ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಎಳವೆಯಲ್ಲೇ ಅರಿವು ಮೂಡಿಸಿಕೊಂಡರೆ ಪ್ರತೀ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಕಾಣಲು ಸಾಧ್ಯ | ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆ ಶುಭಾರಂಭದಲ್ಲಿ ಶ್ರೀ ರಾಜಶೇಖರನಂದ ಸ್ವಾಮೀಜಿ

ಪುತ್ತೂರು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯ ಎರಡನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಶ್ರೀಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಯ ಬಗ್ಗೆ ಯುವ ಜನತೆಯಲ್ಲಿ ಅರಿವನ್ನು ಮೂಡಿಸುವುದು ತೀರಾ ಅನಿವಾರ್ಯವಾಗಿದ್ದು ಈ ಅರಿವನ್ನು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ ಪ್ರತೀ ಇಲಾಖೆಗಳಲ್ಲೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಣಬಹುದು’ ಎಂದು ಕಾರ್ಯಪ್ರವೃತವಾಗಿರುವ ವಿದ್ಯಾಮಾತಾ ಅಕಾಡೆಮಿ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ನುಡಿಯನ್ನಾಡಿ ಸಂಸ್ಥೆಗೆ ಶುಭಾಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ಇದರ ಕಾರ್ಯದರ್ಶಿಗಳಾದ ಗುರುದಾಸ್ ಶೆಣೈ ರವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಹಲವು ಅಧಿಕಾರಿಗಳನ್ನು ನೀಡಿರುತ್ತದೆ. ವಿದ್ಯಾಮಾತಾ ಅಕಾಡೆಮಿಯು ದಕ್ಷಿಣ ಕನ್ನಡ ಮಾತ್ರವಲ್ಲದೇ ಬೇರೆ ಜಿಲ್ಲೆಗೂ ಕಾಲಿಟ್ಟದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನೊರ್ವ ಅತಿಥಿಯಾದ ಉಜ್ವಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಶೆಟ್ಟಿರವರು ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆಯ ಕೌಶಲ್ಯ ಸಾಮರ್ಥ್ಯವೂ ಕೂಡ ಬಹಳ ಮುಖ್ಯ ಎಂಬುದನ್ನು ಈ ಸಂಸ್ಥೆ ಈಗಾಗಲೇ ಸಾಬೀತು ಪಡಿಸಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ

ಈ ವೇಳೆ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜ್ ಹಾಗೂ ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ ನಲ್ಲಿ ಒಟ್ಟು 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರೊ.ಮಿತ್ರ ಪ್ರಭಾ ಹೆಗ್ಡೆ ಮತ್ತು ಶೈಕ್ಷಣಿಕ ಹಾಗೂ ಕನ್ನಡ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಜ್ಯೋತಿ ಗುರುಪ್ರಸಾದ್ ರವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.































 
 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯಶ್ ರೈ ಯವರು ಸಂಸ್ಥೆಯ ಏಳಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

10.04.2024 ರಿಂದ VAO ಮತ್ತು PDO ನೇಮಕಾತಿಯ ಆನ್ಲೈನ್ ತರಬೇತಿಯು ಪ್ರಾರಂಭವಾಗಲಿದೆ ಎಂದು ಹೇಳಿದರು

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆಯ ಸಂಚಾಲಕರಾದ ರಮಿತ ಶೈಲೇಂದ್ರ ರಾವ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಅಭಿನಂದಿಸಿದರು. ನೂತನ ಶಾಖೆಯ ಶುಭಾರಂಭದ ಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರರು, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top