ಜೈಶ್‌ ಉಗ್ರ ಮಸೂದ್‌ ಅಜರ್‌ ಸಹೋದರ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವು

ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಅನ್ವರ್‌ ಸಾವನ್ನು ಒಪ್ಪಿಕೊಂಡ ಜೈಶ್‌ ನವದೆಹಲಿ: ಸಂಸತ್‌ ಮೇಲಿನ ಉಗ್ರ ದಾಳಿಯ ರೂವಾರಿ ಜೈಶ್‌ ಇ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಸಹೋದರ ಮೊಹಮ್ಮದ್‌ ತಾಹಿರ್‌ ಅನ್ವರ್‌ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾನೆ. ಮಸೂದ್‌ ಅಜರ್‌ನ ಬಳಿಕ ಜೈಶ್‌ ಇ ಮೊಹಮ್ಮದ್‌ ಸಂಘಟನೆಯ ಪ್ರಮುಖ ನಾಯಕನಾಗಿದ್ದ ಅನ್ವರ್‌ನ ಸಾವನ್ನು ಜೈಶ್‌ ಅಧಿಕೃತವಾಗಿ ದೃಢಪಡಿಸಿದೆ. ಬಹವಾಲ್ಪುರದ ಜಾಮಿಯಾ ಮಸ್ಜಿದ್‌ ಉಸ್ಮಾನ ವಾಲಿಯಲ್ಲಿ ಸೋಮವಾರ ತಡರಾತ್ರಿ ಅನ್ವರ್‌ನ ಅಂತ್ಯಕ್ರಿಯೆ ನೇರವೇರಿದೆ ಎಂದು ತನ್ನ ಅಧಿಕೃತ […]

ಜೈಶ್‌ ಉಗ್ರ ಮಸೂದ್‌ ಅಜರ್‌ ಸಹೋದರ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವು Read More »

ಕ್ರಿಕೆಟ್‌ ಆಟದ ವಿವಾದ : ಯುವಕನ ಮೇಲೆ ಕತ್ತಿಯಿಂದ ಹಲ್ಲೆ

ಬೆಳ್ತಂಗಡಿ : ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಡೆದ ವಾಗ್ವಾದವನ್ನು ನೆಪವಾಗಿಸಿ ಯುವಕನ ತಲೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಾ.29ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆಸಿಫ್ (36) ಗಾಯಗೊಂಡವರಾಗಿದ್ದು ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಆರೀಫ್ (25) ಎಂಬಾತ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ‌. ಆರೋಪಿಯನ್ನು

ಕ್ರಿಕೆಟ್‌ ಆಟದ ವಿವಾದ : ಯುವಕನ ಮೇಲೆ ಕತ್ತಿಯಿಂದ ಹಲ್ಲೆ Read More »

ದೆಹಲಿಗೆ ಬರುತ್ತಿದ್ದ ವಿಮಾನದ ಮೇಲೆ ಅಮೆರಿಕ ದಾಳಿ

ಪರಿಹಾರ ಸಾಮಗ್ರಿ ಒಯ್ಯಲು ಬರುತ್ತಿದ್ದ ವಿಮಾನ ಟೆಹ್ರಾನ್ : ಅಮೆರಿಕ ನಡೆಸಿದ ದಾಳಿಯಲ್ಲಿ ದೆಹಲಿಗೆ ಬರುತ್ತಿದ್ದ ಇರಾನಿನ ವಿಮಾನಕ್ಕೆ ಹಾನಿಯಾಗಿದೆ. ಇರಾನ್‌ನ ಮಶಾದ್ ವಿಮಾನ ನಿಲ್ದಾಣದಲ್ಲಿ ಮಹಾನ್ ಏರ್ ವಿಮಾನವು ಅಮೆರಿಕದ ವೈಮಾನಿಕ ದಾಳಿಯಲ್ಲಿ ಹಾನಿಗೊಳಗಾಗಿದೆ. ವರದಿಗಳ ಪ್ರಕಾರ, ವಿಮಾನವು ಪರಿಹಾರ ಸಾಮಗ್ರಿಗಳನ್ನು ಪಡೆಯಲು ನವದೆಹಲಿಗೆ ತೆರಳುತ್ತಿತ್ತು. ಏಪ್ರಿಲ್ 1ರಂದು ಬೆಳಗ್ಗೆ 4 ಗಂಟೆಗೆ ವಿಮಾನ ಆಗಮಿಸಬೇಕಿತ್ತು ಎಂದು ವರದಿಯಾಗಿದೆ. ಈ ಘಟನೆಯು ದೇಶದಲ್ಲಿ ನಾಗರಿಕ ವಿಮಾನ ಯಾನ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಹಾನ್ ಏರ್

ದೆಹಲಿಗೆ ಬರುತ್ತಿದ್ದ ವಿಮಾನದ ಮೇಲೆ ಅಮೆರಿಕ ದಾಳಿ Read More »

ಮೆಸ್ಕಾಂ ಕಚೇರಿಯಲ್ಲಿ ಮಾರಾಮಾರಿ : ಎಇ, ಗ್ರಾಹಕರಿಂದ ಪರಸ್ಪರರ ವಿರುದ್ಧ ದೂರು

ಸುಳ್ಯದಲ್ಲಿ ವಿದ್ಯುತ್‌ ಇಲ್ಲದ ವಿಚಾರವಾಗಿ ಗಲಾಟೆ ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು ಮತ್ತು ಮೆಸ್ಕಾಂ ಎಇ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇತ್ತಂಡಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮೆಸ್ಕಾಂ ಎಇ ಸುಪ್ರೀತ್ ಹಲ್ಲೆ ಮಾಡಿದ್ದಾರೆ ಎಂದು ಗ್ರಾಹಕ ಅಂಬಟಡ್ಕ ನಿವಾಸಿ ಕುಲ್‍ದೀಪ್ ನೀಡಿರುವ ದೂರಿನಲ್ಲಿ ಮಾ.28ರಂದು ಸಂಜೆಯಿಂದ ರವಿವಾರದವರೆಗೆ ಅಂಬೇಟಡ್ಕ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ಇದ್ದುದರಿಂದ ನೆರೆಮನೆಯ ಸಂದೀಪ್ ಅವರ ಜತೆ ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ

ಮೆಸ್ಕಾಂ ಕಚೇರಿಯಲ್ಲಿ ಮಾರಾಮಾರಿ : ಎಇ, ಗ್ರಾಹಕರಿಂದ ಪರಸ್ಪರರ ವಿರುದ್ಧ ದೂರು Read More »

ಕಬಕ ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ 2.91 ಕೋಟಿ ರೂ. : ಕ್ಯಾ.ಬ್ರಿಜೇಶ್‌ ಚೌಟ

ಬೃಹತ್ ಶೆಲ್ಟರ್ ನಿರ್ಮಾಣ; 2 ಲಿಫ್ಟ್‌ ಅಳವಡಿಕೆ ಮಂಗಳೂರು: ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು 2.91 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಯೋಜನೆಯಡಿ ಕಬಕ ಪುತ್ತೂರು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.1ರಲ್ಲಿ 2.91ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಕೇವಲ 531 ಚ. ಮೀಟರ್

ಕಬಕ ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ 2.91 ಕೋಟಿ ರೂ. : ಕ್ಯಾ.ಬ್ರಿಜೇಶ್‌ ಚೌಟ Read More »

12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಗೆಳತಿ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಜಿಗಿದ ಯುವಕ ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಜಿಗಿದು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಕೋಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಎಂದು ಗುರುತಿಸಲಾಗಿದೆ. ಗೆಳತಿಯೊಬ್ಬಳು ವಾಸವಾಗಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಯುವಕ, 12ನೇ ಮಹಡಿ ತೆರಳಿ ಅಲ್ಲಿಂದ ಜಿಗಿದಿದ್ದಾನೆ. ಈತ ಅತ್ತಾವರದ ಪಿಜಿಯೊಂದರಲ್ಲಿ ವಾಸವಾಗಿದ್ದ. ನಗರದ ಖಾಸಗಿ ವೈದ್ಯಕೀಯ ಕಾಲೇಜಿನ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಈತ ಸೋಮವಾರ ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ

12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ Read More »

ದಾಸವಾಳ ಹೂವು ನುಂಗಿ ಮಗು ಸಾವು

ಮೈಸೂರು: ಒಣಗಿದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹೊಸಿಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ ಹೂವನ್ನು ಆರೂವರೆ ತಿಂಗಳ ಮಗು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ. ದೊಡ್ಡಹೆಜ್ಜೂರಿನ ಸುದರ್ಶನ್-ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿ ಗೌಡ ಸಾವನ್ನಪ್ಪಿದ ಮಗು. ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಿಯಿ ಗೌಡ ಮನೆಯ ಹೊಸಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂವಿನ ತುಂಡನ್ನು ಬಾಯಿಗೆ

ದಾಸವಾಳ ಹೂವು ನುಂಗಿ ಮಗು ಸಾವು Read More »

ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಂಯೋಜನೆಯಲ್ಲಿ ಜರಗಿದ ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆ ಸಂದರ್ಭದಲ್ಲಿ ಯಕ್ಷ ಭಾರತಿ ರಿ.ಕನ್ಯಾಡಿ ಸಂಚಾಲಕ, ಭಾಗವತ ಮಹೇಶ್ ಕನ್ಯಾಡಿ ಇವರನ್ನು ಗೌರವಿಸಲಾಯಿತು. ದೇವಳದ ಅರ್ಚಕರಾದ ಸುರೇಶ ಪುತ್ತೂರಾಯ,  ಹಿಮ್ಮೇಳ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಇಳoತಿಲ , ನಿವೃತ ಉಪನ್ಯಾಸಕ-ಅರ್ಥಧಾರಿ ಗಣರಾಜ ಕುಂಬ್ಳೆ, ಯಕ್ಷ ಭಾರತಿ ಖಜಾಂಜಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ

ಭಾಗವತ ಮಹೇಶ ಕನ್ಯಾಡಿ ಅವರಿಗೆ ಗೌರವಾರ್ಪಣೆ Read More »

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಮಾರ್ಚ್ 26ರಂದು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀಮತಿ ಕಲಾವತಿ ಜಯಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ Read More »

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು

ಶಿವಮೊಗ್ಗ : ಲಾರಿಗೆ ಬೈಕ್​ ಡಿಕ್ಕಿಯಾಗಿ ನವದಂಪತಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30) ಮತ್ತು ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಳ ತುಂಬಿದ್ದ ಲಾರಿ ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು,

ಲಾರಿ-ಬೈಕ್‌ ಡಿಕ್ಕಿ : ನವದಂಪತಿ ಸಾವು Read More »

error: Content is protected !!
Scroll to Top