“ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ” ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಗ್ರಾಮೀಣ ಪ್ರದೇಶದ ಆನಡ್ಕ ಸರಕಾರಿ ಶಾಲೆ

ಪುತ್ತೂರು: ಈ ಸರಕಾರಿ ಶಾಲೆಯಲ್ಲಿ ಏನಿದೆ,, ಏನಿಲ್ಲ. ಎಲ್ಲವೂ ಇದೆ. ಈ ಶಾಲೆಯ ವಿಶೇಷತೆಯೆಂದರೆ ಬೃಹತ್ ಕೃಷಿ ಭಂಡಾರವನ್ನೇ ಈ ಶಾಲೆ ಹೊಂದಿರುವುದು.

ಇದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಶಾಲೆಯ ವಿಶೇಷತೆ. “ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ” ಎಂಬ ಧ್ಯೇಯ ವಾಕ್ಯದೊಂದಿಗೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಈ ಶಾಲೆಯ ಕೃಷಿ ಕಾಯಕವನ್ನೊಮ್ಮೆ ನೋಡಿದರೆ ಎಂತವರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ.

ಗ್ರಾಮೀಣ ಪ್ರದೇಶಲ್ಲಿ ತನ್ನ ಧ್ಯೇಯ ವಾಕ್ಯಕ್ಕೆ ತಕ್ಕಂತೆ ಹಚ್ಚ ಹರಿಸಿರಿನಿಂದ ಕೂಡಿದ ಪ್ರಕೃತಿದತ್ತ ವಾತಾವರಣದಲ್ಲಿ ಈ ಶಾಲೆಯಲ್ಲಿ ಅಕ್ಷರ ಕಲಿಕೆ ಜತೆ ಕೃಷಿ ಕಲಿಕೆಯೂ ಜತೆ ಜತೆಯಾಗಿ ಸಾಗುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಔಷಧಿ ವನದೊಂದಿಗೆ ಸುಂದರವಾದ ತಕ್ಷಶಿಲಾ ಕುಟೀರವಿದ್ದು ಇಲ್ಲಿ ಪಠ್ಯತೇರ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ.



































 
 

ಸುಮಾರು 2.8 ಎಕ್ರೆ ವಿಸ್ತೀರ್ಣ ಹೊಂದಿರುವ ಶಾಲೆ ಬಹುತೇಕ ಜಾಗವನ್ನು ಕೃಷಿ ಚಟುವಟಿಕೆಗೆಂದೇ ಮೀಸಲಿರಿಸಿದೆ. ವಿಶೇಷತೆಯೆಂದರೆ ಸುಮಾರು 100 ಕ್ಕೂ ಅಧಿಕ ಅಡಕೆ ಮರಗಳನ್ನು ಹೊಂದಿದ್ದು, ಬಹುತೇಕ ಅಡಕೆ ಮರದಲ್ಲಿ ಫಸಲು ನಳನಳಿಸುತ್ತಿವೆ. ಜತೆಗೆ 40 ಕ್ಕೂ ಅಧಿಕ ತೆಂಗಿನ ಮರಗಳನ್ನೂ ಹೊಂದಿದೆ. ಜತೆಗೆ ಗೇರು ಗಿಡಗಳನ್ನು ಹೊಂದಿದ್ದು, ವರ್ಷಕ್ಕೆ ಐದೂ ಸಾವಿರಕ್ಕೂ ಅಧಿಕ ಆದಾಯ ಪ್ರಸ್ತುತ ಬರುತ್ತಿದೆ. ಅಡಕೆಯಿಂದಲೂ ಆದಾಯ ಬರುತ್ತಿದ್ದು, ಅದನ್ನು ಗೊಬ್ಬರ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ.

ಉಳಿದಂತೆ ಶಾಲಾ ತೋಟದಲ್ಲಿ ಹಣ್ಣಿನ ಮರಗಿಡಗಳಾದ ನೆಲ್ಲಿ,, ಹಲಸು, ಬಾಳೆ, ನೇರಳೆ, ಬಾದಾಮಿ, ಚಿಕ್ಕು, ಚೆರ್ರಿ, ಲಕ್ಷ್ಮಣ ಫಲ ಮುಂತಾದ ಹಣ್ಣಿನ ಗಿಡಮರಗಳು ನಳನಳಿಸುತ್ತಿವೆ. ಶಾಲಾ ಅಕ್ಷರದಾಸೋಹಕ್ಕೆ ಬೇಕಾದ ತರಕಾರಿ ಗಿಡ ಬಳ್ಳಿಗಳಾದ ಬಸಳೆ, ಅಲಸಂಡೆ, ಬದನೆ, ಕೆಸುಗಡ್ಡೆ, ತೊಂಡೆ, ಹಾಗಲಕಾಯಿ, ಹೀಗೆ ಹತ್ತು ಹಲವಾರು ವೆರೈಟಿ ವೆರೈಟಿ ತರಕಾರಿಗಳನ್ನು ಪಡೆಯಲಾಗುತ್ತಿದೆ. ಒಟ್ಟಾರೆಯಾಗಿ ಶಾಲಾ ಸುತ್ತಮುತ್ತಲ ಪರಿಸರ ಹಣ್ಣಿನ ಗಿಡಮರ, ತರಕಾರಿ ಗಿಡಗಳಿಂದ ಆವೃತವಾಗಿದೆ. ಕಾಲ ಕಾಲಕ್ಕೆ ಪ್ಲಾಂಟೇಷನ್ ಮಾಡಲಾಗುತ್ತದೆ.

ವರ್ಷಕ್ಕೆ ಎರಡು ಬಾರಿ ಶ್ರಮದಾನ ಮಾಡಲಾಗುತ್ತಿದೆ. ಅದಲ್ಲದೆ ತೋಟಗಳಿಗೆ ಸ್ಪ್ರಿಂಕ್ಲರ್ ಅಳವಡಿಸಲಾಗಿದ್ದು, ಮಕ್ಕಳು ಪ್ರತೀ ದಿನ ಬೆಳಿಗ್ಗೆ ನೀರು ಉಣಿಸುವ ಕೆಲಸ ಮಾಡುತ್ತಾರೆ. ರಜಾ ಸಮಯಗಳಲ್ಲಿ ಎಸ್‍ಡಿಎಂಸಿ ಹಾಗೂ ಪೋಷಕರು ಈ ಕೆಲಸ ಮಾಡುತ್ತಾರೆ.. ಜತೆಗೆ ಔಷಧೀಯ ಗಿಡಗಳನ್ನು ನೆಟ್ಟು ಅದರ ವೈಜ್ಞಾನಿಕ ಹೆಸರುಗಳನ್ನು ಗೊತ್ತಾಗುವ ಹಾಗೆ ತಿಳಿಸಿಕೊಡುತ್ತಾರೆ.

ಕೃಷಿ ಪ್ರಶಸ್ತಿ : ಕಳೆದ ಬಾರಿ ಕೋಳ್ನಾಡುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಾಥಮಿಕ ವಿಭಾಗದ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಯನ್ನೂ ನಮ್ಮ ಶಾಲೆ ಪಡೆದುಕೊಂಡಿದೆ.

ಆನಡ್ಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿದ್ದು ಸಂತೋಷ ಆಗ್ತಾ ಇದೆ. ಯಾಕೆಂದರೆ ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಹಾಗೂ ಪೋಷಕರ ಸಹಕಾರದೊಂದಿಗೆ ಪಠ್ಯೇತರ ಚಟುವಟಿಕೆ ಹೊರತುಪಪಡಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಶಾಲಾ ದಾಖಲಾತಿಯಲ್ಲಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಇಲ್ಲಿ  ಹೆಚ್ಚಾಗಿ ಹಣ್ಣಿನ ಮರಗಿಡಗಳು ಇರುವುದರಿಂದ ಫಸಲು ಬಿಡುವ ಸಂದರ್ಭ ಹಣ್ಣುಗಳನ್ನು ಕೀಳಿ ಶಾಲಾ ಮಕ್ಕಳು ಹಂಚಿ ತಿನ್ನತ್ತಾರೆ. ಯಾಕೆಂದರೆ ಮಕ್ಕಳು ಪ್ರೀತಿಯಿಂದ ಬೆಳೆಸಿದ್ದು. ಕೃಷಿಯನ್ನು ಮತ್ತಷ್ಟು ವಿಸ್ತರಿಸುವ ಇರಾದೆಯಿದ್ದು, ಗಂಗಾ ಕಲ್ಯಾಣ ಯೋಜನೆಯಿಂದ ಕೊಳವೆ ಬಾವಿ ಪಡೆಯಲು ಮನವಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಎಸ್‍ಡಿಎಂಸಿ ಹಾಗೂ ಪೋಷಕರ ಸಹಕಾರದೊಂದಿಗೆ ಶಾಲೆ ಉತ್ತಮ ಕೆಲಸಗಳನ್ನು ಮಾಡುವ ಜತೆಗೆ ಅಭಿವೃದ್ಧಿಯನ್ನೂ ಹೊಂದುತ್ತಿದೆ.

  • ಶುಭಲತಾ ಹಾರಾಡಿ, ಮುಖ್ಯ ಶಿಕ್ಷಕರು, ಆನಡ್ಕ ಹಿ. ಪ್ರಾ. ಶಾಲೆ

ಶಾಲೆಯಲ್ಲಿ ಉತ್ಸಾಹದಿಂದ ನಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಬೆಳೆಸಲಾಗಿದ್ದು, ಫಲ ಬಡುವ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಹಂಚಲಾಗುತ್ತದೆ. ಬಾಳೆಹಣ್ಣು ಪ್ರತೀ ದಿನ ಸಿಗುತ್ತದೆ. ಬಿಸಿಯೂಟಕ್ಕೆ ಬೇಕಾದಷ್ಟು ತರಕಾರಿ ಇಲ್ಲೇ ಸಿಗುತ್ತದೆ.

  • ಪ್ರೀತಿ, ಏಳನೇ ತರಗತಿ ವಿದ್ಯಾರ್ಥಿನಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top