ಪುತ್ತೂರಿನಲ್ಲಿ ನಿರ್ಗತಿಕರ ಪುನರ್ವಸತಿ ಕಾರ್ಯಾಚರಣೆ | ರೋಟರಿ ಯುವದಲ್ಲಿ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ 12 ನಿರ್ಗತಿಕರ ರಕ್ಷಣೆ

ಪುತ್ತೂರು: ಪುತ್ತೂರು ನಗರದ  ಹಲವು ಭಾಗಗಳಲ್ಲಿ ನಿರ್ಗತಿಕರು, ಅನಾಥ ವೃದ್ಧರು ವಾಸವಾಗಿದ್ದು ಇವರಿಗೆ ಒಂದು ಶಾಶ್ವತವಾದ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ  ರೋಟರಿ ಕ್ಲಬ್ ಪುತ್ತೂರು ಯುವ ಸಹಭಾಗಿತ್ವದಲ್ಲಿ ನಿರ್ಗತಿಕರ ನಿರ್ಮೂಲನ  ಕಾರ್ಯಾಚರಣೆ ನಡೆಯಿತು.

ರಾತ್ರಿ 8 ಗಂಟೆಗೆ ಪ್ರಾರಂಭವಾದ ಕಾರ್ಯಚರಣೆಯು ತಡರಾತ್ರಿ 2 ಗಂಟೆ ತನಕ ನಡೆಯಿತು.  ಒಟ್ಟು 12 ಮಂದಿ  ನಿರ್ಗತಿಕ ಅನಾಥ ವೃದ್ಧರನ್ನು ರಕ್ಷಣೆ ಮಾಡಲಾಯಿತು.ಅವರನ್ನು  ಜಿಡೆಕಲ್ಲು ಸಮೀಪ ಇರುವ ದೀಪಶ್ರೀ  ವೃದ್ಧಾಶ್ರಮದಲ್ಲಿ ಸೇರ್ಪಡೆಗೊಳಿಸಲಾಯಿತು.

ಸೇರ್ಪಡೆಗೊಂಡ ನಿರ್ಗತಿಕರ ವಿವರ. ಕೆ ವಿ ಶೆಣೈ ಪೆಟ್ರೋಲ್ ಪಂಪ್ ಬಳಿಯಿಂದ ಒಬ್ಬರು, ದರ್ಬೆ ಬಸ್ಸು ತಂಗುದಾಣ ದಿಂದ ಮೂವರು, ಸರಕಾರಿ ಬಸ್ಸು ನಿಲ್ದಾಣದಿಂದ ಮೂವರು, ರೈಲ್ವೆ ನಿಲ್ದಾಣದಿಂದ ಒಬ್ಬರು, ಮಹಾಲಿಂಗೇಶ್ವರ ದೇವಸ್ಥಾನದ ಕಂಬಳಗದ್ದೆಯಿಂದ ಒಬ್ಬರು, ಪಡೀಲ್ ನಿಂದ ಇಬ್ಬರು ಹಾಗೂ ಉಪ್ಪಿನಂಗಡಿ ವೆಂಕಟರಮಣ ದೇವಾಲಯದ ಪಕ್ಕದಲ್ಲಿ ಒಬ್ಬರು. ಹೀಗೆ ಒಟ್ಟು 12 ಮಂದಿ ನಿರ್ಗತಿಕ ಅನಾಥರ ರಕ್ಷಣೆ ಮಾಡಿ ಅವರಿಗೆ ಒಂದು  ಸೂರನು ಕಲ್ಪಿಸಲಾಗಿದೆ.



































 
 

ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು ನಗರ ಪೊಲೀಸ್ ಠಾಣೆ, ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕಾರ ನೀಡಿದೆ.  ಕಾರ್ಯಾಚರಣೆಯಲ್ಲಿ  ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಪಶುಪತಿ ಶರ್ಮ, ವಿಶಾಲ್ ಮಂತೇರೂ, ಗೌರವ್ ಭಾರದ್ವಾಜ್, ಶಿಶು ಅಭಿವೃದ್ಧಿ ಇಲಾಖೆಯ ಯೋಜನೆ ನಿರ್ದೇಶಕರಾದ ಶ್ರೀಮತಿ ಮಂಗಳ ಕಾಳೆ, ಶ್ರೀಮತಿ ನಾಗರತ್ನ,ಸಮಾಜ ಕಲ್ಯಾಣ ಇಲಾಖೆಯ  ಕಿಶೋರ್, ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸ್ಕರಿಯ ಎಂ.ಎ. ಶರಣ್ ಪಾಟೀಲ್,ಶಿವರಾಜ್,ರೂಪೇಶ್,ಸಂತೋಷ್,ಹೋಂ ಗಾರ್ಡ್ ಸುರೇಶ್ ಸಹಕರಿಸಿದರು.

 ಉಪ್ಪಿನಂಗಡಿಯ ಕಾರ್ಯಾಚರಣೆಯಲ್ಲಿ  ಹಿರಿಯ ಪತ್ರಕರ್ತರಾದ ಉದಯಕುಮಾರ್ ಯುಎಲ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮಿ ಪ್ರಭು  ಹಾಗೂ ನಾಗೇಶ್ ಪ್ರಭು  ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top