ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ | ಭಾಷೆಯ ಬಾಂಧವ್ಯ ಬೆಳೆಯಲಿ : ಡಾ. ಜಿ. ಎನ್. ಭಟ್

ಪುತ್ತೂರು: ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ತಾಂತ್ರಿಕ ಯುಗದಲ್ಲಿ ಭಾಷೆಯ ಕುರಿತಾಗಿ ಅಸ್ಥಿರತೆ ಬಂದು ಮಕ್ಕಳ ಮನಸ್ಥಿತಿ ಹದಗೆಟ್ಟಿದೆ. ಇದರಿಂದ ಭಾಷೆ ಮೂಲೆ ಗುಂಪಾಗುವ ಸಾಧ್ಯತೆ ಇದೆ. ನಮ್ಮ ಭಾಷೆಯ ಮೇಲೆ ಅಭಿಮಾನದ ಜೊತೆಗೆ  ಭಾಷೆಯ ಬಾಂಧವ್ಯವೂ ಕೂಡಾ ಬೆಳೆಯಲಿ ಎಂದು ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್‍ ಡಾ. ಜಿ. ಎನ್. ಭಟ್ ಹೇಳಿದರು.

ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಐಕ್ಯೂಎಸಿ ಘಟಕ ಮತ್ತು  ಭಾಷಾ ವಿಭಾಗದ ಜಂಟಿ ಆಶ್ರಯದಲ್ಲಿ ಭಾಷಾ ಶಿಕ್ಷಣದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು ಎಂಬ ವಿಷಯದ ಕುರಿತು ಆಯೋಜಿಸಿದ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತಾನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣ ಭಟ್, ಶಿಕ್ಷಣವನ್ನು ಸಮಗ್ರವಾಗಿ ನೋಡುವಾಗ ಭಾಷಾ ಶಿಕ್ಷಣ ಮತ್ತು ಸಮಾಜ ಶಿಕ್ಷಣ ಇವೆರಡನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಭಾಷೆಯನ್ನು ಬೆಳೆಸಿ ಉಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆ ಮತ್ತು ನಮ್ಮೆಲ್ಲರ ಮೇಲಿದೆ ಎಂದರು.







































 
 

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ ಶ್ರೀಪತಿ ಕಲ್ಲೂರಾಯ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಬಳಿಕ ಭಾಷಾ ಶಿಕ್ಷಣದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು ವಿಷಯದ ಕುರಿತು ಸಮಗ್ರ ಗೋಷ್ಠಿ ನಡೆಯಿತು. ಈ ಗೋಷ್ಠಿಯನ್ನು ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್, ಶಿರಸಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ. ಎನ್ ಭಟ್, ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಹೆಚ್ ಮಾಧವ ಭಟ್, ಕಾಸರಗೋಡಿನ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕನ್ನಡ ವಿಭಾಗದ ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು ಮತ್ತು ಕಾಸರಗೋಡಿನ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಉಪನ್ಯಾಸಕ ಡಾ.ತಾರು ಎಸ್. ಪಾವರ್ ನಡೆಸಿಕೊಟ್ಟರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್., ಸ್ನಾತಕೋತ್ತರ ವಿಭಾಗದ ಡೀನ್, ಕಾರ್ಯಕ್ರಮ ಸಂಯೋಜಕಿ ಡಾ.ವಿಜಯಸರಸ್ವತಿ ಬಿ, ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಿನ್ಸಿಪಾಲ್‍ ಪ್ರೊ.ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಕಲಾ ವಿಭಾಗದ ಡೀನ್ ಡಾ.ದುರ್ಗಾರತ್ನ ಸಿ. ವಂದಿಸಿದರು. ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ., ಮಧುಕುಮಾರ್ ನಿರ್ವಹಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ್ ಎಂ.ಕೆ. ಸಹಕರಿಸಿದರು.

ಸಮಾರೋಪ ಸಮಾರಂಭ : ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಟ್ಟಂಪಾಡಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ವರದರಾಜ ಚಂದ್ರಗಿರಿ ಮಾತನಾಡಿ, ಮೊಬೈಲ್ ನ ಅತಿಯಾದ ಬಳಕೆ ಹಾಗೂ ಆನ್ಲೈನ್ ಶಿಕ್ಷಣದ ಪ್ರಭಾವದಿಂದ ಭಾಷೆಯ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಇತ್ತೀಚೆಗೆ ಸಂಭಾಷಣೆಯೂ ಕೂಡಾ ಡಿಜಿಟಲ್ ಮುಖಾಂತರವೇ ನಡೆಯುತ್ತಿರುವುದು ಇನ್ನೊಂದು ಸೂಕ್ಷ್ಮವಾದ ವಿಚಾರ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top