ಅಂಬಿಕಾ ಮಹಾವಿದ್ಯಾಲಯದಲ್ಲಿ ಸಿಎ, ಐಬಿಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ | 9 ಮಂದಿ ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ

ಪುತ್ತೂರು: ಹತ್ತನೆಯ ತರಗತಿ ಮುಕ್ತಾಯವಾಗುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಸಿಎ ಆಗಬೇಕೆಂಬ ಯೋಚನೆ – ಯೋಜನೆಯೊಂದಿಗೆ ವಾಣಿಜ್ಯ ವಿಭಾಗಕ್ಕೆ ಅಡಿ ಇಡುವುದಿದೆ. ವಿದ್ಯಾರ್ಥಿಗಳ ಈ ಕನಸನ್ನು ನನಸು ಮಾಡುವುದಕ್ಕಾಗಿ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯ ಮಹತ್ವದ ಹೆಜ್ಜೆಯನ್ನಿಟ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಈ ನಡುವೆ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಕೋಚಿಂಗ್ ನಡೆಸುತ್ತಿರುವುದರಿಂದ ಹತ್ತನೆಯ ನಂತರ ಅನೇಕ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟು 9 ಮಂದಿ ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ, ಮೂವರು ವಿದ್ಯಾರ್ಥಿಗಳು ಗ್ರೂಪ್ 1 ಹಾಗೂ 2 ಪರೀಕ್ಷೆಗಳನ್ನು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಫೌಂಡೇಶನ್ ಹಾಗೂ ಗ್ರೂಪ್ 1 ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ. ಇದು ಅಂಬಿಕಾ ವಿದ್ಯಾಸಂಸ್ಥೆಗಳ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.

ವಿದ್ಯಾರ್ಥಿನಿಯರಾದ ಸ್ವರ್ಣಾ ಶೆಣೈ, ತೇಜಸ್ವಿನಿ ಸಿಎ ಹಾಗೂ ವಿದ್ಯಾರ್ಥಿ ಮನೀಶ್ ಬಿ.ಎಸ್ ಫೌಂಡೇಶನ್ ಹಾಗೂ ಗ್ರೂಪ್ 1 ಹಾಗೂ 2 ಪರೀಕ್ಷೆಗಳನ್ನು ತೇರ್ಗಡೆ ಹೊಂದಿ ಈಗ ಆರ್ಟಿಕಲ್‌ಶಿಪ್ ನಡೆಸುತ್ತಿದ್ದರೆ ಜಸ್ಮಿತಾ ಕಾಯರ್ಗ, ಶರಣ್ಯಾ ಎ. ರೈ  ಫೌಂಡೇಶನ್ ಹಾಗೂ ಗ್ರೂಪ್ 1 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಅನ್ಮಯ್ ಭಟ್, ವಿದ್ಯಾರ್ಥಿನಿಯರಾದ ರಂಜಿತಾ ಕೆ, ಸಿಂಚನಾ, ನಾಗರತ್ನಾ ಎ ಕಿಣಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ಹಂತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.





























 
 

ಐಬಿಪಿಎಸ್ ಕೋಚಿಂಗ್:

ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಬೇಕೆಂಬುದು ಅನೇಕ ಮಂದಿಯ ಗುರಿಯಾಗಿರುತ್ತದೆ. ಇಂದು ಹೆಚ್ಚಿನ ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯುವುದಕ್ಕೆ ಐಬಿಪಿಎಸ್ ಪರೀಕ್ಷೆ ತೇರ್ಗಡೆಯಾಗುವುದು ಅನಿವಾರ್ಯ. ಆದರೆ ಐಬಿಪಿಎಸ್ ಪರೀಕ್ಷೆ ಸಂಬಂಧಿ ತರಬೇತಿ ಕೊಡುವವರು ಮಾತ್ರ ವಿರಳ. ಈ ನೆಲೆಯಲ್ಲಿ ಅಂಬಿಕಾ ಮಹಾವಿದ್ಯಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಐಬಿಪಿಎಸ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಮೊದಲ ಬ್ಯಾಚ್ ವಿದ್ಯಾರ್ಥಿಗಳು ಪ್ರಸ್ತುತ ವರ್ಷ ಬ್ಯಾಂಕಿಂಗ್ ಪರೀಕ್ಷೆ ಎದುರಿಸಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top