ಹೊಸ ವರುಷದ ಆದಿ ಯುಗಾದಿ

ಚೈತ್ರ ಮಾಸದ ಪ್ರಾರಂಭದ ದಿನ ಭಾರತೀಯರಿಗೆ ಹೊಸ ವರುಷ .ಪ್ರತೀ ಮನೆಯಲ್ಲಿ ಸಿಹಿ ಮತ್ತು ಕಹಿ ಬೇವಿನ ಮಿತ್ರಣದ ಜತೆಗೆ ಪ್ರಾರಂಭವಾಗುವ ಈ ದಿನ ಜೀವನದಲ್ಲಿ ಸಿಹಿ ಕಹಿಯು ಒಂದ ಸಮನಾಗಿ ನಮ್ಮ ಬಾಳಿನಲ್ಲಿ ಇರಲಿ ಎಂಬ ಆಶಾಭಾವನೆಯೊಟ್ಟಿಗೆ ಹೊಸ ವರ್ಷವನ್ನು ಪ್ರಾರಂಭಿಸಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಮೊದಲ ಹಬ್ಬವೇ ಯುಗಾದಿ.
ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಸೃಷ್ಟಿಯಾಗಿದೆ. ‘ಯುಗ’ ಎಂದರೆ ಹೊಸ ಕಾಲ ಎಂದೂ ‘ಆದಿ’ ಎಂದರೆ ಆರಂಭ ಅಂತ .ಹೊಸ ಕಾಲದ ಹೊಸ ಯುಗದ ಆರಂಭದ ಕಾಲವಾಗಿ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ.
ಯುಗಾದಿಯು ಜೀವನದಲ್ಲಿ ನೋವು ನಲಿವು, ಕಷ್ಟ ಸುಖಗಳು ಬರುವುದು ಸರ್ವೇ ಸಾಮಾನ್ಯ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುವ ದ್ಯೋತಕವಾಗಿದೆ.

ಹಾಗೆಯೇ ನಮ್ಮ ಸಂಪ್ರದಾಯ, ಆಚಾರ, ವಿಚಾರಗಳೆಲ್ಲವೂ ಭದ್ರಬುನಾದಿ ತಳಪಾಯದ ಮೇಲೆ ಅಂತಸ್ತು ಕಟ್ಟಿದ ಹಾಗೆ ಅವು ನಮ್ಮ ಹಿರಿಯರು ಮಾಡಿರುವ ಮೌಲ್ಯಯುತವಾದ ಸಾಧಕಗಳಾಗಿವೆ. ಅವರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ ಆಚಾರ ವಿಚಾರಗಳನ್ನು ನಾವೂ ಪಾಲಿಸುತ್ತಾ ನಮ್ಮ ಮುಂದಿನ ಪೀಳಿಗೆಯವುಗೂ ಉಳಿಸಿ ಕಲಿಸಿಕೊಡಬೇಕಾಗಿದೆ. ಏಕೆಂದರೆ ನಮ್ಮ ಯಾವುದೇ ಸಂಪ್ರದಾಯ ಆಚಾರ ವಿಚಾರಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿದಾಗ ಅವು ನಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವನ ನಿರ್ವಹಿಸುವ ದೃಷ್ಟಿಯಿಂದ ಉತ್ತಮವಾದವುಗಳಾಗಿವೆ. ಅದರಲ್ಲೂರ ಯುಗಾದಿ ಹಬ್ಬದಿಂದ ತಿಳಿದು ಬರುವ ಅಂಶಗಳೆಂದರೆ, ಮಾವು – ಬೇವುಗಳ ಸಮ್ಮಿಲನವು ನಮ್ಮ ಜೀವನದಲ್ಲಿ ಪರಿಸ್ಥಿತಿಗಳು ಏರುಪೇರಾದಾಗಲೂ ಒಂದೇ ರೀತಿಯಲ್ಲಿ ಸಮನಾಗಿ ಸರಿದೂಗಿಸಿಕೊಂಡು ಹೋಗಬೇಕೆನ್ನುವ ಜೀವನ ಸಂದೇಶವನ್ನು ತಿಳಿಸಿಕೊಡುತ್ತದೆ. ಹಾಗೆಯೇ ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವುದರಿಂದ ನಮಗೆ ಅಪಾರ ಪ್ರಯೋಜನಗಳಿವೆ. ಚಳಿಗಾಲದಲ್ಲಿ ಎಲೆಗಳನ್ನು ಉದುರಿಸಿ ಗಿಡ ಮರಗಳು ವಸಂತ ಋತುವಿನ ಚೈತ್ರ ಮಾಸದಲ್ಲಿ ಮತ್ತೆ ಮರುಜೀವ ಪಡೆಯುತ್ತದೆ.
ಈ ಹಬ್ಬವನ್ನು ನಮ್ಮ ಹಿಂದೂ ಧರ್ಮದವರು ಹೊಸ ವರ್ಷವೆಂದೂ ಕರೆಯುತ್ತೇವೆ,
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಇತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ತಮ್ಮ ಮಕ್ಕಳಿಗೂ ಮನವರಿಕೆ ಮಾಡಿ, ಅದು ಮುಂದಿನ ಪೀಳಿಗೆಯವರೆಗೆ ಮುಂದುವರಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಎಳ್ಳು ಬೆಲ್ಲ ತಿಂದು ಒಂದೊಳ್ಳೆ ಮಾತಾಡು ಎಂಬಂತೆ ಯುಗಾದಿಯು ಎಲ್ಲರ ಬಾಳಲ್ಲಿ ನಗುವನ್ನು ತರಲೆಂಬ ಆಶಯದೊಂದಿಗೆ ಈ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ

ಜಯಶ್ರೀ. ಸಂಪ ಪಂಜ
ತೃತೀಯ ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ,ಪುತ್ತೂರು





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top