ದೇವಸ್ಥಾನದ ವಠಾರದಲ್ಲಿರುವ ಹೋರಿ ನಾಪತ್ತೆ | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುತ್ತಿದ್ದ ಹೋರಿಯೊಂದು ಕಾಣೆಯಾದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾಧು ಸ್ವಭಾವದ ಈ ಹೋರಿ ಎ.30ರಿಂದ ನಾಪತ್ತೆಯಾಗಿದೆ. ಸಣ್ಣ ಕರುವಾಗಿದ್ದ ಸಂದರ್ಭದಲ್ಲೇ ದೇವಸ್ಥಾನದ ಬಳಿ ಯಾರೋ ಬಿಟ್ಟು ಹೋಗಿದ್ದ ಬಳಿಕ ಅದು ದೇವಸ್ಥಾನದ ವಠಾರದಲ್ಲಿ ಭಕ್ತರು ನೀಡುತ್ತಿದ್ದ ಬಾಳೆ ಹಣ್ಣುಗಳನ್ನು ತಿಂದು ಅಲ್ಲೇ ಸುತ್ತಮುತ್ತ ತಿರುಗಾಡುತ್ತಿದ್ದು, ಈ ಹೋರಿ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು.

ಇತ್ತೀಚೆಗೆ ಶೃಂಗೇರಿ ಶ್ರೀಗಳು ಕೂಡಾ ಈ ಹೋರಿಗೆ ತನ್ನಲ್ಲಿದ್ದ ಎಲ್ಲಾ ಹಣ್ಣುಗಳನ್ನು ನೀಡುವ ಮೂಲಕ ಅವರ ಪ್ರೀತಿಗೆ ಪಾತ್ರವಾಗಿತ್ತು. ಇದೀಗ ಕಳೆದ ಮೂರು ನಾಲ್ಕು ದಿನಗಳಿಂದ ಹೋರಿ ನಾಪತ್ತೆಯಾಗಿರುವ ಕುರಿತು ದೇವಸ್ಥಾನಕ್ಕೆ ಬರುವ ಭಕ್ತರು ಅಡಿಕೊಳ್ಳುತ್ತಿದ್ದಾರೆ. ಯಾರಿಗಾದರೂ ಈ ಹೋರಿ ಕಾಣಸಿಕ್ಕರೆ 944 88 43 855 ನಂಬರಿಗೆ ಕರೆ ಮಾಡಿ ತಿಳಿಸಬೇಕೆಂದು ವಿನಂತಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top