ಸುದ್ದಿ

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಭೀತಿ ಸೃಷ್ಟಿಸಿದ ವ್ಯಕ್ತಿಯ ಬಂಧನ

ಒಂಟಿ ಮಹಿಳೆಯರು ಇರುವ ಮನೆಗಳಿಗೆ ಬಂದು ನೀರು ಕೇಳಿದ ಯುವಕ ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಗೆ ಬಂದು ಮಹಿಳೆಯರೇ ಇರುವುದನ್ನು ಖಚಿತಪಡಿಸಿಕೊಂಡು ಒಳಗೆ ನುಗ್ಗಿ ಬಾಗಿಲ ಚಿಲಕ ಹಾಕಿ ಮನೆ ಮಂದಿಯನ್ನು ಭೀತಿಗೊಳಪಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಉಪ್ಪಿನಂಗಡಿಯ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ. ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ವೃದ್ಧೆಯೋರ್ವರು ಮಾತ್ರ ಮನೆಯಲ್ಲಿದ್ದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿ ವೃದ್ಧೆ ನೀರು ತರಲೆಂದು ಅಡುಗೆ ಕೋಣೆಗೆ ಹೋದ ವೇಳೆ […]

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಭೀತಿ ಸೃಷ್ಟಿಸಿದ ವ್ಯಕ್ತಿಯ ಬಂಧನ Read More »

ಚುನಾವಣೆ ನಡೆದ 3 ವರ್ಷದ ಬಳಿಕ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ

ಹೈಕೋರ್ಟ್‌ ಆದೇಶದಂತೆ ಮೇ 2ರಂದು ನಡೆಯಲಿದೆ ಮತಗಳ ಮರುಎಣಿಕೆ ಬೆಂಗಳೂರು: ಶೃಂಗೇರಿ ವಿಧಾನಸಭೆ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಚುನಾವಣೆ ನಡೆದ ಮೂರು ವರ್ಷಗಳ ಬಳಿಕ ನಡೆಯಲಿರುವುದು ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮೇ 2ರಂದು ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಕಾಲೇಜು ಆವರಣದಲ್ಲಿ ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಮಗ್ರ ವ್ಯವಸ್ಥೆ ಮಾಡಿಕೊಂಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ

ಚುನಾವಣೆ ನಡೆದ 3 ವರ್ಷದ ಬಳಿಕ ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ Read More »

ಚಾರ್ಮಾಡಿ ಘಾಟಿಯಲ್ಲಿ ಬಸ್‌ ಪಲ್ಟಿ : 25 ಮಂದಿಗೆ ಗಾಯ, ಐವರು ಗಂಭೀರ

ಧರ್ಮಸ್ಥಳದಲ್ಲಿ ಮದುವೆ ಮುಗಿಸಿ ಹಿಂದಿರುಗುತ್ತಿದ್ದಾಗ ಸಂಭವಿಸಿದ ಅಪಘಾತ ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವಿನಲ್ಲಿ ಭಾನುವಾರ ಸಂಜೆ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಪಲ್ಟಿಯಾಗಿ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಕಿತ್ಸೆಗೆ ಮಂಗಳೂರಿನ ಆಸ್ಪತರೆಗೆ ದಾಖಲಿಸಲಾಗಿದೆ. ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಮೂಡಿಗೆರೆಯತ್ತ ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಧರ್ಮಸ್ಥಳದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ಮೂಡಿಗೆರೆಯತ್ತ ಖಾಸಗಿ ಬಸ್ಸು ಹೊರಟಿತ್ತು.

ಚಾರ್ಮಾಡಿ ಘಾಟಿಯಲ್ಲಿ ಬಸ್‌ ಪಲ್ಟಿ : 25 ಮಂದಿಗೆ ಗಾಯ, ಐವರು ಗಂಭೀರ Read More »

ಟ್ರಂಪ್‌ ಡಿನ್ನರ್‌ ಕೂಟದಲ್ಲಿ ಗುಂಡು ಹಾರಿಸಿದಾತ ಅರೆಸ್ಟ್‌

ವರದಿಗಾರರ ಔತಣಕೂಟದಲ್ಲಿ ಟ್ರಂಪ್‌ ದಂಪತಿ ಇರುವಾಗಲೇ ಗುಂಡು ಹಾರಾಟ ವಾಷಿಂಗ್ಟನ್‌: ಶ್ವೇತಭವನದ ಸಮೀಪ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವರದಿಗಾರರ ಔತಣಕೂಟದಲ್ಲಿ ಗುಂಡು ಹಾರಿಸದವನನ್ನು ಬಂಧಿಸಲಾಗಿದೆ. ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿದ್ದು, ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಪತ್ರಕರ್ತರ ಜೊತೆಗಿನ ಡಿನ್ನರ್‌ ವೇಳೆ ನಡೆದ ಗುಂಡಿನ ದಾಳಿಯ ಬಗ್ಗೆ ಟ್ರಂಪ್‌ ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಪ್ರತಿಕ್ರಿಯಿಸಿದ್ದಾರೆ.ಸೀಕ್ರೆಟ್ ಸರ್ವಿಸ್ ಮತ್ತು

ಟ್ರಂಪ್‌ ಡಿನ್ನರ್‌ ಕೂಟದಲ್ಲಿ ಗುಂಡು ಹಾರಿಸಿದಾತ ಅರೆಸ್ಟ್‌ Read More »

ಶಾಲೆಗಳಲ್ಲಿ ಕನ್ನಡ ದಿನ ಪತ್ರಿಕೆ ಓದು ಕಡ್ಡಾಯ

ಪ್ರತಿದಿನ ಕನಿಷ್ಠ 10 ನಿಮಿಷ ಪತ್ರಿಕೆ ಓದಿಸಲು ಶಿಕ್ಷಣ ಇಲಾಖೆ ಆದೇಶ ಬೆಂಗಳೂರು : ರಾಜ್ಯಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಕನ್ನಡ ದಿನ ಪತ್ರಿಕೆಗಳನ್ನು ಓದುವುದನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ. ಇತ್ತೀಚಿನ

ಶಾಲೆಗಳಲ್ಲಿ ಕನ್ನಡ ದಿನ ಪತ್ರಿಕೆ ಓದು ಕಡ್ಡಾಯ Read More »

ಮತ್ತೆ ಮುರಿದು ಬಿದ್ದ ಸಂಧಾನ : ಅಮೆರಿಕ, ಪಾಕಿಸ್ತಾನಕ್ಕೆ ಮುಖಭಂಗ

ಅಮೆರಿಕ ಪ್ರತಿನಿಧಿಗಳನ್ನು ಭೇಟಿಯಾಗಲು ನಿರಾಕರಿಸಿ ನಿರ್ಗಮಿಸಿದ ಇರಾನ್‌ ನಿಯೋಗ ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆಯೋಜನೆಯಾಗಿದ್ದ ಇರಾನ್-ಅಮೆರಿಕ ಸಂಧಾನ ಸಭೆ ಮತ್ತೆ ಮುರಿದುಬಿದ್ದಿದ್ದು, ಸಂಧಾನಕ್ಕಾಗಿ ಆಗಮಿಸಿದ್ದ ಅಮೆರಿಕ ಸರ್ಕಾರದ ನಿಯೋಗವನ್ನು ಭೇಟಿಯಾಗದೆ ಇರಾನ್ ನಿಯೋಗ ನಿರ್ಗಮಿಸಿದೆ. ಪಾಕಿಸ್ತಾನದಲ್ಲಿ ಅಮೆರಿಕಕ್ಕೆ ಜಾಗತಿಕ ಮುಜುಗರವಾಗಿದ್ದು, ಅಮೆರಿಕದ ಪ್ರತಿನಿಧಿಯನ್ನು ಭೇಟಿಯಾಗದೆ ಇರಾನ್ ನಿಯೋಗವು ಪಾಕಿಸ್ತಾನದಿಂದ ನಿರ್ಗಮಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗ ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಶನಿವಾರ ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತು. ಹೀಗಾಗಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನಕ್ಕೆ

ಮತ್ತೆ ಮುರಿದು ಬಿದ್ದ ಸಂಧಾನ : ಅಮೆರಿಕ, ಪಾಕಿಸ್ತಾನಕ್ಕೆ ಮುಖಭಂಗ Read More »

ಬೈಕ್‌ ಪಲ್ಟಿಯಾಗಿ ಗಾಯಗೊಂಡಿದ್ದ ಯುವಕ ಸಾವು

ಪುತ್ತೂರು : ಬೈಕ್ ಪಲ್ಟಿಯಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹಿರೇಬಂಡಾಡಿ ನಿವಾಸಿ ಲಿಖಿತ್ ರೈ ಎಂಬ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಏಪ್ರಿಲ್ 22ರ ಸಂಜೆ ಕೊಯಿಲ-ಹಿರೇಬಂಡಾಡಿ ರಸ್ತೆಯ ಶಾಖಾಪುರ ಎಂಬಲ್ಲಿ ಲಿಖಿತ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿತ್ತು. ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಾರ್ವಜನಿಕರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ಕೆಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಲಿಖಿತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬೈಕ್‌ ಪಲ್ಟಿಯಾಗಿ ಗಾಯಗೊಂಡಿದ್ದ ಯುವಕ ಸಾವು Read More »

ತಲೆಮರೆಸಿಕೊಂಡಿದ್ದ ಅಪರಾಧಿ ಆಂಧ್ರ ಪ್ರದೇಶದಲ್ಲಿ ಪತ್ತೆ

ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಯಾಗಿದ್ದ ಅಪರಾಧಿ ಕಡಬ : ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಪ್ರರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ.ಅಬ್ದುಲ್ ಅಜೀಜ್ (30) ಬಂಧಿತ ಆರೋಪಿ. 2012ರ ಜನವರಿ 31ರಂದು ಕಡಬ ಠಾಣಾ ವ್ಯಾಪ್ತಿಯ ಪುತ್ತೂರು, ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ

ತಲೆಮರೆಸಿಕೊಂಡಿದ್ದ ಅಪರಾಧಿ ಆಂಧ್ರ ಪ್ರದೇಶದಲ್ಲಿ ಪತ್ತೆ Read More »

ಶ್ವೇತ ಭವನದ ಭೋಜನ ಕೂಟದಲ್ಲಿ ಗುಂಡಿನ ದಾಳಿ : ಟ್ರಂಪ್‌ ದಂಪತಿಯ ರಕ್ಷಣೆ

ಮಾಧ್ಯಮದವರಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕೇಳಿಸಿದ ಗುಂಡಿನ ಶಬ್ದ ವಾಷಿಂಗ್ಟನ್ : ವಾಷಿಂಗ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತ ಭವನದ ವಾರ್ಷಿಕ ಭೋಜನಕೂಟದಲ್ಲಿ ಗಂಭೀರ ಸ್ವರೂಪದ ಭದ್ರತಾ ವೈಫಲ್ಯ ನಡೆದಿರುವುದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣಕ್ಕೂ ಮುನ್ನ ಗುಂಡಿನ ಶಬ್ದ ಕೇಳಿಬಂದು ಸಭಾಂಗಣದಲ್ಲಿ ಅವ್ಯವಸ್ಥೆ ಉಂಟಾಯಿತು. ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ರಾಜತಾಂತ್ರಿಕರಿಂದ ತುಂಬಿದ್ದ ಸಭಾಂಗಣದಲ್ಲಿ ಐದರಿಂದ ಎಂಟು ಬಾರಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ,

ಶ್ವೇತ ಭವನದ ಭೋಜನ ಕೂಟದಲ್ಲಿ ಗುಂಡಿನ ದಾಳಿ : ಟ್ರಂಪ್‌ ದಂಪತಿಯ ರಕ್ಷಣೆ Read More »

ಮದುವೆ ಮಂಟಪದಿಂದ 1 ಕೋ.ರೂ. ಆಭರಣ ಕಳವು

ಬೆಂಗಳೂರು : ಮದುವೆ ಮನೆಯಲ್ಲಿ ಕೈಚಳಕ ತೋರಿರುವ ಕಳ್ಳರು ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಅಮೆರಿಕದಲ್ಲಿ ವಾಸವಿರುವ 52 ವರ್ಷದ ವೈದ್ಯೆ ಡಾ.ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ಕದ್ದಿರುವ ಪ್ರಕರಣ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಘಟನೆ ಸಂಬಂಧ ಡಾ.ಸಿರುವೆಲ್ಲ ಶ್ರೀದೇವಿ ಗುರುವಾರ ಮಧ್ಯಾಹ್ನ ದೂರು

ಮದುವೆ ಮಂಟಪದಿಂದ 1 ಕೋ.ರೂ. ಆಭರಣ ಕಳವು Read More »

error: Content is protected !!
Scroll to Top