ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ

ಭಾಗ -3

ಈಗ ನಾವು ಕಾಂಗ್ರೆಸ್ ನ ದಾಖಲೆಗಳನ್ನು ಗಮನಿಸೋಣ. ಕಳೆದ 70 ವರ್ಷಗಳಲ್ಲಿ 52% ಒಬಿಸಿ ಜನಸಂಖ್ಯೆಯಲ್ಲಿ ಕೇವಲ ಇಬ್ಬರು ಒಬಿಸಿ ರಾಷ್ಟ್ರಧ್ಯಕ್ಷರನ್ನು ಮಾತ್ರ ಹೊಂದಿದ್ದು ಉಳಿದ ಎಲಾ  ರಾಷ್ಟ್ರಧ್ಯಕ್ಷರು ಮೇಲು ಜಾತಿಯವರಾಗಿದ್ದಾರೆ. ಒಬಿಸಿ ಮುಖ್ಯಮಂತ್ರಿಗಳನ್ನು ನೋಡುವುದಾದರೆ ಕಾಂಗ್ರೆಸ್ ಪಕ್ಷವು ಕೆಳಮಟ್ಟದಿಂದ ಮೊದಲಸ್ಥಾ ನದಲ್ಲಿದೆ. ಇಲ್ಲೂ ಕೂಡಾ ಪ್ರಬಲ ಒಬಿಸಿ ಜಾತಿಗಳಿಗೆ ಹೆಚ್ಚು  ಪ್ರಾತಿನಿಧ್ಯವನ್ನು ನೀಡಿರುವುದನ್ನು ಗಮನಿಸಬಹುದು.

ನಾವು ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳಲ್ಲಿ ಒಬಿಸಿ ವರ್ಗದವರಿಗೆ ಕಾಂಗ್ರೆಸ್ ಏನೂ ಮಾಡಲಿಲ್ಲ. ಇನ್ನೇನು ರಾಷ್ರ್ಟೀಯ ಚುನಾವಣೆಗೆ 6 ತಿಂಗಳು ಇದೆ ಎನ್ನುವಾಗ ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಕುಲ್ಫಿ, ಬಟರ್‌ಚಿಕನ್, ಕಡಾಯಿ ಪನೀರ್ ಮತು ಗೋಡಂಬಿ ಬರ್ಫಿ ಮಾಡುವಂತೆ ನಾನು ವಿರೋಧ ಪಕ್ಷಗಳಿಗೆ ಕೇಳುತ್ತೇನೆ, ನಮ್ಮನ್ನು ಮೂರ್ಖರನ್ನಾಗಿ ಮಾಡಬೇಡಿ. ಮುಸ್ಲಿಂ ಸಮುದಾಯಕ್ಕೂ ರಾಹುಲ್ ಗಾಂಧಿಯವರು ತಲೆ ನೋವು ತಂದಿದ್ದಾರೆ. ಎನ್ನುವುದನ್ನು ವಿರೋಧ ಪಕ್ಷಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಸ್ಲಿಂ ಸಮುದಾಯದಲ್ಲಿ ಎರಡು ದೊಡ್ಡ ಜಾತಿ ಗುಂಪುಗಳಿವೆ. ಅದರಲ್ಲಿ ಮೊದಲನೆಯದ್ದು ಅಶ್ರಫುಲ್, ಇದರಲ್ಲಿ ಸೈಯದ್ ಮೊಘಲ್ ಪಠಾಣ್ ಮತಾಂತರಗೊಂಡ ರಜಪೂತರು ಹಾಗೂ ತ್ಯಾಗಿಮುಸ್ಲಿಂರು ಸೇರಿದ್ದಾರೆ. ಎರಡನೇ ಗುಂಪಿನಲ್ಲಿ ಹಿಂದುಳಿದ ಹಾಗೂ ಕೆಳಜಾತಿಯ ಮುಸ್ಲಿಮರಾದ ಪಾಸ್ಮಾಂಡ, ಖುರೇಷಿ ಮೊದಲಾದವರು. ಮೂಲಭೂತವಾಗಿ ಭಾರತದ ಮುಸ್ಲಿಮರಲ್ಲಿ ಇರುವವರು ಅಶ್ರಫುಲ್ ಮುಸ್ಲಿಮರು ಸುಮಾರು 10-15% ಮಾತ್ರ, ಉಳಿದ 85-90% ಪಾಸ್ಮಾಂಡರು.





























 
 

ಸ್ವಾತಂತ್ರ್ಯದ ನಂತರ ಭಾರತದಲ್ಲಿ 14 ಲೋಕಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ 400 ಮುಸ್ಲಿಮರು ಅಯ್ಕೆಯಾಗಿದ್ದಾರೆ. ಈ 400 ರಲ್ಲಿ ಕೇವಲ 60 ಜನ ಮಾತ್ರ ಪಾಸ್ಮಾಂಡರು. ಇದು ಏನನ್ನು ತೋರಿಸುತ್ತೆದೆಯೆಂದರೆ 85-90% ಜನಸಂಖ್ಯೆಯುಳ್ಳ ಪಾಸ್ಮಾಂಡರು ಕೇವಲ 60 ಮಂದಿ, 10-15%  ಜನಸಂಖ್ಯೆಯುಳ್ಳ ಅಶ್ರಫುಲ್ ಪಂಗಡದಿಂದ 340 ಮಂದಿ. ಬಿಹಾರದ ಕೆಲವು ಹಿರಿಯ ಪತ್ರಕರ್ತರು ಹೇಳುವ ಪ್ರಕಾರ ಸರಕಾರದಿಂದ ಸಿಗುವ ಸವಲತ್ತುಗಳು ಪಾಸ್ಮಾಂಡರಿಗೆ ಸಿಗುತ್ತಿಲ್ಲ. ಅಶ್ರಫುಲ್ ವರ್ಗದವರು ಅವರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬುದಾಗಿ ಪ್ರಕಟಿಸಿದ್ದಾರೆ.

2016 ರಲ್ಲಿ ಬಿಹಾರದಲ್ಲಿ ಆರ್‍.ಜೆ.ಡಿ. ಆಯ್ಕೆ ಮಾಡಿದ 40 ಅಭ್ಯರ್ಥಿಗಳಲ್ಲಿ ಮೈತ್ರಿಕೂಟದಿಂದ ಆಯ್ಕೆಯಾದ 7ಅಭ್ಯರ್ಥಿಗಳಲ್ಲಿ 7ಮಂದಿ ಮುಸ್ಲಿಮರು. ಈ ಏಳು ಮಂದಿಯಲ್ಲಿ ಆರು ಅಭ್ಯರ್ಥಿಗಳು ಅಶ್ರಫುಲ್ ಮುಸ್ಲಿಮರಾಗಿದ್ದು ಮತು  ಏಳನೇ ಅಭ್ಯರ್ಥಿಯೂ ಸಹ ಸೀಮಾಂಚಲ್ ಪ್ರದೇಶದ ಪ್ರಬಲ ಜಾತಿಯಿಂದ ಬಂದವನು. ಹಾಗಾಗಿ ಆತನು ಪಾಸ್ಮಾಂಡ ಅಥವಾ ಅಲ್ಲವೇ ಎಂಬ ಅನುಮಾನವು ಜನರಿಗೆ ಇದೆ. ನಾವು ಇಡೀ ಬಿಹಾರವನ್ನು ಗಮನಿಸಿದರೆ ಮುಸ್ಲಿಮರ ಪಾಲು ಸುಮಾರು 18%, ಯಾದವರದ್ದು 14% ಮತು  ಇತರ ಎಲ್ಲಾ ಸಮುದಾಯಗಳ ಪಾಲು ಸುಮಾರು 3 ರಿಂದ 4% ರಷ್ಟಿದೆ.

ಹಾಗಾಗಿ ಬಿಹಾರದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ

ಹಕ್ಕುಗಳ ಪ್ರಕಾರ ಬಿಹಾರದ ಮುಖ್ಯಮಂತ್ರಿ ಯಾವಾಗಲೂ ಮುಸಲ್ಮಾನನಾಗಿರಬೇಕು. ಆದರೆ ಅಶ್ರಫುಲ್ ಪಂಗಡದವರಲ್ಲ. ಬದಲಾಗಿ ಪಾಸ್ಮಾಂಡರು. ಅದೇ ರೀತಿ 14% ಜನಸಂಖ್ಯೆಯುಳ್ಳ ಯಾದವರಿಗೂ ಮುಖ್ಯಮಂತ್ರಿಯಾಗುವ ಅವಕಾಶವಿಲ್ಲ. ಹಾಗೆಯೇ ನಿತೀಶ್ ಕುಮಾರ್ ರವರ ಕುರ್ಮಿ ಜಾತಿಯ ಜನಸಂಖ್ಯೆಯು ಕೇವಲ 2%. ಹಾಗಾಗಿ ಅವರಿಂದ ಯಾದವರು ಮತ್ತು ಮುಸ್ಲಿಮರು ಹಕ್ಕುಗಳನ್ನು ಕಸಿದುಕೊಳ್ಳಬಹುದು. ಜನಸಂಖ್ಯೆಯ ಪ್ರಕಾರ, ಹಲವು ಹಕ್ಕುಗಳ ಸೂತ್ರದ ಅಡಿಯಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಈ ಸೂತ್ರದ ಪ್ರಕಾರ ಯಾವುದೇ ಕುರ್ಮಿ ಬಿಹಾರದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದೇ ರೀತಿ ಪರಿಶಿಷ್ಟ ಜಾತಿ ಸಮುದಾಯಗಳು ಕೂಡಾ ಕೇವಲ 3 ರಿಂದ 4% ಜನಸಂಖ್ಯೆಯನ್ನು ಹೊಂದಿರುವುದರಿಂದ ಈ ಸೂತ್ರದ ಅಡಿಯಲ್ಲಿ ಅವರು ಎಂದಿಗೂ ಮುಖ್ಯಮಂತ್ರಿಯಾಲು ಸಾಧ್ಯವಿಲ್ಲ.

ಅಶ್ವಿನ್ ಎಲ್‍. ಶೆಟ್ಟಿ, BE, ME, DPT, MBA, LLB

ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು

(ಮುಂದುವರಿಯುವುದು)

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top