ಭಾಗ -2
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 113 ಮಂದಿ ಓಬಿಸಿ ಸಂಸದರು, 43 ಮಂದಿ ಪರಿಶಿಷ್ಟ ಪಂಗಡದ ಸಂಸದರು, 53 ಮಂದಿ ಪರಿಶಿಷ್ಟ ಜಾತಿಯ ಸಂಸದರು ಅಯ್ಕೆಯಾದರು. ಅಂದರೆ ಬಿಜೆಪಿಯ ಚುನಾಯಿತ ಸಂಸದರಲ್ಲಿ 37% ಓಬಿಸಿ, 14% ಪರಿಶಿಷ್ಟ ಪಂಗಡ ಮತ್ತು 17% ಪರಿಶಿಷ್ಟ ಜಾತಿ ಅಂದರೆ 303 ಲೋಕಸಭಾ ಸಂಸದರ ಪೈಕಿ69% ರಷ್ಟು ಮಂದಿ ಮೇಲ್ಜಾತಿ ಅಲ್ಲದವರಾಗಿರುವುದು ಕಂಡು ಬರುತ್ತದೆ. ನಳಿನ್ ಮೆಹ್ತಾರವರ ಪ್ರಕಾರ, ಬಿಜೆಪಿಯು ಅತೀಹೆಚ್ಚು ಜಾತಿ ವರ್ಗವನ್ನು ಪ್ರತೀ ಸಂಘಟನಾ ಮಟ್ಟದಲ್ಲಿ ಪ್ರತಿನಿಧಿಸುವ ಘಟಕ. ವಾಸ್ತವವಾಗಿ, ಬಿಜೆಪಿಯು ಹೆಚ್ಚಿನ ಶೇಕಡಾವಾರು ಒಬಿಸಿ ಸಿ.ಎಂ ಗಳನ್ನು ಹೊಂದಿರುವ ಪಕ್ಷ. ಅಂದರೆ 31% ಸಿ.ಎಂಗಳು ಬಿಜೆಪಿಯಿಂದ ಬಂದಿದ್ದಾರೆ.
ಆದರೆ ಕಾಂಗ್ರೆಸ್ ಕೆಳಗಿನಿಂದ ಮೊದಲ ಸ್ಥಾನದಲ್ಲಿದೆ. ಅಂದರೆ ಕಾಂಗ್ರೆಸ್‌ನಲ್ಲಿ ಕೇವಲ 17% ಸಿ.ಎಂಗಳು ಮಾತ್ರ ಇಲ್ಲಿಯವರೆಗೆ ಒಬಿಸಿಗಳಾಗಿದ್ದಾರೆ. ಈ ಕಾರಣಗಳಿಂದಾಗಿ ಒಬಿಸಿಗಳು ಬಿಜೆಪಿಗೆ ಪ್ರಬಲ ಮತದಾರರಾಗಿದ್ದಾರೆ ಮತ್ತು ಇದು ಭಾರತದ ಬೃಹತ್ ಜನಸಂಖ್ಯೆಯಾಗಿರುವುದರಿಂದ ಈ ಡಾಟ್ ಅಲೈಯನ್ಸ್ ಜಾತಿ ಸಮೀಕ್ಷೆಯನ್ನು ಮಾಡುವ ಮೂಲಕ ಮತ್ತು ಜನಸಂಖ್ಯೆಯ ಹಕ್ಕುಗಳನ್ನು ಹೇಳುವ ಮೂಲಕ ಈ ಮತದಾನದ ನೆಲೆಯನ್ನು ಮುರಿಯಲು ಬಯಸುತ್ತದೆ. ಆದ್ದರಿಂದ ನಾವು ಈ ಜಾತಿಗಣತಿಯ ಸಾಧಕ-ಬಾಧಕಗಳನ್ನು ಗಮನಿಸೋಣ.
ವಿವಿಧ ಜಾತಿ ಗುಂಪುಗಳಿಗೆ ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ನೀಡುವುದು ಧನಾತ್ಮಕ ವಿಚಾರ ಎನ್ನಬಹುದು. ಜನಗಣತಿಯು ಲಿಂಗ ಅನುಪಾತ ಮತ್ತು ಮರಣ ಪ್ರಮಾಣವನ್ನು ನೀಡುತ್ತದೆ. ಅದೇ ರೀತಿ ಜೀವಿತಾವಧಿ, ಪುರುಷ ಮತು ಸ್ರೀ ಸಾಕ್ಷರತೆ, ಶೈಕ್ಷಣಿಕ ಸ್ಥಿತಿ ಹಾಗೆಯೇ ಆರ್ಥಿಕ ಸ್ಥಿತಿಗತಿಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುತ್ತದೆ. ಒಂದು ಕಾಲದಲ್ಲಿ ಬಿಜೆಪಿಯ ಕೇಂದ್ರ ಸರಕಾರವು ಜಾತಿ ಸಮೀಕ್ಷೆಗೆ ಬೆಂಬಲ ನೀಡಿತು. ನೇರ ಲಾಭ ವರ್ಗಾವಣೆಯನ್ನು ಉತ್ತಮ ಗುರಿಯಾಗಿಸಲು ಮತು ಜನರಿಗೆ ಕಲ್ಯಾಣ ಯೋಜನೆಗಳನ್ನು ಸರಿಯಾಗಿ ತಲುಪಿಸಲು ಇದನ್ನು ಬಳಸಲಾಗುವುದು ಎಂದು ಅವರು ಹೇಳಿದ್ದರು. ಆದರೆ ವಿರೋಧ ಪಕ್ಷಗಳು ಜಾತಿ ಸಮೀಕ್ಷೆಯನ್ನು ಅಸ್ರ್ತದ ರೀತಿಯಲ್ಲಿ ಬಳಸುತ್ತಿದ್ದು ಇದು ಅತ್ಯಂತ ಅಪಾಯಕಾರಿಯಾಗಿದೆ. ಜಿತ್ನಿ ಅಬಾದಿ ಟಿಟ್ ಹಕೆಂಬ ಘೋಷ ವಾಕ್ಯವನ್ನು ನೀಡಿದ ಡಾಟ್ ಅಲೆಯನ್ಸ್ ಕರ್ಪೂರಿ ಠಾಕೂರ್ ರವರ ಸೂತ್ರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಕರ್ಪೂರಿ ಠಾಕೂರ್ ರವರು ನೀಡಿರುವ ಸೂತ್ರದ ಪ್ರಕಾರ 29% ಒಬಿಸಿಗಳಿಗೆ, 6% ಸಾಮಾನ್ಯ ವರ್ಗ ಹಾಗೂ ಮಹಿಳೆಯರಿಗೆ 20% ವನ್ನು ಅತ್ಯಂತ ಹಿಂದುಳಿದ ವರ್ಗ ಮತ್ತು ಕನಿಷ್ಠ ಹಿಂದುಳಿದ ವರ್ಗಗಳ ನಡುವೆ ವಿಂಗಡಿಸಲಾಗಿದೆ. ಇದನ್ನು ಬಿಹಾರದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದರೆ ಮಹಿಳಾ ಮೀಸಲಾತಿಯ ವಿರುದ್ಧ ಹೇಳಿಕೆ ನೀಡಿರುವ ಪಕ್ಷಗಳೂ ಇವೆ. ಆ ಆರ್.ಜೆ.ಡಿ. ಯ ಹಿರಿಯ ನಾಯಕರೊಬ್ಬರು ಮೀಸಲಾತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ಲಿಪ್‌ಸ್ಟಿಕ್ ಬಳಸುವ ಹಾಗೂ ಸಣ್ಣ ಕೂದಲನ್ನು ಹೊಂದಿರುವ ಮಹಿಳೆ ಈ ಮೀಸಲಾತಿಯ ಲಾಭವನ್ನು ಪಡೆಯುತ್ತಾಳೆ ಎಂದಿದ್ದಾರೆ. ಹಾಗಾಗಿ ಒಬಿಸಿ ಮತು ಇಬಿಸಿಯ ಕೋಟಾವು ಇರಲೇ ಬೇಕು ಎಂದಿದ್ದಾರೆ. ಸಮಾಜವಾದಿ ಪಕ್ಷವು ಕೂಡಾ ಮೀಸಲಾತಿಯನ್ನು ವಿರೋಧಿಸುತ್ತದೆ. ಅವರ ಪ್ರಕಾರ ಮಹಿಳಾ ಮಸೂದೆಯನ್ನು ಅಂಗೀಕರಿಸಿದರೆ ನಮ್ಮ ಬಡ ಮಹಿಳೆಯರಿಗೆ ಅವಕಾಶ ಸಿಗುವುದಿಲ್ಲ. ದೊಡ್ಡ ಕುಟುಂಬಗಳ ಮಹಿಳೆಯರು ಅದನ್ನು ಕಸಿದುಕೊಳುತ್ತಾರೆ ಎನ್ನುವುದು ಅವರ ಅಭಿಪ್ರಾಯ. ಕಪೂರಿ ಠಾಕೂರ್‌ರವರ ಸೂತ್ರದಲ್ಲೂ ಸಾಮಾನ್ಯ ವರ್ಗಕ್ಕೂ ಮೀಸಲಾತಿಯಿತ್ತು.
ಆದರೆ ವಿರೋಧ ಪಕ್ಷಗಳು ಸಾಮಾನ್ಯ ವರ್ಗ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅದನ್ನು ನೀಡಲು ಬಯಸುವುದಿಲ್ಲ ಎಂದು ಹೇಳಿದೆ. ತಮಿಳುನಾಡು ಸರಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 10% ಕೋಟಾವನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದೆ. ಇದು ಏನನ್ನು ಸ್ಪಷ್ಟಪಡಿಸುತ್ತದೆಯೆಂದರೆ ಮೈತ್ರಿಯು ಭಾರತದ ಎಲಾ ಜನರಿಗೆ ಸಹಾಯ ಮಾಡಲು ಇಚ್ಛಿಸುವುದಿಲ್ಲ ಎನ್ನುವುದನ್ನು ಕೆಲವೇ ಪ್ರಬಲ ಜಾತಿಗಳಿಗೆ ಸಹಾಯ ಮಾಡುವುದು ಇವರ ಉದ್ಧೇಶವಾಗಿದೆ. ಮುಖ್ಯವಾಗಿ ಭಾರತದ ಜಾತಿ ಗುಂಪುಗಳಾದ ಯಾದವರು, ಕುರ್ಮಿಗಳು ಮತ್ತು ಮುಸ್ಲಿಮರು ಕಸಿದುಕೊಂಡಿದ್ದಾರೆ ಎಂಬುದು ನಮಗೆ ತಿಳಿದುಬರುತ್ತದೆ.
ನಮಗೆಲ್ಲ ತಿಳಿದಿರುವಂತೆ ಬಿಹಾರದ ಜನಸಂಖ್ಯೆಯಲ್ಲಿ ಯಾದವರು 14% ಮಾತ್ರ. ಆದರೆ ಆರ್.ಜೆ.ಡಿ. ಅವರಿಗೆ 30 ಸ್ಥಾನಗಳನ್ನು ನೀಡಿದೆ. ಕುರ್ಮಿ ಜನಸಂಖ್ಯೆಯು 2.8% ಮಾತ್ರ. ಆದರೆ ಜೆ.ಡಿ.ಯು. ಅವರಿಗೆ 14% ಸ್ಥಾನವನ್ನು ನೀಡಿದೆ. ಅವರು ಜನಸಂಖ್ಯೆಗಿಂತ ಹೆಚ್ಚಿನ ಹಕ್ಕುಗಳನ್ನು ಹೊಂದಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬಿಹಾರದಲ್ಲಿ ಒಬಿಸಿಗಳ ಪ್ರಾತಿನಿಧ್ಯವನ್ನು ಗಮನಿಸಿದರೆ ಯಾದವರ ಪ್ರಾಬಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ. 13 ಹಿಂದುಳಿದ ಜಾತಿ ಸಚಿವರ ಪೈಕಿ 8 ಯಾದವರು 33 ಸಚಿವರಲ್ಲಿ 22 ಯಾದವರು ಇದ್ದಾರೆ. ಒಟ್ಟು ಜನಸಂಖ್ಯೆಯ 14% ನಷ್ಟು ಇವರಾಗಿದ್ದರೂ ಇವರು ಪಡೆದಿರುವ ಹಕ್ಕುಗಳು ಅಸಮಾನ್ಯವಾದದ್ದು.
ಅಶ್ವಿನ್ ಎಲ್. ಶೆಟ್ಟಿ, BE, ME, DPT, MBA, LLB
ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು
(ಮುಂದುವರಿಯುವುದು)