ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ನಾಯಕರ ಹತ್ಯೆಗೆ ಪ್ರತೀಕಾರ ತೀರಿಸಲು ಅಮೆರಿಕದ ಟೆಕ್‌ ಕಂಪನಿಗಳ ಮೇಲೆ ದಾಳಿ ನಡೆಸುವ ಬೆದರಿಕೆ ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕದ ಆಪಲ್, ಗೂಗಲ್ ಮತ್ತು ಮೆಟಾದಂತಹ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ ಮಂಗಳವಾರ ಎಚ್ಚರಿಕೆ ನೀಡಿದೆ. ಏಪ್ರಿಲ್ 1ರ ಟೆಹ್ರಾನ್ ಸಮಯ ರಾತ್ರಿ 8 ರಿಂದ ಪ್ರಾರಂಭವಾಗುವ ಈ ದಾಳಿ ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತೀಕಾರವಾಗಿರುತ್ತದೆ. ಅಮೆರಿಕದ ಕಂಪನಿಗಳು ಘಟಕಗಳು […]

ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ Read More »

ಡ್ರಗ್ಸ್‌ ಸೇವಿಸಿ ಅಸಭ್ಯ ವರ್ತನೆ : ಓರ್ವ ಸೆರೆ

ಬಂಟ್ವಾಳ : ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಬಂಟ್ವಾಳ ಸಜಿಪ ಮೂಡ ನಿವಾಸಿ ಶಾಕೀರ್ (28 ) ಎಂದು ಗುರುತಿಸಲಾಗಿದೆ. ಮಾರ್ಚ್‌ 30ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿಯವರಿಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಕೆಲವು ವ್ಯಕ್ತಿಗಳು ಮಾದಕ ವಸ್ತುವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು

ಡ್ರಗ್ಸ್‌ ಸೇವಿಸಿ ಅಸಭ್ಯ ವರ್ತನೆ : ಓರ್ವ ಸೆರೆ Read More »

ಪತ್ನಿಯ ಟಾರ್ಚರ್‌ ಸುದೀಪ್‌ ರೈ ಸಾವಿಗೆ ಕಾರಣ : ಹೆತ್ತವರ ಆರೋಪ

ಕೊಲೆ ಶಂಕೆ; ಉನ್ನತ ತನಿಖೆಗೆ ಆಗ್ರಹ ಮಂಗಳೂರು : ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಯುವ ಉದ್ಯಮಿ ಸುದೀಪ್ ರೈ ಮದುವೆಯಾದ ಒಂದೇ ತಿಂಗಳಿಗೆ ಕಾರ್ಕಳದಲ್ಲಿರುವ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವು ಪಡದುಕೊಂಡಿದೆ. ಪತ್ನಿ ಸೌಮ್ಯಾ ಶೆಟ್ಟಿಯೇ ಸುದೀಪ್ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿ ಈ ಮೊದಲು ಕೆಲವು ಮದುವೆಯಾಗಿರುವುದು ಬಯಲಾಗಿದೆ. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ

ಪತ್ನಿಯ ಟಾರ್ಚರ್‌ ಸುದೀಪ್‌ ರೈ ಸಾವಿಗೆ ಕಾರಣ : ಹೆತ್ತವರ ಆರೋಪ Read More »

ಅನುಮತಿಯಿಲ್ಲದೆ ಹಾಡು ಬಳಕೆ : ರಕ್ಷಿತ್‌ ಶೆಟ್ಟಿಗೆ 25 ಲ.ರೂ. ದಂಡ

‘ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಬಳಸಿದ ಎರಡು ಹಾಡುಗಳು ಬೆಂಗಳೂರು: ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯಾದ ‘ಪರಂವಾ ಸ್ಟುಡಿಯೋಸ್‌’ಗೆ ದೆಹಲಿ ಹೈಕೋರ್ಟ್ ದೊಡ್ಡ ಮೊತ್ತದ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 25 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಖ್ಯಾತ ಮ್ಯೂಸಿಕ್ ಕಂಪನಿ ‘ಎಂಆರ್‌ಟಿ ಮ್ಯೂಸಿಕ್’ ಈ ದೂರು ದಾಖಲಿಸಿತ್ತು. 2020ರ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು

ಅನುಮತಿಯಿಲ್ಲದೆ ಹಾಡು ಬಳಕೆ : ರಕ್ಷಿತ್‌ ಶೆಟ್ಟಿಗೆ 25 ಲ.ರೂ. ದಂಡ Read More »

ಮೂಡುಬಿದಿರೆ : ಅಪಘಾತಕ್ಕೆ ತಾಯಿ-ಮಗ ಬಲಿ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್‌ ಮೂಡುಬಿದಿರೆ : ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದ ದಾರುಣ ಘಟನೆ ಮೂಡುಬಿದಿರೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಹಾಗೂ ಅವರ ಪುತ್ರ ಸೀನ ಎಂದು ಗುರುತಿಸಲಾಗಿದೆ. ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆ ಬದಿ ನಿಂತಿದ್ದ ಲಾರಿಗೆ ಅವರ ದ್ವಿಚಕ್ರ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ, ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ

ಮೂಡುಬಿದಿರೆ : ಅಪಘಾತಕ್ಕೆ ತಾಯಿ-ಮಗ ಬಲಿ Read More »

ಮಾ.30: ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನೆ

ಪುತ್ತೂರು, ಮಾ. 30: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್ -ಡೈಮಂಡ್ಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಲಾದ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವ ಮಾ.30ರಂದು ಉದ್ಘಾಟನೆಯಾಯಿತು. ಸುಬ್ರಹ್ಮಣ್ಯ ಶ್ರೀಕೃಷ್ಣ ರೆಸಿಡೆನ್ಸಿ ಮಾಲಕಿ ಪ್ರಜ್ಞಾ ಶೆಣೈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಮತ್ತು ನಂಬಿಕೆಯಿಂದ ಜನರ ವಿಶ್ವಾಸಗಳಿಸಿರುವ ಮುಳಿಯ ಜ್ಯುವೆಲ್ಸ್ ಹತ್ತೂರಿನಲ್ಲಿ ಮನೆ ಮಾತಾಗಿದೆ ಎಂದರು. ಗ್ರಾಹಕರ ಆಯ್ಕೆಗೆ ತಕ್ಕಂತೆ ವಿಶಾಲ ಸಂಗ್ರಹ ಹಾಗೂ ಸಿಬಂದಿ ಆತ್ಮೀಯ ಸೇವೆ ಸಂಸ್ಥೆಯ ವಿಶೇಷತೆ ಎಂದರು. ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಾ.30: ಮುಳಿಯ ಡೈಮಂಡ್ ಫೆಸ್ಟ್ ಉದ್ಘಾಟನೆ Read More »

ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ : 8 ಮಹಿಳೆಯರು ಸಾವು

ಚೈತ್ರ ಮಾಸದ ಕೊನೆಯ ಮಂಗಳವಾರದ ಪೂಜೆಗೆ ಸೇರಿದ್ದ ಭಕ್ತರು ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ಮಾತಾ ಮಂದಿರದಲ್ಲಿ ಇಂದು ಭೀಕರ ಕಾಲ್ತುಳಿತಸಂಭವಿಸಿ 8 ಭಕ್ತರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ. ನಳಂದ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದ ಮಾಘ್ರಾ ಗ್ರಾಮದಲ್ಲಿರುವ ಶೀತ್ಲಾಷ್ಟಮಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಭಾರಿ ಸಂಖ್ಯೆಯಲ್ಲಿ ಜನರಿದ್ದ ಕಾರಣ ನೂಕುನುಗ್ಗಲು

ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ : 8 ಮಹಿಳೆಯರು ಸಾವು Read More »

ಇರಾನ್‌ ಮೇಲೆ 907 ಕೆ.ಜಿ. ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ

ಬದ್ರ್‌ ಮಿಲಿಟರಿ ವಾಯುನೆಲೆಯ ಮೇಲೆ ದಾಳಿ ಟೆಹ್ರಾನ್‌ : ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು 907 ಕೆಜಿ ಬಂಕರ್‌ ಬಸ್ಟರ್‌ ಬಾಂಬ್‌ಗಳಿಂದ ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊವೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ. ದಾಳಿಯ ತೀವ್ರತೆಯಿಂದ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಚಿಮ್ಮುವ ದೃಶ್ಯ ವೈರಲ್‌ ಆಗಿದೆ. ಟ್ರಂಪ್ ಈ ವೀಡಿಯೊ ಬಗ್ಗೆ ಯಾವುದೇ ನಿಖರ ಮಾಹಿತಿ ಉಲ್ಲೇಖಿಸಿಲ್ಲ. ಆದರೆ

ಇರಾನ್‌ ಮೇಲೆ 907 ಕೆ.ಜಿ. ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ Read More »

ಯಕ್ಷಗಾನ ಕಲಾರಂಗದ  92ನೇ  ಮನೆ  ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ  ಕುಸುಮಾ ಮತ್ತು ಶ್ರೀ ಕೃಷ್ಣ ಇವರ ಪುತ್ರಿ ಯಜ್ಞ ಇವಳಿಗೆ  ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಮತ್ತು ನಂದಕುಮಾರ್ ಎಸೋಸಿಯೇಟ್ಸ್ ನ ವರಿಷ್ಠರಾದ  ಎಂ. ಗಂಗಾಧರ ರಾವ್  ಪ್ರಾಯೋಜಕತ್ವದಲ್ಲಿ  ನಿರ್ಮಿಸಿದ ನೂತನ ಮನೆ ‘ನಂದಾದೀಪ’ವನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.  ಸ್ವಾಮೀಜಿಯವರು ಅನುಗ್ರಹ ಸಂದೇಶದಲ್ಲಿ ಎಂ.ಗಂಗಾಧರ ರಾವ್ ಅವರುತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಅರ್ಪಿಸಿ ಸಂತೋಷವನ್ನು ಹೊಂದುವ ವಿರಳರಲ್ಲಿ ಒಬ್ಬರು. 

ಯಕ್ಷಗಾನ ಕಲಾರಂಗದ  92ನೇ  ಮನೆ  ಹಸ್ತಾಂತರ Read More »

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ರಾಜ್ಯಾದ್ಯಂತ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.inಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿಯನ್ನು ಪಡೆಯಬಹುದು. ಫಲಿತಾಂಶದ ಜೊತೆಗೆ ಕಾಲೇಜುಗಳಲ್ಲಿಯೂ ಅಂಕಪಟ್ಟಿಗಳನ್ನು ಪ್ರಕಟಿಸಲು ಸೂಚಿಸಲಾಗಿದೆ.

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ Read More »

error: Content is protected !!
Scroll to Top