ಮೇ 25 : ಎಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮ | ಮೇ 1 ಕಾರ್ಮಿಕ ದಿನದಂದು ಸಂಸ್ಥೆಯ ಸಿಬ್ಬಂದಿಗಳಿಗೆ ನಡೆಯಿತು ಕ್ರೀಡಾ ಸಂಭ್ರಮ

ಪುತ್ತೂರು: ಪುತ್ತೂರು: ಎಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಮೆ 1 ರಂದು ಸಂಸ್ಥೆಯ ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ ಮತ್ತು ಕಾರ್ಮಿಕ ದಿನಾಚರಣೆಯು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಕಡಬ ಉಪತಹಸೀಲ್ದಾರ್ ಗೋಪಾಲ್ ಮಾತನಾಡಿ, ಕಾಯಕದಿಂದಲೇ ಯಾರನ್ನೂ ಗುರುತಿಸಲು ಸಾಧ್ಯವಿಲ್ಲ. ಕಾಯಕದ ಮೇಲೆ ಪ್ರೀತಿಯಿದ್ದಾಗ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಸಜ್ಜನಿಕೆ, ಸರಳತೆ ಜೀವನದಲ್ಲಿ ಸ್ಥಾನಮಾನ ಸಿಗುತ್ತದೆ. ಇಂತಹ ಸ್ಥಾನಮಾನ ಎಸ್.ಆರ್.ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರಿಗೆ ಸಿಗಬೇಕು. ಅವರು ಶ್ರಮಿಕ ವರ್ಗಕ್ಕೆ ಜೀವನ ನೀಡಿದವರಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಮಾತನಾಡಿ, ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆ ಹುಟ್ಟಿನಿಂದ ಇವತ್ತಿನ ತನಕ ಹಲವು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದೆ. ಕೃಷಿಕರಿಗಾಗಿ ಹುಟ್ಟಿಕೊಂಡ ಸಂಸ್ಥಗೆ ಇವತ್ತು 25 ವರ್ಷ ತುಂಬಿದೆ. ಅದರ ರಜತ ಸಂಭ್ರಮದ ಸಮಾರೋಪ ಮೇ 25 ಕ್ಕೆ ಇದೇ ಕಲಾಯಿಗುತ್ತು ಸ್ಥಳದಲ್ಲಿ ನಡೆಯಲಿದೆ. ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರ ನಿರೀಕ್ಷೆಯಿದೆ ಎಂದು ಹೇಳಿ, ಎಲ್ಲರೂ ಪ್ರೀತಿಯಿಟ್ಟು ಕಾರ್ಯಕ್ರಮಕ್ಕೆ ಆಗಮಿಸಿವಂತೆ ವಿನಂತಿಸಿದರು.



































 
 

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್ ಮಾತನಾಡಿ, ಕಾರ್ಮಿಕರ ಸೌಲಭ್ಯ ಮತ್ತು ಕಾನೂನಿನ ಅರವಿನ ಕುರಿತು ಮಾಹಿತಿ ನೀಡಿದರು. ತೆರೆ ಮರೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಶ್ರಮವನ್ನರಿತು ಅವರನ್ನು ಕೆಶವ ಅಮೈ ಅವರು ಗೌರವಿಸಿರುವುದು ಶ್ಲಾಘನೀಯ ವಿಚಾರ ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆ ಮಾತನಾಡಿ ದೇಶದ ಯಂತ್ರ ನಡೆಯಲು ಕಾರ್ಮಿಕರು ಅಗತ್ಯ. ಆದರೆ ನಮಗೆ ಕೆಶವಣ್ಣನೇ ಸ್ಪೂರ್ತಿಯ ಚಿಲುಮೆ ಎಂದರು. ತಾನು ಅಪಘಾತಕ್ಕೊಳಗಾಗಿ ನಿಶಕ್ತಿಹೊಂದಿದ್ದ ವೇಳೆ ನನಗೆ ಸ್ಪೂರ್ತಿಯಾದ ಕೇಶವ ಅಮೈ ಅವರ ಸಲಹೆಯನ್ನು ಈ ಸಂದರ್ಭ ಮೆಲುಕು ಹಾಕಿದರು.

ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಸುನೀತ್ ರಾಜ್ ಶೆಟ್ಟಿ ಮಾತನಾಡಿ, ದೂರದ ಬಿಳಿನೆಲೆಯಲ್ಲಿ ಹುಟ್ಟಿ, ಪುತ್ತೂರಿನಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿ, ನಮ್ಮ ಗ್ರಾಮದಲ್ಲಿ ಕೇಶವ ಅಮೈ ಅವರು ವಾಸ್ತವ್ಯ ಹೊಂದಿರುವುದು ಸದಾಶಿವ ದೇವರು ಕೊಟ್ಟ ವರವಾಗಿದೆ. ಅವರು ದೇವಸ್ಥಾನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಕಡಬ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಮಾತನಾಡಿ, ದೇಶದ ಶಕ್ತಿ ಇನ್ನಷ್ಟು ವೃದ್ಧಿಸಬೇಕಾದರೆ ಇಂತಹ ಕಾರ್ಯಕ್ರಮ ಅಗತ್ಯ. ಶ್ರಮಿಕರನ್ನು ಗುರುತಿಸುವ ದೊಡ್ಡ ಕೆಲಸವನ್ನು ಕೇಶವಣ್ಣ ಮಾಡಿರುವುದು ಸಮಾಜಕ್ಕೆ ಮಾದರಿ ಎಂದರು.

ಆಲಂಕಾರು ಸಿ.ಎ. ಬ್ಯಾಂಕ್ ನ ಶಾಖಾ ವ್ಯವಸ್ಥಾಪಕ ಲೋಕನಾಥ್ ರೈ ರಾಮಕುಂಜ ಸಂದರ್ಭೊಚಿತ ಮಾತನಾಡಿದರು. ನೆವಿಟೋಮೆರಿಟನ್ ಬಂದರು ಮಂಗಳೂರು ಇಲ್ಲಿನ ಸುರೇಶ್ ನೆಟ್ಟಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ 33 ಮಂದಿ ಶ್ರಮಿಕ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಅತಿಥಿಗಳೊಂದಿಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಯದು ಶ್ರೀ ಗೌಡ ಆನೆಗುಂಡಿ, ಹಿರಿಯ ನೌಕರರಾದ ನವೀನ್, ನಾರಾಯಣ, ಸಾವಿತ್ರಿ, ಕೇಶವ ಅಮೈ ಅವರ ಅಣ್ಣ ಶ್ರೀನಿವಾಸ್, ಕೇಶವ ಅಮೈ ಅವರ ತಾಯಿ ರಾಮಕ್ಕ, ಪತ್ನಿ ಮಾಲತಿ, ಸಹೋದರಿಯರಾದ ಸತ್ಯವತಿ, ಶ್ರೀಲತಾ ಕಾರ್ಮಿಕರನ್ನು ಸನ್ಮಾನಿಸಿದರು. ಚೇತನ್ ಆನೆಗುಂಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದ ಸಂಯೋಜಕ ದಿನೇಶ್ ನೆಟ್ಟಣ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿಗಳಾದ ಮಮತಾ ಮತ್ತು ಭಾರತಿ ಪ್ರಾರ್ಥಿಸಿದರು. ರಕ್ಷಿತ್ ಆಚಾರ್ಯ ಸ್ವಾಗತಿಸಿದರು. ಕಾರ್ಮಿಕ ದಿನಾಚರಣೆಯ ಸಂಯೋಜಕ ಅಶೋಕ್ ವಂದಿಸಿದರು. ಮನೋಜ್ ಬಿ. ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿವರಾಮ ಏನೆಕಲ್ಲು ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ಕುಂತೂರು, ಪ್ರಫುಲ್ಲ ರಾಮಕುಂಜ ಕ್ರೀಡಾಕೂಟದ ತೀರ್ಪುಗಾರರಾಗಿ ಸಹಕರಿಸಿದರು.

ಬೆಳಿಗ್ಗೆ ಕ್ರೀಡಾಕೂಟವನ್ನು ಎಸ್.ಆರ್.ಕೆ. ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರ ತಾಯಿ ರಾಮಕ್ಕ ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಯಧುಶ್ರೀ ಗೌಡ ಆನೆಗುಂಡಿ ಕ್ರೀಡಾಕೂಟದ ಧ್ವಜಾರೋಹಣ ಮಾಡಿದರು. ಹಿರಿಯ ಕಾರ್ಮಿಕ ನಾರಾಯಣ ನಾಯ್ಕ ತೆಂಗಿನ ಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top