ಪುತ್ತೂರು: ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ, ಶಾಂತಿ ಸೌಹಾರ್ದತೆಯ ಶ್ರದ್ಧಾ ಕೇಂದ್ರ ‘ಇರ್ದೆ-ಪಳ್ಳಿತ್ತಡ್ಕ’ ದರ್ಗಾ ಶರೀಫ್‍ನಲ್ಲಿ 48ನೇ ಉರೂಸ್ ಮುಬಾರಕ್ ಫೆ. 22 ರಿಂದ 28 ರ ತನಕ ನಡೆಯಲಿದೆ ಎಂದು ದರ್ಗಾ ಶಾರೀಫ್‍ನ ಆಲಿ ಕುಂಞಿ ಕೊರಿಂಗಿಲ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಲಿಯುಲ್ಲಾಗಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಆಚರಣೆಯಲ್ಲಿ ದೇಶದ ನಾನಾ ಭಾಗದ ಜನರು ಮೇಳೈಸುತ್ತಾರೆ. ದಕ್ಷಿಣ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹಿಂದೂ ಮತ್ತು ಮುಸಲ್ಮಾನ ಸೌಹಾರ್ದತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಫೆ.22 ರಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ವಹಿಸಲಿದ್ದು, ಅಲ್ ಹಾಜ್ ಅಸ್ಸಯ್ಯದ್ ಹಾಶಿಂ ಬಾಖವಿ ತಂಙಳ್ ಕಕೊರಿಂಗಿಲ ದುಃವಾ ನೆರವೇರಿಸುವರು. ಮಸೀದಿ ಖತೀಬರಾದ ಅಲ್‍ಹಾಜ್ ಬಿ.ಎಚ್.ಅಯ್ಯೂಬ್ ವಹಬಿ ಉದ್ಘಾಟಿಸುವರು. ಹಾಫಿಳ್ ಮಶ್ಹೂದ್ ಸಖಾಫಿ ಗಡಲ್ಲೂರು ಮುಖ್ಯ ಪ್ರಭಾಷಣ ಮಾಡುವರು. ಫೆ.23 ರಂದು ಅಬೂಬಕ್ಕರ್ ಸಿದ್ದೀಕ್ ಅಝ್ ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡುವರು. ಫೆ.24 ರಂದು ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡುವರು. ಫೆ.25 ರಂದು ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ, ಮಲಪ್ಪುರಂ, ಫೆ.26 ರಂದು ಅನ್ವರ್ ಮುಹ್ಯದ್ದೀನ್ ಹುದವಿ ಆಲಪುಝ, ಫೆ.27 ರಂದು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡುವರು. ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್ ದುಃವಾ ಆಶೀರ್ವಚನ ನೀಡುವರು ಎಂದು ಅವರು ತಿಳಿಸಿದರು.
ಫೆ.28 ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಡೆಯುವ ಸೌಹಾರ್ದ ಸಂಗಮದ ಅಧ್ಯಕ್ಷತೆಯನ್ನು ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ವಹಿಸಲಿದ್ದು, ಅಲ್ ಹಾಜ್ ಅಸ್ಸಯ್ಯದ್ ಹಾಶೀಂ ಬಾಅಖವಿ ತಂಙಳ್ ಉದ್ಘಾಟಿಸುವರು. ರಾಜ್ಯ ತರಬೇತುದಾರ ಇಕ್ಬಾಲ್ ಬಾಳಲಿ ದಿಕ್ಸೂಚಿ ಭಾಷಣ ಮಾಡುವರು. ರಾತ್ರಿ 8ಕ್ಕೆ ನಡೆಯುವ ಉರೂಸ್ ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಹಾಜ್ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ವಹಿಸಲಿದ್ದು, ಅಲ್ ಹಾಜ್ ಬಿ.ಹೆಚ್.ಅಯ್ಯೂಬ್ ವಹಬಿ ಉದ್ಘಾಟಿಸುವರು. ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ಮಾಡುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿಯ ಮಹಮ್ಮದ್ ಕುಂಞಿ ಕೊರಿಂಗಿಲ, ಶಾಫಿ ಕೇಕಣಾಜೆ, ಮೂಸೆ ಕುಂಞಿ ಬೆಟ್ಟಂಪಾಡಿ, ಅಬ್ದುಲ್ ಅಜೀಝ್ ಟಿ.ಎಂ. ಉಪಸ್ಥಿತರಿದ್ದರು.