹಮ್ಮದ್ ಸಫ್ವಾನ್ ಎಂದು ಗುರುತಿಸಲಾಗಿದೆ. ವೇಣೂರು ಪೊಲೀಸ್ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ಮೂಡುಬಿದಿರೆ ಮತ್ತು ಗುರುವಾಯನಕೆರೆಯ ಕಂಬಳದಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಪ್ರಕರಣ ಪತ್ತೆಯಾಗಿದೆ. ಆರೋಪಿಗಳಿಂದ ಅಂದಾಜು ₹39,200 ಮೌಲ್ಯದ ಸುಮಾರು 3.92 ಗ್ರಾಂ ತೂಕದ MDMA ಮಾದಕವಸ್ತು

ನಿಷೇದಿತ ಡ್ರಗ್ಸ್‌ ಸಾಗಾಟ: ಆರೋಪಿಗಳ ಬಂಧನ Read More »

ಬಂಟ್ವಾಳ : ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಕಾಂಪೌಂಡ್‌ಗೆ ಡಿಕ್ಕಿ

ಬಂಟ್ವಾಳ : ಇಂಟರ್‌ಲಾಕ್ ಸಿಮೆಂಟ್ ಬ್ಲಾಕ್‌ಗಳನ್ನು ಸಾಗಿಸುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಳದಲ್ಲಿ ರಾತ್ರಿ ವೇಳೆ ನಡೆದಿದೆ. ಬಿ.ಸಿ.ರೋಡ್‌ – ಪೊಳಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ ಬಿ.ಸಿ.ರೋಡ್‌ ಕಡೆಯಿಂದ ಬರುತ್ತಿದ್ದಾಗ ಏಕಾಏಕಿ ನಿಯಂತ್ರಣ ತಪ್ಪಿ ಜೆಫ್ರಿ ಫೆರ್ನಾಂಡಿಸ್ ಅವರ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ, ಅದರಲ್ಲಿ ತುಂಬಿದ್ದ ಇಂಟರ್‌ಲಾಕ್ ಸಿಮೆಂಟ್ ಬ್ಲಾಕ್‌ಗಳು ಮನೆಯ ಅಂಗಳ ಹಾಗೂ

ಬಂಟ್ವಾಳ : ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಕಾಂಪೌಂಡ್‌ಗೆ ಡಿಕ್ಕಿ Read More »

ಟಯರ್‌ ಸ್ಫೋಟಿಸಿ ಲಾರಿಗೆ ಡಿಕ್ಕಿಯಾದ ಕಾರು : ಐವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿಯಾದ ಪರಿಣಾಮ ಐವರು ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚಳ್ಳಕೆರೆ ಮೂಲದ ಛಾಯಾಗ್ರಾಹಕ ರಾಘವೇಂದ್ರ, ರುದ್ರೇಶ್, ಸೋಮ, ಮಲ್ಲಿಕಾರ್ಜುನ, ಪ್ರಮೋದ್ ಸ್ಥಳದಲ್ಲೇ‌ ಮೃತಪಟ್ಟವರು. ಕಾರಿನಲ್ಲಿ ಬಳ್ಳಾರಿಯಿಂದ ಚಳ್ಳಕೆರೆಗೆ ಆಗಮಿಸುತ್ತಿದ್ದು, ಚಳ್ಳಕೆರೆ ಛಾಯಾಗ್ರಾಹಕರ ಸಂಘದ ಸಹ ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಐವರು ಬಳ್ಳಾರಿಗೆ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಅತಿವೇಗದಿಂದಾಗಿ ಕಾರಿನ ಟೈಯರ್‌ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ‌ ಕಾರು

ಟಯರ್‌ ಸ್ಫೋಟಿಸಿ ಲಾರಿಗೆ ಡಿಕ್ಕಿಯಾದ ಕಾರು : ಐವರು ಸ್ಥಳದಲ್ಲೇ ಸಾವು Read More »

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು

ನಿರ್ಮಾಣ ಹಂತದಲ್ಲಿದ್ದ ಸೇತುವೆ ಚಂಡಮಾರುತದ ಹೊಡೆತಕ್ಕೆ ಧರಾಶಾಯಿ ಲಖನೌ: ಚಂಡಮಾರುತಕ್ಕೆ ಸಿಕ್ಕಿ ಬೆಟ್ಟಾ ನದಿಯ ಮೇಲೆ‌ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 6 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ನಿರ್ಮಿಸಿದ್ದ ಸೇತುವೆಯೇ ಈಗ ಜನರ ಜೀವಕ್ಕೆ ಸಂಚಕಾರ ತಂದಿದೆ. ಘಟನೆಯಲ್ಲಿ ಈವರೆಗೆ 6 ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು Read More »

error: Content is protected !!
Scroll to Top