ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ ರಕ್ಷಾ ಬಂಧನ

ಎಲ್ಲರಿಗೂ ರಕ್ಷಾ ಬಂಧನ ದ ಶುಭಾಶಯಗಳು. ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ವಾದ ರಕ್ಷಾಬಂಧನದಿಂದ ಒಬ್ಬರನ್ನು ಒಬ್ಬರು ಪರಸ್ಪರ ರಕ್ಷಣೆ ಮಾಡುವ ಮನೋಭಾವ ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ.

ರಕ್ಷಾ ಬಂಧನದ ಹಬ್ಬವು ಮಹಾಭಾರತದ ಕಾಲದ ಹಿಂದಿನದು. ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಆಕಸ್ಮಿಕವಾಗಿ ತನ್ನ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಂಡಾಗ ದೌಪದಿ ತನ್ನ ಸೀರೆಯ ತುಂಡನ್ನು ಹರಿದು ಶ್ರೀಕೃಷ್ಣನ ಗಾಯದ ಸುತ್ತಲೂ ರಕ್ತ ಹರಿಯುವುದನ್ನು ತಡೆಯಲು ಕಟ್ಟಿರುತ್ತಾಳೆ. ಮತ್ತು ಆ ಬಟ್ಟೆಯನ್ನು ಪವಿತ್ರ ದಾರವೆಂದು ಪರಿಗಣಿಸಲಾಗುತ್ತದೆ. ಆ ದಿನದಿಂದ, ಶ್ರೀಕೃಷ್ಣನು ದೌಪದಿಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತದ ಎಷ್ಟೋ ಪ್ರಮುಖ ಹಬ್ಬಗಳಲ್ಲಿ ಈ ಹಬ್ಬವು ಕೂಡ ಒಂದಾಗಿದೆ. ಈ ಹಬ್ಬದಂದು ತಂಗಿಯಾದವಳು ತನ್ನ ಅಣ್ಣನಿಗೆ ರಾಖಿ ಕಟ್ಟುವುದರ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾಳೆ. ರಾಖಿ ಎಂದರೆ ಅದು ಕೇವಲ ದಾರವಲ್ಲ ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ. ರಕ್ಷಾಬಂಧನ ಎನ್ನುವ ಪದವು ರಕ್ಷಣೆ, ಬಲ, ಧೈರ್ಯ, ನಂಬಿಕೆ ಎಂಬ ಅರ್ಥವನ್ನು ತನ್ನೊಳಗೆ ತುಂಬಿಕೊಂಡಿದೆ. ಒಬ್ಬ ಅಣ್ಣನಾದವನು ತನ್ನ ತಂಗಿಗೆ ಯಾವಾಗಲೂ ಬೆನ್ನೆಲುಬಾಗಿ, ಕಾವಲುಗಾರನಾಗಿ, ಅವಳನ್ನು ರಕ್ಷಣೆ ಮಾಡುವವನಾಗಿರುತ್ತಾನೆ. ತಂಗಿಗೆ ಅಣ್ಣನು ವಿಶ್ವಾಸದ ಸಂಕೇತವಾಗಿರುತ್ತಾನೆ. ಈ ಸಂಬಂಧದ ಪ್ರೀತಿಯ ಸಂಕೇತವಾಗಿ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಒಡಹುಟ್ಟಿದ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಲ್ಲ ತನ್ನನ್ನು ಅಣ್ಣನಂತೆ ಕಾಳಜಿ ವಹಿಸುವ, ಧೈರ್ಯ ತುಂಬುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಈ ರಾಖಿ ಹಬ್ಬವನ್ನು ಆಚರಿಸುತ್ತಾರೆ. ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತ ಸುಂದರವಾಗಿ ಕಾಣುತ್ತಾನೋ ಅದೇ ರೀತಿ ಒಂದು ಹೆಣ್ಣಿನ ಜೀವನದಲ್ಲಿ ಅವಳು ತಪ್ಪು ಮಾಡಿದಾಗ ಅವಳನ್ನು ತಿದ್ದಲು, ದುಃಖದಲ್ಲಿದಾಗ ಕಣ್ಣೀರು ಓರೆಸಲು, ಭಯದಲ್ಲಿದ್ದಾಗ ಧೈರ್ಯ ತುಂಬಲು ಒಬ್ಬ ಅಣ್ಣನಿದ್ದರೆ ಅವಳ ಬದುಕು ಕೂಡ ಸುಂದರಮಯವಾಗುತ್ತದೆ. ಅಣ್ಣತಂಗಿ ಎನ್ನುವುದು ಕೇವಲ ಹೆಸರಿಗೆ ಮಾತ್ರವಲ್ಲ, ಆ ಎರಡು ಪದಗಳಲ್ಲಿ ಹೇಳಲಾಗದ ಅದೆಷ್ಟೋ ಭಾವನೆಗಳಿವೆ. ಬೆಲೆ ಕಟ್ಟಲಾಗದ ಅತ್ಯಮೂಲ್ಯವಾದ ಬಾಂಧವ್ಯ ಎಂದರು ತಪ್ಪಾಗಲಾರದು. ಬಾಳಿಗೊಂದು ಸಂತೋಷದ ಕಿರಣವನ್ನು ತುಂಬುವ ಈ ಸಂಬಂಧವು ಎಂದೆಂದಿಗೂ ಮರೆಯಲಾಗದ ಅನುಬಂಧ.































 
 

ಜಯಶ್ರೀ. ಸಂಪ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top