ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ತರವಾಡು ಮನೆಯ 9ನೇ ವರ್ಷದ ವರ್ಧಂತಿ ಪ್ರಯುಕ್ತ ಶ್ರೀ ನಾಗದೇವರ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ, ನೇಮೋತ್ಸವ ಜ. 28ರಂದು ನಡೆಯಿತು.
ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಮುಡಿಪು ಪೂಜೆ, ನಾಗದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ಮಹಾಪೂಜೆ ಹಾಗೂ ಧರ್ಮದೈವ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ ಹಾಗೂ ದೈವಗಳಿಗೆ ತಂಬಿಲ ಪ್ರಸನ್ನ ಪೂಜೆ ನಡೆಯಿತು.
ಸಂಜೆ ದೈವಗಳ ಭಂಡಾರ ತೆಗೆದು, ಸತ್ಯ ನಾರಾಯಣ ಪೂಜೆ ನೆರವೇರಿತು. ನಂತರ ಸತ್ಯದೇವತೆ, ಕಲ್ಲುರ್ಟಿ, ಪಂಜುರ್ಲಿ, ಧರ್ಮದೈವ ರುದ್ರಚಾಮುಂಡಿ ಹಾಗೂ ರಾಹುಗುಳಿಗ ದೈವಗಳಿಗೆ ನೇಮೋತ್ಸವ ಜರಗಿತು.
ಕಾರಿಂಜ ಬಾಲಕೃಷ್ಣ ಆಚಾರ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ತರವಾಡು ಮನೆಯ ಶೇಷಪ್ಪ ಗೌಡ, ಮೀನಾಕ್ಷಿ ಶೇಷಪ್ಪ ಗೌಡ, ಗಿರಿಜಾ, ಪುಷ್ಪಕರ, ಭರತ್ ಹಾಗೂ ಪ್ರಮುಖರಾದ ಹೇಮನಾಥ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ದಿವ್ಯನಾಥ ಶೆಟ್ಟಿ, ಮಳಿ ರಾಮಚಂದ್ರ ಭಟ್, ಕೊಚ್ಚಿ ಕೃಷ್ಣಪ್ರಸಾದ, ಕೊಚ್ಚಿ ಶಿವಪ್ರಸಾದ, ಶಶಿಕಲಾ ಚೌಟ, ಸುರೇಖಾ ಶೆಟ್ಟಿ, ಲತಾ ಶೆಟ್ಟಿ, ಅಮ್ಮು ರೈ ಅಂಕೊತ್ತಿಮಾರು, ಮಹೇಶ್ ರೈ ಅಂಕೊತ್ತಿಮಾರು, ಸುಬ್ರಾಯ ಗೌಡ ಬದಿಯಡ್ಕ, ಶಿವರಾಮ ಗೌಡ ಬರಡಿಮಜಲು, ಸತ್ಯಾನಂದ ಗೌಡ ಬರಡಿಮಜಲು, ಪ್ರಕಾಶ್ ಕುದ್ಕುಳಿ, ಕೆ.ಎಸ್. ವೆಂಕಟರಮಣ ಗೌಡ ಕಟ್ಟಪುಣಿ, ವಿಠಲ ಗೌಡ ಕಟ್ಟಪುಣಿ, ಸುಧೀರ್ ಕಟ್ಟಪುಣಿ ಕೆ.ಎಸ್., ಹುಕ್ರಪ್ಪ ಗೌಡ ನಡುಮನೆ, ಕುಶಾಲಪ್ಪ ಗೌಡ ಬದಿಯಡ್ಕ, ನಾರಾಯಣ ಗೌಡ ಅಮ್ಚಿನಡ್ಕ, ದಿನೇಶ್ ಗೌಡ ಅಮ್ಚಿನಡ್ಕ, ನಯನ ಗೌಡ ಕಂಟ್ರಮಜಲು, ಕೊರಗಪ್ಪ ಗೌಡ ಬಿಡಾರ, ಶ್ರೀಧರ ಕರ್ತಡ್ಕ, ನಾಗರಾಜ ನಡುಮನೆ, ಜನಾರ್ಧನ ಗೌಡ ದೊಡ್ಡಮನೆ, ಸಂದೇಶ ಗೌಡ ದೊಡ್ಡಮನೆ, ಇಂದುಶೇಖರ ಗೌಡ ಕಂಟ್ರಮಜಲು, ರಜನೀಶ ಬೇರಿಕೆ, ಅಜಿತ್ ಬಿಡಾರ ಕಂಟ್ರಮಜಲು, ಶಶಿ ಸುಬ್ರಹ್ಮಣ್ಯ, ಯತೀಂದ್ರ, ಯತೀಶ, ದೇವಯ್ಯ ಗೌಡ ದೇವಸ್ಯ, ಗಣೇಶ್ ಕಟ್ಟಪುಣಿ, ಹರಿಪ್ರಸಾದ್ ಕುದ್ಕುಳಿ, ರಾಜೇಶ್ ಪಾಲ್ತಾಡು, ಅಶೋಕ್ ಪಕ್ಕಳ, ಆಶೀಷ್ ಕುದ್ಕುಳಿ, ಗಂಗಾಧರ ಗೌಡ ಚಾಕೋಟೆ, ವಸಂತ ಗೌಡ ಕಟ್ಟಪುಣಿ ಆನಡ್ಕ, ಪದ್ಮಯ್ಯ ಗೌಡ ಬಿಡಾರ ಕಂಟ್ರಮಜಲು ಮೊದಲಾದವರು ಉಪಸ್ಥಿತರಿದ್ದರು.