ಪುತ್ತೂರು : ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಪದ್ದತಿಯನ್ನು ನಾವು ಪಾಲಿಸಬೇಕು. ಕಣ್ಣಿಗೆ ಕಾಣದ ಶಕ್ತಿಗಳು ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿಕೊಂಡು ಪರೋಪಕರಿಯಾಗಿ ನಿಸ್ವಾರ್ಥತೆಯಿಂದ ಬದುಕುವುದರ ಮೂಲಕ ಧರ್ಮವನ್ನು ಗಟ್ಟಿಗೊಳಿಸಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಳೀಲು ಕ್ಷೇತ್ರದಲ್ಲಿ 20 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷನಾಗುವ ಅವಕಾಶವನ್ನು ಸಂತೋಷ್ ಕುಮಾರ್ ರೈ ಅವರು ನೀಡಿದ್ದರು. ಅಂದಿನಿಂದ ಇಂದಿನವರೆಗೆ ಅವಲೋಕಿಸಿದರೆ ಶ್ರೀ ಕ್ಷೇತ್ರವು ಅದ್ಭುತವಾಗಿ ಬೆಳಗಿದೆ. ನಮಗೆ ನಮ್ಮ ಜೀವನದ ಮೇಲೆ ನಂಬಿಕೆ ಬೇಕು, ಇನ್ನಿತರರು ನಮ್ಮಂತೆ ಜೀವನ ನಡೆಸುತ್ತಾರೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಇರಬೇಕು, ಸತ್ಯ ನ್ಯಾಯ ಪಾಲಿಸಿಕೊಂಡು ಜೀವನ ನಡೆಸುವುದೇ ನಿಜವಾದ ಧರ್ಮ ಉಳಿಸಿದಂತೆ. ದೇವಾಲಯಗಳ ಅಭಿವೃದ್ದಿಯಾದರೆ ಊರು ಉದ್ಧಾರವಾಗುತ್ತದೆ ಎಂಬ ನಂಬಿಕೆ ಸರ್ವಕಾಲಿಕ ಸತ್ಯ ಎಂದರು.
ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರನ್ನು ದೇವರು ಅನುಗ್ರಹಿಸುತ್ತಾನೆ. ಈ ದೇವಾಲಯದ ಅಭಿವೃದ್ದಿಯಿಂದ ಈ ಊರಿನ ಜನರ ಕಷ್ಟಗಳು ದೂರವಾಗಿ ನೆಮ್ಮದಿಯ ಬದುಕು ನಿಮ್ಮದಾಗಲಿದೆ ಎಂದರು.
ಕಾರ್ಯಾಲಯ ಸಮಿತಿ ಸಂಚಾಲಕ ಸುರೇಶ್ ರೈ ಕೊಲ್ಯ ಮಾತಾನಾಡಿ, ನಳೀಲು ಶ್ರೀ ಕ್ಷೇತ್ರದ ಬೆಳವಣಿಗೆಯಲ್ಲಿ ಸಂತೋಷ್ ಕುಮಾರ್ ರೈ ಅವರ ಶ್ರಮ ಮಹತ್ವದ್ದು.ಎಲ್ಲರನ್ನೂ ಜತೆಯಾಗಿ ಸೇರಿಸಿಕೊಂಡು ಮುನ್ನಡೆಯುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಮಾತಾನಾಡಿ, ನಳೀಲು ಕ್ಷೇತ್ರದ ಕಾರಣಿಕತೆ ವಿಶೇಷವಾದದ್ದು,ಕ್ಷೇತ್ರದ ಮಹಿಮೆ ಜಗತ್ತಿಗೆ ಪಸರಿಸುತ್ತಿದ್ದು, ಇಲ್ಲಿ ದೇವರನ್ನು ನಾಗನರೂಪದಲ್ಲಿ ಪ್ರತ್ಯಕ್ಷವಾಗಿ ಕಾಣಬಹುದು ಎಂದರು.
ಕೊಳ್ತಿಗೆ ಸಿ ಎ ಬ್ಯಾಂಕ್ ಅಧ್ಯಕ್ಷ ವೆಂಕಟ್ರಮಣ ಕೆ ಎಸ್, ನಿವೃತ್ತ ಉಪನ್ಯಾಸಕ ನಾರಾಯಣ ರೈ ಕುಕ್ಕುವಳ್ಳಿ, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಅವರು ಮಾತನಾಡಿದರು.
ಡಾ.ಧೀರಜ್ ಕಲ್ಲಿಮಾರು, ಹಿರಿಯ ಸಹಕಾರಿ ಧುರಿಣ ಕಳಂಜ ವಿಶ್ವನಾಥ ರೈ,, ಸ್ವಾಗತ ಸಮಿತಿ ಸಂಚಾಲಕ ಸುನಿಲ್ ರೈ ಪಾಲ್ತಾಡು, ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷೆ ಅಕ್ಕಮ್ಮ, ಸದಸ್ಯರಾದ ಶುಭಲತಾ ಜೆ. ರೈ, ಪಿ.ಬಿ. ಸುಂದರ, ಪ್ರಗತಿ ಪರ ಕೃಷಿಕ ಎಂ ಬಿ ವಿಶ್ವನಾಥ ರೈ ಉಪಸ್ಥಿತರಿದ್ದರು.
ಮಂಜುಳಾ ಕಿಶೋರ್ ಕುಮಾರ್ ರೈ ನಳೀಲು ದಂಪತಿಗಳು ಸ್ವಾಮೀಜಿಯವರನ್ನು ಗೌರವಿಸಿದರು. ಸುಬ್ರಾಯ ಗೌಡ ಪಾಲ್ತಾಡಿ, ವಸಂತ ರೈ ಮಾಡಾವು ಅತಿಥಿಗಳನ್ನು ಗೌರವಿಸಿದರು.
ಕ್ಷೇತ್ರದ ಹಿರಿಯ ಗೌರವ ಮಾರ್ಗದರ್ಶಕಿ ಎನ್.ಗಿರಿಜಾ ರೈ ನಳೀಲು,ಅರ್ಚಕ ಶ್ರೀನಿವಾಸ ಹೆಬ್ಬಾರ್, ಪಾಕತಜ್ಞ ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ ,ಡಾ.ಧೀರಜ್ ಕಲ್ಲಿಮಾರು ಅವರನ್ನು ಸ್ವಾಮೀಜಿಯವರು ಸನ್ಮಾನಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ಶಶಿಕುಮಾರ್ ಬಿ ಎನ್ ವಂದಿಸಿದರು. ಕೆಯ್ಯೂರು ಶಾಲಾ ಮುಖ್ಯ ಶಿಕ್ಷಕ ವಿನೋದ್ ಕುಮಾರ್ ಕೆ ಎಸ್ ನಿರೂಪಿಸಿದರು. ಗಣೇಶ್ ಕೆ.ವಿ. ,ಚಂದ್ರಾವತಿ ರೈ, ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗ ಸಂಚಾಲಕಿ ಡಾ.ವೀಣಾ ಸಂತೋಷ್ ರೈ ,ಸಹ ಸಂಚಾಲಕಿ ನಿರೀಕ್ಷಾ ಜೆ.ಶೆಟ್ಟಿ ಸಹಕರಿಸಿದರು.
ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಉಷೆ ಪೂಜೆ,ಮಹಾಗಣಪತಿ ಪೂಜೆ, ಅಂಕುರಪೂಜೆ,ಸ್ವಶಾಂತಿ ,ಅದ್ಭುತ ಶಾಂತಿ, ಚೋರ ಶಾಂತಿ, ಹೋಮಾದಿಗಳು, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ,ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೀಪಾರಾಧನೆ, ಅಂಕುರ ಪೂಜೆ, ಕುಂಡ ಶುದ್ದಿ, ಮಹಾಪೂಜೆ , ಪ್ರಸಾದ ವಿತರಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ,ಮಣಿಕ್ಕರ ಸ.ಹಿ.ಪ್ರಾ.ಶಾಲೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ಸುಸ್ವರ ಮೆಲೋಡಿಯಸ್ ಉಪ್ಪಿನಂಗಡಿ ಇವರಿಂದ ಭಕ್ತಿ-ಭಾವ-ಸಂಗಮ ,ರಾತ್ರಿ ಸಂಗಮ ಕಲಾವಿದರಿಂದ ಶಿವಧೂತ ಗುಳಿಗೆ ನಾಟಕ ಪ್ರದರ್ಶನ ನಡೆಯಿತು.
ಸುಮಾರು 5 ಸಾವಿರ ಜನರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಅನ್ನಪ್ರಸಾದ ಸ್ವೀಕರಿಸಿದರು.
ದೇವಸ್ಥಾನದಲ್ಲಿ ನಾಳೆ :
ಫೆ.20ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು. ಭಜನೆ, ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ, ಸಂಜೆ ದೀಪಾರಾಧನೆ, ತ್ರಿಕಾಲ ಪೂಜೆ, ಮಹಾಪೂಜೆ , ದೈವಸ್ಥಾನದಲ್ಲಿ ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ ಗಿರಿಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಬೆಳಿಗ್ಗೆ 10.30ಕ್ಕೆ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಆರಂಭವಾಗಲಿದೆ.