ಸುದ್ದಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರಿಗೆ ತಲಾ 3 ರೂ. ಏರಿಕೆ

ಜನರಿಗೆ ನೇರವಾಗಿ ತಟ್ಟತೊಡಗಿದ ಯುದ್ಧದ ಬಿಸಿ ನವದೆಹಲಿ: ನಿರೀಕ್ಷೆಯಂತೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ. ನಾಲ್ಕು ವರ್ಷಗಳ ಬಳಿಕ ಈ ಎರಡು ಇಂಧನಗಳ ಬೆಲೆ ಹೆಚ್ಚಾಗಿದೆ. ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿವೆ. ಪರಿಷ್ಕೃತ ದರ ಇಂದು ಬೆಳಿಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ದರ 106.17 ರೂ. ಏರಿಕೆಯಾದರೆ ಡಿಸೇಲ್‌ ದರ 94.10 ರೂ. […]

ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರಿಗೆ ತಲಾ 3 ರೂ. ಏರಿಕೆ Read More »

ಮೂರನೇ ಹಂತದಲ್ಲಿ ಕರ್ನಾಟಕ ಸಹಿತ 16 ರಾಜ್ಯಗಳಲ್ಲಿ ಎಸ್‌ಐಆರ್‌

ಮನೆ ಮನೆಗೆ ಭೇಟಿ ನೀಡಿ ಅರ್ಹ ಮತದಾರರನ್ನು ಗುರುತಿಸುವ ಕಾರ್ಯ ನವದೆಹಲಿ: ಭಾರತ ಚುನಾವಣಾ ಆಯೋಗ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಆದೇಶ ಪ್ರಕಟಿಸಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಎಸ್‌ಐಆರ್‌ ನಡೆಯಲಿದೆ. ಈ ರಾಜ್ಯಗಳಲ್ಲಿ ಕಷ್ಟಕರವಾದ ಭೂ ಪ್ರದೇಶ, ಹವಾಮಾನ ಅಡಚಣೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳು, ವಿಶೇಷವಾಗಿ ಹಿಮಪಾತ ಪೀಡಿತ

ಮೂರನೇ ಹಂತದಲ್ಲಿ ಕರ್ನಾಟಕ ಸಹಿತ 16 ರಾಜ್ಯಗಳಲ್ಲಿ ಎಸ್‌ಐಆರ್‌ Read More »

ತಗ್ಗಿನಲ್ಲಿ ಹಾರಿದ ಪ್ರಯಾಣಿಕ ವಿಮಾನಗಳು : ಆತಂಕಕ್ಕೊಳಗಾದ ಜನ

ಮಳೆ ಪರಿಣಾಮ ಲ್ಯಾಂಡ್‌ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಗಿರಕಿ ಹೊಡೆದ ವಿಮಾನಗಳು ವಿಟ್ಲ: ವಿಟ್ಲ ಪರಿಸರದಲ್ಲಿ ನಿನ್ನೆ ಎರಡು ವಿಮಾನಗಳು ಬಹಳ ತಗ್ಗಿನಲ್ಲಿ ಹಾರಾಟ ನಡೆಸಿ ಸ್ಥಳೀಯರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕೆಲ ಸಮಯದ ಹಿಂದೆಯಷ್ಟೇ ಈ ಪರಿಸರದಲ್ಲಿ ಖನಿಜ ಶೋಧಕ್ಕಾಗಿ ಕಿರು ವಿಮಾನ ತಗ್ಗಿನಲ್ಲಿ ಹಾರಾಟ ನಡೆಸಿತ್ತು. ಆರಂಭದಲ್ಲಿ ಜನರು ಇದೇ ಮಾದರಿಯ ಹಾರಾಟ ಇದಾಗಿರಬಹುದು ಎಂದು ಭಾವಿಸಿದ್ದರು. ಆದರೆ ಇದು ದೊಡ್ಡ ವಿಮಾನವಾಗಿರುವುದರಿಂದ ಜನ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂದು

ತಗ್ಗಿನಲ್ಲಿ ಹಾರಿದ ಪ್ರಯಾಣಿಕ ವಿಮಾನಗಳು : ಆತಂಕಕ್ಕೊಳಗಾದ ಜನ Read More »

ಸಂವಿಧಾನ, ನ್ಯಾಯಾಂಗ ವಿರೋಧಿ ನಿರ್ಧಾರ: ಹಿಜಾಬ್‌ ಅನುಮತಿಗೆ ಸುನಿಲ್‌ ಕುಮಾರ್‌ ಆಕ್ರೋಶ

ಶಿಕ್ಷಣವನ್ನು ಇಸ್ಲಾಮೀಕರಣ ಮಾಡುವ ವ್ಯವಸ್ಥಿತ ಷಡ್ಯಂತ್ರ ಎಂದ ಯಶ್‌ಪಾಲ್‌ ಸುವರ್ಣ ಉಡುಪಿ: ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ತುಷ್ಟೀಕರಣಕ್ಕಾಗಿ ಸಂವಿಧಾನ, ನ್ಯಾಯಾಲಯ ಎಲ್ಲವನ್ನೂ ಬಲಿಕೊಡಲು ಕಾಂಗ್ರೆಸ್‌ ತಯಾರಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ

ಸಂವಿಧಾನ, ನ್ಯಾಯಾಂಗ ವಿರೋಧಿ ನಿರ್ಧಾರ: ಹಿಜಾಬ್‌ ಅನುಮತಿಗೆ ಸುನಿಲ್‌ ಕುಮಾರ್‌ ಆಕ್ರೋಶ Read More »

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌

ಮನೆಗೆ ಹೋಗಲು ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಬಲವಂತವಾಗಿ ಬಸ್‌ಗೆ ಹತ್ತಿಸಿಕೊಂಡು ಕೃತ್ಯ ನವದೆಹಲಿ: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ನಂಗ್ಲೋಯಿಯಲ್ಲಿ ನಡೆದಿದೆ. ಬಸ್ಸಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಬಸ್ ಡ್ರೈವರ್, ಕಂಡಕ್ಟರ್‌ನನ್ನು ಬಂಧಿಸಿದ್ದಾರೆ. ಸೋಮವಾರ ರಾತ್ರಿ 11 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಎಂದಿನಂತೆ ಕೆಲಸ ಮುಗಿಸಿ ಮಹಿಳೆ ಸರಸ್ವತಿ ವಿಹಾರ್

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌ Read More »

ಅಮೆರಿಕ-ಚೀನಾ ಭಾಯಿ ಭಾಯಿ : ಟ್ರಂಪ್‌ಗೆ ಭರ್ಜರಿ ಸ್ವಾಗತ

ಕ್ಸಿ ಜಿನ್‌ಪಿಂಗ್ ಅವರನ್ನು ಹಾಡಿ ಹೊಗಳಿದ ಟ್ರಂಪ್‌ ಬೀಜಿಂಗ್‌: ಚೀನಾಕ್ಕೆ ಭೇಟಿ ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಚೀನಾದ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದ ಟ್ರಂಪ್‌ ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಐತಿಹಾಸಿಕ ಜಿ-2 (G2) ಶೃಂಗಸಭೆಯ ಆರಂಭಿಕ ಮಾತುಕತೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಜಿನ್‌ಪಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಿಮ್ಮೊಂದಿಗೆ ಇರುವುದು ಮತ್ತು

ಅಮೆರಿಕ-ಚೀನಾ ಭಾಯಿ ಭಾಯಿ : ಟ್ರಂಪ್‌ಗೆ ಭರ್ಜರಿ ಸ್ವಾಗತ Read More »

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌

ಬೆಲೆ ನಿಯಂತ್ರಿಸಲು ಕೇಂದ್ರದಿಂದ ಕಠಿಣ ಕ್ರಮ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶದೊಳಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30ರವರೆಗೆ ಸಂಪೂರ್ಣ ನಿಷೇಧ ಹೇರಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಈ ಆದೇಶ ಪ್ರಕಟಿಸಿದೆ. ಸಕ್ಕರೆ ರಫ್ತು ನೀತಿಯನ್ನು ಈ ಹಿಂದೆ ಇದ್ದ ‘ನಿರ್ಬಂಧಿತ’ ವರ್ಗದಿಂದ ‘ನಿಷೇಧಿತ’ ವರ್ಗಕ್ಕೆ

ಸಕ್ಕರೆ ರಫ್ತು ತಕ್ಷಣದಿಂದ ಬ್ಯಾನ್‌ Read More »

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು

ಮರ, ವಿದ್ಯುತ್‌ ಕಂಬ, ಕಟ್ಟಡ ಬಿದ್ದು ವ್ಯಾಪಕ ಹಾನಿ ಲಖನೌ : ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಉತ್ತರ ಪ್ರದೇಶ ವ್ಯಾಪ್ತಿಯಲ್ಲಿ ಚಂಡಮಾರುತ

ಗಾಳಿ-ಮಳೆಯ ಆರ್ಭಟ : 74 ಮಂದಿ ಸಾವು Read More »

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹಿಂಬಾಕಿ ಪಾವತಿ, ವೇತನ ತಾರತಮ್ಯ ನಿವಾರಣೆ ಬೇಡಿಕೆ ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1,272 ಕೋಟಿ ರೂ.ಒಂದೇ ಕಂತಿನಲ್ಲಿ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ Read More »

ಇಂದಿರಾ ಗಾಂಧಿ ನಂತರದ ಮಾಸ್‌ ಲೀಡರ್‌ ಮೋದಿ : ರಾಜಣ್ಣ ಹೊಗಳಿಕೆ

ಮೋದಿ ಜನರನ್ನು ಆಕರ್ಷಿಸುವ ಲೀಡರ್‌ ಎಂದ ಮಾಜಿ ಸಚಿವ ಬೆಂಗಳೂರು: ಇಂದಿರಾ ಗಾಂಧಿ ನಂತರ ಮಾಸ್ ಲೀಡರ್, ಜನರನ್ನು ಆಕರ್ಷಿಸುವ ನಾಯಕರಿದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿ ಕಾಂಗ್ರೆಸ್‌ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ಇಂದಿರಾ ಗಾಂಧಿಯವರ ನಂತರ ಮಾಸ್ ಲೀಡರ್ ಅಂತ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ. ಹಾಗಂತ ನಾನು ಮೋದಿಯವರನ್ನು ಹೊಗಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ರಾಜಕಾರಣದಲ್ಲಿ ಜನಪ್ರಿಯತೆ ಯಾರಿಗೂ ಶಾಶ್ವತವಲ್ಲ.

ಇಂದಿರಾ ಗಾಂಧಿ ನಂತರದ ಮಾಸ್‌ ಲೀಡರ್‌ ಮೋದಿ : ರಾಜಣ್ಣ ಹೊಗಳಿಕೆ Read More »

error: Content is protected !!
Scroll to Top