ಮಾನಸಿಕ ಖಿನ್ನತೆ: ವಿಷ ಕುಡಿದು ಯುವಕ ಆತ್ಮಹತ್ಯೆ

ಕಡಬ: ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ‌ನರಳುತ್ತಿದ್ದ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಳಿಕುಕ್ಕುವಿನಲ್ಲಿ ‌ನಡೆದಿದೆ. ಮೃತನನ್ನು ಅಂಬೆಕಲ್ಲು ‌ನಿವಾಸಿ ಕಿಶನ್ ಎ. ಎಚ್.(32) ಎಂದು ಗುರುತಿಸಲಾಗಿದೆ. ಕಿಶನ್ ಕಳೆದ ಎರಡು ವರ್ಷಗಳಿಂದ ಗುತ್ತಿಗಾರಿನ ಸಂಸ್ಥೆಯೊಂದರಲ್ಲಿ ‌ಲೋನ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ಸಮಯದಿಂದ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರ ಸ್ಥಿತಿಗೆ ಕಾರಣ ಏನು ಎನ್ನುವ ಬಗ್ಗೆ ಮನೆಯವರು ವಿಚಾರಣೆ ನಡೆಸಿದರೂ ‌ಸಹ ಯಾವುದೇ ಮಾಹಿತಿಯನ್ನು ಅವರಿಂದ ಪಡೆದುಕೊಳ್ಳಲಾಗುತ್ತಿರಲಿಲ್ಲ ಎಂದು […]

ಮಾನಸಿಕ ಖಿನ್ನತೆ: ವಿಷ ಕುಡಿದು ಯುವಕ ಆತ್ಮಹತ್ಯೆ Read More »

ಪುತ್ತೂರು ಜಾತ್ರಾ ಪ್ರಯುಕ್ತ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಗ್ರಾಮಾಂತರ ಭಾಗದ ಭಕ್ತರ ಅನುಕೂಲಕ್ಕಾಗಿ KSRTC ಯು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ವರ್ಷ ಪುತ್ತೂರು ಜಾತ್ರೆಯ ವಿಶೇಷ ದಿನಗಳಂದು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಭಕ್ತರಿಗೆ ಒದಗಿಸಿ ಕೊಡುವಂತೆಯೇ ಈ ಬಾರಿಯೂ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಒದಗಿಸಿ ಕೊಡಲಿದೆ. ಎ. 16 ರಂದು ನಡೆಯುವ ಕೆರೆ ಉತ್ಸವಕ್ಕೆ, ಎ. 17 ರಥೋತ್ಸವದ ‌ಸಂದರ್ಭಗಳನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರ ಅನುಕೂಲಕ್ಕೆ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಸಂಸ್ಥೆ

ಪುತ್ತೂರು ಜಾತ್ರಾ ಪ್ರಯುಕ್ತ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ Read More »

ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ: ಚಾಲಕ ಸಾವು

ಬೆಳ್ತಂಗಡಿ: ನಾಯಿಯೊಂದು ಅಡ್ಡ ಬಂದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಆಸ್ರತ್ರೆಗೆ ಸಾಗಿಸುವ ದಾರಿಯಲ್ಲೇ ‌ಮೃತಪಟ್ಟ ಘಟನೆ ಆಳದಂಗಡಿಯಲ್ಲಿ ‌ನಡೆದಿದೆ. ನಾವರ ಗ್ರಾಮದ ಹಾರಡ್ಡೆ ನಿವಾಸಿ ದೇವಪ್ಪ ಯಾನೆ ಸುಧಾಕರ (37) ಎಂಬವರೇ ಮೃತ ದುರ್ದೈವಿ. ಗುರುವಾಯನಕೆರೆಯಿಂದ ಆಳದಂಗಡಿ ಕಡೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ಚಾಲಕ ಸುಧಾಕರ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಅರ್ಧ ದಾರಿಯಲ್ಲೇ ಅವರು

ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ: ಚಾಲಕ ಸಾವು Read More »

ಉಗ್ರ ಅಮೀರ್ ಹಮ್ಜಾ ಮೇಲೆ ಲಾಹೋರಿನಲ್ಲಿ ಗುಂಡಿನ ದಾಳಿ

ಲಾಹೋರ್: ಉಗ್ರ ಸಂಘಟನೆ ಲಷ್ಕರ್ ಎ ತೈಬಾದ ಸ್ಥಾಪಕ ಸದಸ್ಯ ಅಮೀರ್ ಹಮ್ಜಾ‌ನನ್ನು ಅಪರಿಚಿತ ಬಂದೂಕುಧಾರಿಗಳು ಲಾಹೋರಿನಲ್ಲಿ ಗುಂಡಿಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉಗ್ರ ಹಮ್ಜಾ‌ನ ಮೇಲೆ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ದಾಳಿ ನಡೆಸಿರುವುದಾಗಿದೆ. ತೀವ್ರ ಗಾಯಗಳಾದ ಪರಿಣಾಮ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈತ ಭಾರತದ ವಿರುದ್ಧವೂ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದಾತ ಎಂದು ತಿಳಿದು ಬಂದಿದೆ. ಅಮೀರ್ ಹಮ್ಮಾ ಅಫಘಾನ್ ಮುಜಾಹಿದ್ದೀನ್‌ನ ಹಿರಿಯ ಸದಸ್ಯ. ತನ್ನ

ಉಗ್ರ ಅಮೀರ್ ಹಮ್ಜಾ ಮೇಲೆ ಲಾಹೋರಿನಲ್ಲಿ ಗುಂಡಿನ ದಾಳಿ Read More »

ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ತಾಪಮಾನ ಏರಿಕೆ

ಬೆಂಗಳೂರು: ಬಿಸಿಲಿನ ಧಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮುಂದಿನ ಐದು ದಿನಗಳ ಕಾಲ ಕರ್ನಾಟಕದ 16 ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಎ. 16 – 20 ರ ವರೆಗೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, ಆದ್ದರಿಂದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ,

ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ತಾಪಮಾನ ಏರಿಕೆ Read More »

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ

ಅಲುಂಬುಡ: 2026ನೆ ಸಾಲಿನ ಎವಿಜಿ ಸಾಪ್ತಾಹಿಕ ಬೇಸಿಗೆ ಶಿಬಿರವು ಏಪ್ರಿಲ್ 16ರಂದು ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ವರ್ಣರಂಜಿತವಾಗಿ ಸಮಾಪನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾರತ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರಿನ ಗಾನಕೋಗಿಲೆ, ಸಾವಿರಾರು ಗಾಯನ ಕಂಠಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಗಾನಸಿರಿ ಖ್ಯಾತಿಯ ಡಾ. ಕಿರಣ್ ಕುಮಾರ್ ಅವರು ಮಾತನಾಡಿ ಮಾತಾಪಿತರನ್ನು ಗೌರವಿಸುವವರು ಜೀವನದಲ್ಲಿ ಸೋತಿಲ್ಲ ಎಂದರು. ಅಂತಹ ಸಂಸ್ಕಾರ ಈ ಎವಿಜಿ ಶಾಲೆಯಲ್ಲಿ ಸಿಗುತ್ತಿದೆ. ಎವಿಜಿ ಕಲಾ

ಎವಿಜಿ ಶಾಲೆಯಲ್ಲಿ ಯಶಸ್ವಿ ಬೇಸಿಗೆ ಶಿಬಿರ ಸಂಪನ್ನ Read More »

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ

ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ವಿದ್ಯಾರ್ಥಿನಿ ಶ್ರೇಷ್ಠ ಶೆಟ್ಟಿ ಎಣ್ಮೂರುಗುತ್ತು ಅವರು ಸಿಬಿಎಸ್‌ಸಿ‌ ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ, ಕೀರ್ತಿ ತಂದಿರುತ್ತಾರೆ. ಇವರು ಎಣ್ಮೂರುಗುತ್ತು ರಘುಪ್ರಸಾದ್ ‌ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿ ಪುತ್ರಿ.

ಶ್ರೇಷ್ಠ ಶೆಟ್ಟಿ ಅವರಿಗೆ CBSC ಹತ್ತನೇ ತರಗತಿ ಪರೀಕ್ಷೆಯಲ್ಲಿ 96.20% ಅಂಕ Read More »

ಕಾರ್ಪೊರೇಟ್‌ ಲವ್‌ ಜಿಹಾದ್‌ ” ನಾಸಿಕ್‌ನ ಟಿಸಿಎಸ್‌ ಸಂಸ್ಥೆಗೆ ಬೀಗ

ಹಿಂದೂ ಉದ್ಯೋಗಿಗಳನ್ನು ಆಮಿಷವೊಡ್ಡಿ, ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನಿಸಿದ ಪ್ರಕರಣ ನಾಸಿಕ್: ಲವ್‌ ಜಿಹಾದ್‌, ಮತಾಂತರ ಮತ್ತು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಭಾರತದ ಪ್ರತಿಷ್ಠಿತ ಟಾಟಾ ಸಮೂಹದ ದೈತ್ಯ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ. ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್

ಕಾರ್ಪೊರೇಟ್‌ ಲವ್‌ ಜಿಹಾದ್‌ ” ನಾಸಿಕ್‌ನ ಟಿಸಿಎಸ್‌ ಸಂಸ್ಥೆಗೆ ಬೀಗ Read More »

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ

ಮೂರು ದಿನ ಹಲವು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಏಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭೇಟಿ, ಕೆರೆ ಉತ್ಸವ, ತೆಪ್ಪೋತ್ಸವ ಹಾಗೂ ಏಪ್ರಿಲ್ 17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ, ಏಪ್ರಿಲ್ 18 ರಂದು ದೇವರು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ಹೋಗಲಿದ್ದು, ಈ ವೇಳೆ ಸಾವಿರಾರು ಜನ ಭಕ್ತಾದಿಗಳು ಸೇರುವ ನಿರೀಕ್ಷೆಯಿರುತ್ತದೆ. ಪುತ್ತೂರು ಪರಿಸರವು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು

ಪುತ್ತೂರು ಜಾತ್ರೆ : ಮದ್ಯ ಮಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ Read More »

ಕೊಲೆ ಪ್ರಕರಣದಲ್ಲಿ ಅಪರಾಧಿ : ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಭವಿಷ್ಯ ಇಂದು ನಿರ್ಧಾರ

2 ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿರುವ ವಿನಯ್‌ ಕುಲಕರ್ಣಿ ಬೆಂಗಳೂರು : ಸುಮಾರು 10 ವರ್ಷಗಳ ಹಿಂದೆ ನಡೆದ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅಪರಾಧಿ ಎಂದು ತೀರ್ಪು ನೀಡಿರುವುದಿರಂದ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಯನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ.

ಕೊಲೆ ಪ್ರಕರಣದಲ್ಲಿ ಅಪರಾಧಿ : ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಭವಿಷ್ಯ ಇಂದು ನಿರ್ಧಾರ Read More »

error: Content is protected !!
Scroll to Top