ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯಿಂದಾಗಿ ಹೃದಯಾಘಾತ ಸಂಭವಿಸಿರುವುದಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಭೆ ನಡೆಸಿ ಮಾತನಾಡಿದ ಅವರು, ಕೊರೋನಾದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತಗಳಂತಹ ಅಪಾಯ ಹೆಚ್ಚಾಗಿದೆ. ಆದರೆ ಕೊರೋನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕ್ ಆಗುವ ಸಂಭವ ಹೆಚ್ಚು. ಮೂರು ವರ್ಷಗಳ ನಂತರ ಅದರ ಸಾಧ್ಯತೆ ಕಡಿಮೆ. ಹೃದಯಾಘಾತ ಪ್ರಕರಣಗಳಿಗೆ ಕೊರೋನಾ ಲಸಿಕೆ ಕಾರಣ ಅಲ್ಲ ಎಂದು ಅವರು ಹೇಳಿದ್ದಾರೆ.
ಕೊರೋನಾ ಲಸಿಕೆಯಿಂದ ಜನರಿಗೆ ಅನುಕೂಲ ಆಗಿದೆ. ಆದರೆ MRNA ವ್ಯಾಕ್ಸಿನ್ ಬಗ್ಗೆ ಅನುಮಾನ ಇದ್ದು, ಅದನ್ನು ಭಾರತದಲ್ಲಿ ಯಾರೂ ಪಡೆದಿಲ್ಲ. ಹೃದಯಾಘಾತವನ್ನು ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗೆಯೇ ಹೃದಯಾಘಾತದಿಂದ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಹೃದಯಾಘಾತಕ್ಕೆ ಸಂಬಂಧಿಸಿದ ಪ್ರತ್ಯೇಕ ಪಠ್ಯ ಇಡಲಾಗುವುದು. ಮುಂದಿನ ವರ್ಷದಿಂದಲೇ ಶಿಕ್ಷಣ ಇಲಾಖೆ ಇದನ್ನು ಜಾರಿ ಮಾಡುತ್ತದೆ ಎಂದು ಹೇಳಿದ್ದಾರೆ.


























