ಪುತ್ತೂರು: ಈಶ್ವರಮಂಗಲ ಯುವ ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಈಶ್ವರಮಂಗಲ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ, ಒಕ್ಕಲಿಗ ಗೌಡ ಮಹಿಳಾ ಘಟಕದ ಸಹಭಾಗಿತ್ವದಲ್ಲಿ ಮಾಡ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಪಡವನ್ನೂರು, ನಿಡ್ಪಳ್ಳಿ, ನೆಟ್ಟಣಿಗೆ, ಬೆಳ್ಳೂರು ಗ್ರಾಮಗಳನ್ನು ಒಳಗೊಂಡ ವಲಯ ಮಟ್ಟದ ಯುವ ಕ್ರೀಡಾ ಸಂಗಮ ಫೆ. 4ರಂದು ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ನಡೆಯುವ ಕ್ರೀಡಾಕೂಟವನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿರ್ನೋಡಿ ಉದ್ಘಾಟಿಸಲಿದ್ದು, ಬಗಡನ್ನೂರು ಗ್ರಾಮ ಸಮಿತಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕನ್ನಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ವಿಶ್ವನಾಥ ಗೌಡ ಅಡಿಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯ ರಾಮಣ್ಣ ಗೌಡ ಬಸವಹಿತ್ಳು, ಒಕ್ಕಲಿಗ ಗೌಡ ಸೇವಾ ಸಂಘ ಬಡಗನ್ನೂರು ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಸಾರೆಪ್ಪಾಡಿ ಪಾಲ್ಗೊಳ್ಳಲಿದ್ದಾರೆ. ಬಡಗನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಶೀಲ ವೆಂಕಪ್ಪ ಗೌಡ, ನೆಟ್ಟಣಿಗೆ ಮುಡ್ನೂರು ಅಧ್ಯಕ್ಷೆ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಕಲಾವತಿ ಎಸ್. ಗೌಡ ಪಟ್ಲಡ್ಕ ಉಪಸ್ಥಿತರಿರುವರು.
ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಘಟಕದ ಅಮರನಾಥ ಗೌಡ ಬಪ್ಪಳಿಗೆ, ಮಹಿಳಾ ಸಂಘದ ವರಿಜಾ ಬೆಳಿಯಪ್ಪ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಈಶ್ವರಮಂಗಲ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ, ನಿಡ್ಪಳ್ಳಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ, ಒಕ್ಕಲಿಗ ಗೌಡ ಸಂಘ ನೆಟ್ಟಣಿಗೆ ಮುಡ್ನೂರು ಗ್ರಾಮದ ಉಪಾಧ್ಯಕ್ಷ ನವೀನ್ ಕುಮಾರ್, ಕೃಷ್ಣಪ್ಪ ಗೌಡ ಡೆಂಬಾಳೆ, ಶ್ರೀನಿವಾಸ ಗೌಡ ಕನ್ನಯ, ಪ್ರತಿಭಾ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಡಿ, ಒಕ್ಕಲಿಗ ಸ್ವ ಸಹಾಯ ಸಂಘಗಳ ಬಡಗನ್ನೂರು ಒಕ್ಕೂಟ ಅಧ್ಯಕ್ಷ ಗಿರಿಯಪ್ಪ ಗೌಡ ಅಲಂತಡ್ಕ ಭಾಗವಹಿಸಲಿದ್ದಾರೆ.
ಕ್ರೀಡಾ ಸಂಗಮದಲ್ಲಿ ಪುರುಷರಿಗೆ, ಮಹಿಳೆಯರಿಗೆ, ಹುಡುಗರು, ಹುಡುಗಿಯರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ 2022-2023ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿ ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಅಧ್ಯಕ್ಷ ಜಗನ್ನಾಥ ಗೌಡ ಪಟ್ಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.