ಪುತ್ತೂರು ನಗರಸಭೆಯ 61.56ಕೋಟಿ ಬಜೆಟ್ ಮಂಡನೆ | 68 ಲಕ್ಷ ರೂ. ಮಿಗತೆ ಬಜೆಟ್

ಪುತ್ತೂರು: ಪುತ್ತೂರು ನಗರಸಭೆ ಈ ಬಾರಿ 68 ಲಕ್ಷ ರೂ.ಮಿಗತೆ ಬಜೆಟ್ ಅನ್ನು ಮಂಡಿಸಿದ್ದು ಒಟ್ಟು 61.56 ಕೋಟಿ ರೂ. ಗಾತ್ರದ ಬಜೆಟ್ ಇದಾಗಿದೆ ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.

ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಬಜೆಟ್ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

53.24 ಕೋ.ರೂ. ಆದಾಯಕ್ಕೆ ಆರಂಭಿಕ ಶುಲ್ಕ 8.32 ಕೋಟಿ ರೂ.ಸೇರಿ 61.56 ಕೋ.ರೂ.ನಿರೀಕ್ಷಿತ ಆದಾಯ, 60.88 ಕೋ.ರೂ. ಖರ್ಚು ನಿರೀಕ್ಷಿಸಲಾಗಿದೆ.







































 
 

ನಿರೀಕ್ಷಿತ ಆದಾಯ

2023-24ನೇ ಸಾಲಿನಲ್ಲಿ ಸ್ವಂತ ಆದಾಯದಲ್ಲಿ ಆಸ್ತಿ ತೆರಿಗೆ 5.99 ಕೋಟಿ ರೂ., ಕುಡಿಯುವ ನೀರಿನ ಸಂಪರ್ಕ 3.50 ಕೋಟೀ ರೂ., ಬಡಾವಣೆ ಅಭಿವೃದ್ಧಿ ಶುಲ್ಕ 1.50 ಕೋಟಿ ರೂ., ಕಟ್ಟಡ ಪರವಾನಗಿ ಶುಲ್ಕ 50 ಲಕ್ಷ ರೂ., ಉದ್ದಿಮೆ ಪರವಾನಗಿ ಶುಲ್ಕ 55 ಲಕ್ಷ ರೂ., ನೀರಿನ ನಳ್ಳಿ ಜೋಡಣೆ ಶುಲ್ಕದಿಂದ 10 ಲಕ್ಷ ರೂ., ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಶುಲ್ಕದಿಂದ 1.25 ಕೋಟಿ ರೂ., ವಾಣಿಜ್ಯ ಸಂಕೀರ್ಣದ ಬಾಡಿಗೆ 30 ಲಕ್ಷ ರೂ., ಮಾರುಕಟ್ಟೆ ಮತ್ತು ನೆಲ ಬಾಡಿಗೆ 25 ಲಕ್ಷ ರೂ. ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ.

60.88 ಕೋಟಿ ರೂ. ಹಂಚಿಕೆ :

ನಗರಸಭೆಯ ವಾರ್ಡ್‌ಗಳ ರಸ್ತೆ ದುರಸ್ತಿ, ನಿರ್ಮಾಣಕ್ಕೆ 8.50 ಕೋಟಿ ರೂ., ಚರಂಡಿ ರಿಪೇರಿ ಮತ್ತು ನಿರ್ಮಾಣಕ್ಕೆ 3 ಕೋಟಿ ರೂ., ನೀರು ಸರಬರಾಜು ಹಾಗೂ ನಿರ್ವಹಣೆಗೆ 5.01ಕೋಟಿ ರೂ., ಕೆರೆ ಅಭಿವೃದ್ಧಿಗೆ 3.20 ಕೋಟಿ ರೂ., ಆಶ್ರಯ ಬಡವಣೆಗಳ ಅಭಿವೃದ್ಧಿಗೆ 50 ಲಕ್ಷ ರೂ., ಸ್ಮಶಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ 40 ಲಕ್ಷ ರೂ., ಉದ್ಯಾನವನ ನಿರ್ಮಾಣಕ್ಕೆ 1.20 ಕೋಟಿ ರೂ., ನಗರಸಭೆಯ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ., ಘನತ್ಯಾಜ್ಯ ಸಂಸ್ಕರಣಾ ಮತ್ತು ನಿರ್ವಹಣಾ ಘಟಕದ ಅಭಿವೃದಿಗೆ 1 ಕೋಟಿ ರೂ., ದಾರಿ ದೀಪಗಳ ಅಳವಡಿಸಲು ಹಾಗೂ ನಿರ್ವಹಣೆಗೆ 1.43 ಕೋಟಿ ರೂ., ಬನ್ನೂರು ಘನತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗಿರುವ ಹಳೆ ಕಸ ತೆರವಿಗೆ 2 ಕೋ.ರೂ., ಸಣ್ಣ ಸೇತುವೆ-ಮೋರಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 25 ಲಕ್ಷ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಹಂಚಿಕೆ ಮಾಡಲಾಗಿದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ

ನಗರಸಭೆಯ ವಿವಿಧ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಹಾಗೂ ತೆರೆದ ಚರಂಡಿಗಳಲ್ಲಿ ಹರಿಯುವ ಬೂದು ನೀರು ಸಂಸ್ಕರಣೆಗಾಗಿ 40 ಲಕ್ಷ ರೂ., ತ್ಯಾಜ್ಯ ನೀರು ಸಂಸ್ಕರಣೆಗಾಗಿ ಮಲ ಮತ್ತು ಸೆಪ್ಟೇಜ್ ನಿರ್ವಹಣೆಗಾಗಿ 3.50 ಕೋಟಿ ರೂ., ತ್ಯಾಜ್ಯ ನೀರು ಸಂಸ್ಕರಣೆಗಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ 4.17 ಕೋಟಿ ರೂ. ಕಾದಿರಿಸಲಾಗಿದೆ

ಉದ್ಯಮ ಪರವಾನಿಗೆ

ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ಪರವಾನಗಿಗಳ ನವೀಕರಣವನ್ನು ಸರಳಗೊಳಿಸಲು ಎಲ್ಲಾ ಉದ್ದಿಮೆದಾರಿಗೆ ಪರವಾನಗಿಯನ್ನು ಪಡೆಯಲು ಸುಲಭವಾಗುವಂತೆ EASE OF DOING BUSINESS ಅಡಿಯಲ್ಲಿ ವ್ಯಾಪಾರ ತಂತ್ರ್ರಾಂಶದಲ್ಲಿ ಪರವಾನಗಿಯ ಸ್ವಯಂ ನವೀಕರಣವನ್ನು ಜಾರಿಗೆ ತರಲಾಗಿದೆ. ಇದರ ಪ್ರಕಾರ ಉದ್ದಿಮೆದಾರರು ಒಮ್ಮೆಲೆ ಐದು ವರ್ಷದವರೆಗಿನ ಪರವಾನಿಗೆಯನ್ನು ಪಡೆಯಬಹುದಾಗಿದೆ.

ಆರೋಗ್ಯ ಭಾಗ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಘೀ ಸಾಂಕ್ರಾಮಿಕ ರೋಗದ ಪ್ರಕರಣಗಳು ಅತೀ ಹೆಚ್ಚು ಕಂಡು ಬರುವುದರಿಂದ, ನಗರ ವ್ಯಾಪ್ತಿಯಲ್ಲಿ ಮಲೇರಿಯಾ ಹಾಗೂ ಡೆಂಘಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಗರಸಭೆಯ ವತಿಯಿಂದ ಫಾಗಿಂಗ್ ಹಾಗೂ ಮದ್ದು ಸಿಂಪಡಣೆಯ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರಿಗೆ ಮಲೇರಿಯಾ ಹಾಗೂ ಡೆಂಘೀ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಬಗ್ಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹನದ ಮುಖಾಂತರ ಪ್ರಚಾರ ನೀಡಲು ತೀರ್ಮಾನಿಸಲಾಗಿದೆ.

ಶೂನ್ಯತ್ಯಾಜ್ಯ ವಿಲೇವಾರಿ ಘಟಕ

ಹಸಿ-ಕಸ ಹಾಗು ಒಣ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಸ್ವಚ್ಛ ಪುತ್ತೂರು ಟ್ರಸ್ಟ್-ರೋಟರಿ ಕ್ಲಬ್ ಪೂರ್ವ ಇವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ನಗರ ವ್ಯಾಪ್ತಿಯ ಒಣ ತ್ಯಾಜ್ಯವನ್ನು ಬೇರ್ಪಡಿಸಲು ಹಾಗೂ ವೈಜ್ಞಾನಿಕವಾಗಿ ಮರು ಬಳಕೆ ಮಾಡಲು ಮೊದಲನೇಯ ಹಂತದಲ್ಲಿ  ಮೆಟೀರಿಯಲ್ ರಿಕವರಿ ಪೆಸಿಲಿಟಿಯನ್ನು ತೆರೆಯಲಾಗಿದೆ. ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಬಯೋಗ್ಯಾಸ್ ಸ್ಥಾವರವನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದ್ದು ಮುಂದಿನ ದಿನಗಳಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾಡಲು ಕ್ರಮ ವಹಿಸಲು ನಿರ್ಧರಿಸಲಾಗಿದೆ.

ಬಜೆಟ್ ಅನ್ನು ಪ್ರತಿಪಕ್ಷದ ಸದಸ್ಯರುಗಳು ಸ್ವಾಗತಿಸಿ ಸಲಹೆ ಸೂಚನೆ ನೀಡಿದರು. ಸದಸ್ಯರಾದ ಶಕ್ತಿ ಸಿನ್ಹಾ, ಸ್ಥಾಯಿ ಸಮಿತಿ ಅಧ್ಯಕ್ಷ ಚಾಲಚಂದ್ರ ಕೆ., ಉಪಾಧ್ಯಕ್ಷೆ ವಿದ್ಯಾ ಗೌರಿ, ಗೌರಿ ಬನ್ನೂರು, ಜಗನ್ನಿವಾಸ ರಾವ್, ಸುಂದರ ಪೂಜಾರಿ, ಭಾಮೀ ಅಶೋಕ್ ಶೆಣೈ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top