ನವದೆಹಲಿ : ಮದುವೆಗೆ ಒಪ್ಪದ ಹಿನ್ನಲೆ ಅನ್ಯಕೋಮಿ ವ್ಯಕ್ತಿಯೋರ್ವ ಬುರ್ಖಾ ಧರಿಸಿಕೊಂಡು ಮನೆಗೆ ನುಗ್ಗಿ ಯುವತಿಯನ್ನು 5ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ.
ನೇಹಾ ಮಹಡಿಯಿಂದ ಬಿದ್ದು ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಕಳೆದ ಮೂರು ವರ್ಷದ ಹಿಂದೆ ಉತ್ತರ ಪ್ರದೇಶ ಮೂಲದ ತೌಫಿಕ್ ಎಂಬಾತನ ಪರಿಚಯವಾಗಿತ್ತು. ಅಲ್ಲದೇ ಆರೋಪಿ ತೌಫಿಕ್ ದೆಹಲಿಯ ಮಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ನೇಹಾ ಹಾಗೂ ತೌಫಿಕ್ ಆಗಾಗ ಭೇಟಿಯಾಗುತ್ತಿದ್ದರು, ಅಲ್ಲದೇ ತೌಫಿಕ್ ನನ್ನು ಅಣ್ಣ ಎಂದು ಕರೆಯುತ್ತಿದ್ದಳು ಅಷ್ಟೇ ಅಲ್ಲ ರಕ್ಷಾ ಬಂಧನಕ್ಕೆ ರಾಖಿ ಕೂಡ ಕಟ್ಟಿದ್ದಳು. ಆದರೆ ಕೆಲ ದಿನಗಳಿಂದ ಆರೋಪಿಯು ನೇಹಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ನೇಹಾ, ನಿನ್ನನ್ನು ಅಣ್ಣ ಎಂದು ಭಾವಿಸಿದ್ದೇನೆ, ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಹೇಳಿ ಹೋಗಿದ್ದಳು. ಇದರಿಂದ ಸಿಟ್ಟಾದ ತೌಫಿಕ್ ಮದುವೆಯಾಗಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಮೊದಲೇ ಹಿಂದೂ ಕಾರ್ಯಕರ್ತೆಯಾಗಿದ್ದ ನೇಹಾ ಇಂತಹ ಬೆದರಿಕೆಗೆಲ್ಲ ತಲೆ ಕೊಡಲು ಹೋಗಲಿಲ್ಲ. ಬೆದರಿಕೆಗೂ ಜಗ್ಗದಿದ್ದಾಗ ಬುರ್ಖಾ ಧರಿಸಿಕೊಂಡು ನೇಹಾಳ ಮನೆಗೆ ನುಗ್ಗಿದ್ದಾನೆ. ಈ ವೇಳೆ ಆಕೆಯ ಆರೋಪಿಯನ್ನು ತಡೆಯಲು ಮುಂದಾಗಿದ್ದಾರೆ. ಅವರನ್ನು ಪಕ್ಕಕ್ಕೆ ನೂಕಿ ನೇರವಾಗಿ ಟೆರೆಸ್ ಗೆ ಹೋಗಿದ್ದಾನೆ. ಅಲ್ಲಿ ನೇಹಾ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದವಾಗಿದೆ. ಇದರಿಂದ ಕೆರಳಿದ ತೌಫಿಕ್, ಈಕೆ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದು ಆಕೆಯನ್ನು 5 ನೇ ಮಹಡಿಯಿಂದ ಕೆಳಕ್ಕೆ ನೂಕಿ ಪರಾರಿಯಾಗಿದ್ದಾನೆ.
ಇತ್ತ ಗಂಭೀರ ಗಾಯಗೊಂಡಿದ್ದ ಮಗಳನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೇಹಾ ಸಾವನ್ನಪ್ಪಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆರೋಪಿಯನ್ನು ಯುಪಿಯ ರಾಂಪುರ ಜಿಲ್ಲೆಯ ತಾಂಡಾದಲ್ಲಿ ಬಂಧಿಸಿದ್ದಾರೆ.
























