ಪುತ್ತೂರು: ಸಂತೆಯ ಹಿರಿಯ ತರಕಾರಿ ವ್ಯಾಪಾರಿ ಪ್ರಗತಿಪರ ಕೃಷಿಕ, ಕುಲಾಲ ಸಮಾಜ ಸೇವಾ ಸಂಘದ ಹಿರಿಯ ಕಾರ್ಯಕರ್ತ ವೀರಮಂಗಲ ನಿವಾಸಿ ಶೀನಪ್ಪ ಮೂಲ್ಯ (89) ರವರು ಮೇ.4ರಂದು ನಿಧನರಾದರು.
ಶೀನಪ್ಪ ಮೂಲ್ಯ ಅವರು ಕುಲಾಲ ಸಮಾಜದ ಹಿರಿಯ ಚೇತನ. ಪುತ್ತೂರು ಕುಲಾಲ ಸಂಘದ ಹಿರಿಯ ಕಾರ್ಯಕರ್ತ, ಸಮಾಜದ ಅಭಿಮಾನಿ, ಕೊಡುಗೈ ದಾನಿ, ಜನ ಸಂಘದ ಹಿರಿಯ ನಾಯಕ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿದ್ದರು. ನರಿಮೊಗರು ಗ್ರಾ.ಪಂ ಮಾಜಿ ಸದಸ್ಯರಾಗಿದ್ದರು.
ಮೃತರು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷ ಮತ್ತು ಶ್ರೀಮಾತ ಪೈನಾನ್ಸ್‌ನ ಮಾಲಕ ದಾಮೋದರ್ ಮೂಲ್ಯ ಸಹಿತ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.