ಪುತ್ತೂರು : ಮುಂಡೂರು ಶಾಲಾ ಬಳಿ ಅತೀ ಹೆಚ್ಚು ಅಪಘಾತ ವಾಗುತ್ತಿರುವುದರಿಂದ ಶಾಲಾ ಎಸ್ ಡಿ ಎಂ ಅಧ್ಯಕ್ಷ ರಮೇಶ್ ಪಜಿಮನ್ನು ಇವರು ಮುಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಇವರಿಗೆ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ ಹಾಕಲು ಮನವಿಯನ್ನು ನೀಡಿದ್ದರು.
ಈ ಬಗ್ಗೆ ಪ್ರವೀಣ್ ಆಚಾರ್ಯ ನರಿಮೊಗರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಮನವಿ ಮಾಡಲಾಯಿತು. ಶಾಸಕರ ಸೂಚನೆಯಂತೆ ವಾಹನ ಸವಾರರ ಮತ್ತು ಶಾಲಾ ಮಕ್ಕಳ ಹಿತ ದೃಷ್ಟಿ ಇಂದ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ ನ್ನು ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆ. 1ರಂದು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಇವರ ಸಹಕಾರದೊಂದಿಗೆ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ ಹಾಕಿಸುವ ಕೆಲಸವನ್ನು ಮಾಡಿದರು. ಬಳಿಕ ಈ ಯೋಜನೆಗೆ ಸಹಕರಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು ಮತ್ತು ರಝಾಕ್ ಮುಲರ್, ಕಾರ್ಯದರ್ಶಿ ಅಶ್ರಫ್ ಮುಲರ್ ಇವರ ಕಾರ್ಯಕ್ಕೆ ಸಹಕರಿಸಿದರು ಪ್ರವೀಣ್ ಆಚಾರ್ಯರ ಸಾಮಾಜಿಕ ಕಾರ್ಯಕ್ಕೆ ಮುಂಡೂರು ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.