ಕಡಬ ಐಐಸಿಟಿ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ ಪ್ರಥಮ ವರ್ಷದಲ್ಲಿ 100% ಫಲಿತಾಂಶ

ಕಡಬ: ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅಧೀನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್  ಆಫ್ ಕ್ಯಾರಿಯರ್ ಟ್ರೈನಿಂಗ್ ನ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್  ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐ ಎಸ್ ಓ 9001: 2015 ಸಂಸ್ಥೆಯಿಂದ ಪ್ರಾಮಾಣಿಕರಿಸಿದ ಐಐಸಿಟಿ  ಶಿಕ್ಷಣ ಸಂಸ್ಥೆಯ ವತಿಯಿಂದ ಮೊಂಟೆಸ್ಸರಿ (ನರ್ಸರಿ ಟೀಚರ್ ಟ್ರೈನಿಂಗ್) ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 9 ವಿದ್ಯಾರ್ಥಿನಿಯರಲ್ಲಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ ಪ್ರಥಮ ವರ್ಷದಲ್ಲಿ 100% ಫಲಿತಾಂಶ ಲಭಿಸಿದೆ.

ಸಫ್ರೀನಾ ಎನ್. (94.75%), ವಾಣಿಶ್ರೀ (94.00%), ಸಂಧ್ಯಾ (93.06%), ಫಾತಿಮತ್ ಆಶ್ರೀಯಾ (91.94%), ಅನುಷಾ (90.44%) ವಿಶಿಷ್ಟ ಶ್ರೇಣಿ ಮತ್ತು ಮಾನ್ಯಶ್ರೀ (89.38%), ನಂದಿನಿ ಜಿ.ಎ. (88.25%), ಫಾತಿಮತ್ ಜಂಶೀರಾ (87.81%), ಕೃಷ್ಣವೇಣಿ (86.50%) ಪ್ರಥಮ ದರ್ಜೆಯನ್ನು ಪಡೆದಿರುತ್ತಾರೆ. ಜಾಬ್ ಓರಿಯೆಂಟೆಡ್ ತರಬೇತಿ ಇದಾಗಿದ್ದು, ತರಬೇತಿ ಪಡೆದ ಪ್ರತಿಯೊಬ್ಬರಿಗೂ  ಉದ್ಯೋಗವಕಾಶವನ್ನು ನೀಡುವ ಭರವಸೆಯೊಂದಿಗೆ ಅತಿ ಕಡಿಮೆ ಶುಲ್ಕದೊಂದಿಗೆ ತರಬೇತಿಯನ್ನು ನೀಡುವ ಸಂಸ್ಥೆ ಇದಾಗಿದೆ. 2024-25ನೇ ಸಾಲಿನ ಶೈಕ್ಷಣಿಕ ವರುಷದ ದಾಖಲಾತಿ ಆರಂಭಗೊಂಡಿದ್ದು. ಆಸಕ್ತರು ದೂರವಾಣಿ ಸಂಖ್ಯೆ 9448409912, 9743271502, 9148121463 ಸಂಪರ್ಕಿಸಬಹುದಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top