ಇಂದು ಶ್ರಾವಣ ಮಾಸದ ಪ್ರಥಮ ಹಬ್ಬ ನಾಗರಪಂಚಮಿ | ನಾಗ ಪೂಜೆಯ ಮಹತ್ವವೇನು |  ನಾಗದೇವರನ್ನು ಯಾಕೆ ಪೂಜಿಸಬೇಕು ?|ಇಲ್ಲಿದೆ ಡಿಟೈಲ್ಸ್

ಪುತ್ತೂರು: ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಪ್ರಥಮ ಹಬ್ಬ. ಶ್ರಾವಣ ಶುಕ್ಲ ಪಂಚಮಿಯಂದು (ಈ ಬಾರಿ ಆ.21 ಸೋಮವಾರ) ಆಚರಿಸಲಾಗುತ್ತದೆ.

ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಹೊಸ ಬಟ್ಟೆ ಧರಿಸಿ, ನಾಗದೇವರನ್ನು ಪೂಜಿಸಿ, ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ. ಜತೆಗೆ ವಿಷಭಯದ ಸಂಕಟ ತಪ್ಪುತ್ತದೆ ಎಂದು ಭಕ್ತರಲ್ಲಿ ಬಲವಾದ ನಂಬಿಕೆಯಿದೆ.

ಉಪವಾಸದಿಂದ ಶಕ್ತಿ ಹೆಚ್ಚಾಗಿ ಅದರ ಫಲ ಲಭಿಸುತ್ತದೆ. ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ ಆಗಿರುತ್ತದೆ. ಆದ್ದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಷಿತಗೊಂಡು ಆ ಜೀವಕ್ಕೆ ಇತರ 364 ದಿನಗಳ ಕಾಲ ಉಪಯುಕ್ತವಾಗುತ್ತದೆ.































 
 

ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಶಕ್ತಿ ತತ್ತ್ವ ಪ್ರಾಪ್ತವಾಗುವುದರ ಜತೆಗೆ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ. ಹೊಸ ಬಟ್ಟೆ ಮತ್ತು ಅಲಂಕಾರ ಮಾಡುವುದರಿಂದ ಆನಂದ ಮತ್ತು ಚೈತನ್ಯದ ಲಹರಿಗಳು ಆಕರ್ಷಿಸಲ್ಪಡುತ್ತವೆ.

ನಾಗರಪಂಚಮಿಯಂದು ಸಹೋದರಿಯ ಮೊರೆಯನ್ನು ಈಶ್ವರನು ಆಲಿಸುತ್ತಾನೆ. ಆದ್ದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಪ್ರಾರ್ಥಿಸಬೇಕು. ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ ಎಂದು.

ನಾಗರ ಪಂಚಮಿಯಂದು ಇದನ್ನು ಮಾಡಬಾರದು :

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು. ಈ ದಿನ ಭೂಮಿಯನ್ನು ಅಗೆಯುವುದು ಕೂಡಾ ನಿಷೇಧಿಸಲಾಗಿದೆ. ನಾಗರಪಂಚಮಿಯಂದು ವಾಯುಮಂಡಲದಲ್ಲಿ ನಾಗದೇವತೆಗಳ ತತ್ತ್ವದ ಪ್ರಮಾಣ ಹೆಚ್ಚಿರುತ್ತದೆ. ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತ್ಯಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಚಾಲಹರಿಗಳು ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣ ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಆಚರಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೆಲಸಗಳನ್ನು ಮಾಡುವುದರಿಂದ ಪಾಪ ತಗಲಬಹುದು.

ನಾಗಪೂಜೆಯ ಮಹತ್ವ :

ನಾಗಗಳಲ್ಲಿನ ಶ್ರೇಷ್ಠನಾದ ಅನಂತನೇ. ನಾಗರಪಂಚಮಿಯ ದಿನವನ್ನು ಬಿಟ್ಟು ಇತರ ದಿನಗಳಲ್ಲಿ ನಾಗಗಳಲ್ಲಿ ತತ್ವಗಳು ಅಪ್ರಕಟವಾಗಿರುತ್ತವೆ. ನಾಗರಪಂಚಮಿಯಂದು ತತ್ತ್ವಗಳು ಪ್ರಕರಣ ರೂಪದಲ್ಲಿ ಕಾರ್ಯನಿರತವಾಗುವುದರಿಂದ ಪೂಜಕನಿಗೆ ಲಾಭವಾಗುತ್ತದೆ. ಗಣಪತಿಯ ಹೊಟ್ಟೆಯನ್ನು ಸುತ್ತುವರಿದು ಹಳದಿ ನಾಗ ಎಂದರೆ ಜಾಗೃತ ವಿಶ್ವಕುಂಡಲಿನಿಯ ಪ್ರತೀಕ. ಮನುಷ್ಯರಲ್ಲಿಯೂ ಕುಂಡಲಿನಿಯನ್ನು ನಾಗರೂಪವೆಂದು ಪರಿಗಣಿಸಲಾಗಿದೆ. ನಾಗರಪಂಚಮಿಯಂದು ನಾಗಗಳಿರುವ ಹುತ್ತಗಳಿಗೆ ಪೂಜೆ ಸಲ್ಲಿಸುತ್ತಾರೆ. ಹುತ್ತದಲ್ಲಿ ನಾಗನ ವಾಸವಿರುವುದರಿಂದ ಅಲ್ಲಿಯ ವಾತಾವರಣದಲ್ಲಿಯೂ ಅದರ ಸೂಕ್ಷ್ಮ ಪರಿಣಾಮ ಬೀರುತ್ತದೆ. ಕಶ್ಯಪ ಋಷಿ ಮತ್ತು ಕದ್ರೂ ಇದರಿಂದ ಎಲ್ಲಾ ನಾಗಗಳ ನಿರ್ಮಿತಿಯಾಯಿತು. ಶಿವನು ಎಲ್ಲಾ ನಾಗಗಳ ಅಧಿಪತಿಯಾಗಿದ್ದಾನೆ.

ಅನಂತಂ ವಾಸುಕಿ ಶೇಷಂ ಪದ್ಮನಾಭಂ ಕಂಬಲಂ |

ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ ||

ಅರ್ಥ : ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಬತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top