ಪುತ್ತೂರು: ಪೆರ್ನಾಜೆ ಆಸುಪಾಸಿನಲ್ಲಿ ಒಂಟಿ ಸಲಗದ ಕಾಟ ಕಾಣಿಸಿಕೊಂಡಿದ್ದು, ಕೃಷಿಯನ್ನು ಹಾನಿಗೊಳಿಸಿದೆ. ಘಟನೆಯಿಂದ ಕೃಷಿಕರಲ್ಲಿ ಆತಂಕ ಮನೆಮಾಡಿದೆ.



ಪುತ್ತೂರು – ಸುಳ್ಯ – ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಕೃಷಿ ತೋಟಕ್ಕೆ ಒಂಟಿ ಸಲಗ ಬುಧವಾರ ಮುಂಜಾನೆ ದಾಳಿ ನಡೆಸಿದೆ. ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ನಾಲ್ಕು ದೀವಿ ಹಲಸು ಮರ, ಅಡಿಕೆ ತೋಟವನ್ನು ಹಾಳುಗೆಡವಿದೆ.
ಗುಂಪಿನಿಂದ ಬೇರ್ಪಟ್ಟ ಸಲಗ: ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಇದೆಂದು ಹೇಳಲಾಗುತ್ತಿದೆ. ಈ ಮೊದಲು ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ, ಪಂಜಿಕಲ್ಲು ಪರಿಸರದಲ್ಲಿ ಕೃಷಿ ಹಾನಿಗೊಳಿಸಿತ್ತು. ಇದೀಗ ಕನಕಮಜಲಿನಿಂದ ಪೆರ್ನಾಜೆಗೆ ಆಗಮಿಸಿ ದಾಳಿ ಮುಂದುವರಿಸಿದೆ. ಇದರಿಂದ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.