ಕಾಣಿಯೂರು: ಶ್ರೀ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವದ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವಕ್ಕೆ ಫೆ. 1ರಂದು ಅರುವಗುತ್ತಿನಲ್ಲಿ ಗೊನೆ ಮುಹೂರ್ತ ನೆರವೇರಿತು.
ಫೆ. 7ರಂದು ಕೊಪ್ಪ ಚಾವಡಿಯಿಂದ ಭಂಡಾರ ಆಗಮಿಸಿ ದೈಪಿಲ ಕ್ಷೇತ್ರದಲ್ಲಿ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಾಲ್ಕು ಮನೆ, ಹದಿನಾಲ್ಕು ವರ್ಗ, ಕೊಪ್ಪ ಮೂವತ್ತು ಮನೆಯವರ ಸಹಕಾರದಲ್ಲಿ ಪ್ರತಿವರ್ಷ ನೇಮೋತ್ಸವ ನಡೆದುಕೊಂಡು ಬರುತ್ತಿದೆ.
ಫೆ. 8ರಂದು ಶ್ರೀ ಕ್ಷೇತ್ರ ದೈಪಿಲದಲ್ಲಿ ನಡೆಯುವ ನೇಮೋತ್ಸವಕ್ಕೆ ಅರುವಗುತ್ತಿನ ದೈವಗಳಿಗೆ ಪ್ರಾರ್ಥನೆ ನೆರವೇರಿಸಿ, ಗೊನೆ ಮುಹೂರ್ತ ನಡೆಸಲಾಯಿತು.
ಅರುವಗುತ್ತು ಯಜಮಾನ ಪ್ರದೀಪ್ ಆರ್. ಗೌಡ, ಚಂದ್ರಕಲಾ ಜಯರಾಂ ಅರುವಗುತ್ತು, ಪರಿಚಾರಕರಾದ ಧರ್ಮಪಾಲ ಅಂಬುಲ, ಜಯಾನಂದ ಕೊಪ್ಪ, ನಾಲ್ಕು ಮನೆಯವರಾದ ರಾಮಣ್ಣ ಗೌಡ ಖಂಡಿಗ, ಶೇಖರ ಗೌಡಮನೆ, ಶೇಖರ ಅಂಬುಲ, ಪ್ರಮುಖರಾದ ಕೃಷ್ಣಪ್ಪ ಗೌಡ ಕೆಳಗಿನ ಕೇರಿ, ಮೋನಪ್ಪ ಗೌಡ ಅಂಬುಲ, ಚಂದ್ರಶೇಖರ ಅಂಬುಲ, ಜಯಂತ ಅಂಬುಲ, ಕುಶಾಲಪ್ಪ ಗೌಡ ಅಂಬುಲ, ದೇವಣ್ಣ ಅಂಬುಲ, ಪರಮೇಶ್ವರ ಗೌಡ ಮೀಯೊಲ್ಪೆ, ದಿನೇಶ್ ಕುಕ್ಕುನಡ್ಕ, ಗಿರೀಶ್ ಅಂಬುಲ, ಕರ್ತ ಮೊದಲಾದವರು ಉಪಸ್ಥಿತರಿದ್ದರು.