ಮಂಗಳೂರು: ಮಂಗಳೂರು ಮತ್ತು ಸಿಂಗಾಪುರ ನಡುವೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಜನವರಿ 21 ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರವಾಗಲಿದೆ.
ಮಂಗಳೂರಿನೊಂದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೆಯ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತಾಣ ಎಂದುಸಿಂಗಾಪುರವಾಗಲಿದೆ. ಈವರೆಗೆ, ಮಂಗಳೂರಿನಿಂದ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರ ಕಾರ್ಯಾಚರಿಸುತ್ತಿದ್ದು. ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಣೆ ತಿಳಿಸಿದೆ.
ಸರ್ಕಾರಕ್ಕೆ ಮನವಿ ಮಾಡಿದ್ದ ಸಂಸದ ಬ್ರಿಜೇಶ್ ಚೌಟ
ಸಿಂಗಾಪುರ , ಮಂಗಳೂರು ನೇರ ವಿಮಾನ ಸಂಚಾರವಿಲ್ಲದೆ, ಉದ್ಯಮಕ್ಕೆ ತೆರಳುವವರಿಗೆ ಸಮಸ್ಯೆ ಉಂಟಾಗಿದ್ದರಿಂದ , ಸಿಂಗಾಪುರ ಮಂಗಳೂರು ನೇರ ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಮಾಡಿದ್ದರು. ಮಂಗಳೂರು ಮತ್ತು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಮಂಗಳೂರು ಸಿಂಗಾಪುರ ಮಧ್ಯೆ ನೇರ ವಿಮಾನಯಾನ ಸಂಪರ್ಕದಿಂದ ಉದ್ಯಮ ಕ್ಷೇತ್ರಕ್ಕೆ ಸಹಕಾರವಾಗಿರಲಿದ್ದು, ಮಂಗಳೂರು ಹಾಗೂ ಸಿಂಗಾಪುರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸುಲಭವಾಗಲಿದೆ. ಜತೆಗೆ, ಆಸಿಯಾನ್ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತವನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಕ್ಸ್ ಈಸ್ಟ್ ನೀತಿಗೆ ಪೂರಕವಾಗಲಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿದ್ದಾರೆ.
ಮಂಗಳೂರು ಸಿಂಗಾಪುರ ವಿಮಾನ ಸಂಚಾರದ ಸಮಯ
ವಿಮಾನ ಸಂಖ್ಯೆ IX 0862 ಮಂಗಳೂರಿನಿಂದ 5.55 ಗಂಟೆಗೆ ಹೊರಟು 13.25 ಗಂಟೆಗೆ ಸಿಂಗಾಪುರಕ್ಕೆ ತಲುಪಲಿದೆ. ವಿಮಾನ ಸಂಖ್ಯೆ IX 0861 ಸಿಂಗಾಪುರದಿಂದ 14.25 ಗಂಟೆಗೆ ಹೊರಟು 16.55 ಗಂಟೆಗೆ ಮಂಗಳೂರಿಗೆ ಬರಲಿದೆ.
ಮಂಗಳೂರು ಹಾಗೂ ದೆಹಲಿ ಮಧ್ಯೆ ಪ್ರತಿ ದಿನ ನೇರ ವಿಮಾನ ಸಂಚಾರ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1 ರಿಂದ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿ ದಿನ ನೇರ ವಿಮಾನಯಾನ ಸಂಚಾರವಾಗಲಿದೆ.. ವಿಮಾನ ಸಂಖ್ಯೆ IX 1552 ಮಂಗಳೂರಿನಿಂದ 6.40 ಗಂಟೆಗೆ ಹೊರಟು 9.35 ಗಂಟೆಗೆ ದೆಹಲಿಗೆ ತಲುಪಲಿದೆ. ವಿಮಾನ ಸಂಖ್ಯೆ IX 2768 ದೆಹಲಿಯಿಂದ 6.40 ಗಂಟೆಗೆ ಹೊರಟು ಮಂಗಳೂರಿಗೆ 9.35 ಗಂಟೆಗೆ ಬರಲಿದೆ.
ಮಂಗಳೂರು, ಪುಣೆ ನೇರ ವಿಮಾನ ಸಂಚಾರ ಸಮಯದ ವೇಳಾಪಟ್ಟಿ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 4 ರಿಂದ ಮಂಗಳೂರು ಮತ್ತು ಪುಣೆ ನಡುವೆ ಎರಡು ನೇರ ವಿಮಾನಗಳನ್ನು ಕಾರ್ಯ ನಿರ್ವಹಿಸಲಿದೆ.
ವಿಮಾನ ಸಂಖ್ಯೆ IX 2256 ಪುಣೆಯಿಂದ 8 ಗಂಟೆಗೆ ಹೊರಟು 9.25 ಗಂಟೆಗೆ ಪುಣೆಗೆ ತಲುಪುತ್ತದೆ. ವಿಮಾನ ಸಂಖ್ಯೆ 2257 ಪುಣೆಯಿಂದ 9.55 ಗಂಟೆಗೆ ಹೊರಟು 11.40 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ವಿಮಾನ ಸಂಖ್ಯೆ 2236 ಮಂಗಳೂರಿನಿಂದ 18.30 ಗಂಟೆಗೆ ಹೊರಟು 20.00 ಗಂಟೆಗೆ ಪುಣೆಗೆ ಮತ್ತು ವಿಮಾನ ಸಂಖ್ಯೆ 2237 ಪುಣೆಯಿಂದ 20.35 ಗಂಟೆಗೆ ಹೊರಟು 22.05 ಗಂಟೆಗೆ ಮಂಗಳೂರಿಗೆ ಬರಲಿದೆ.